• Home  
  •   ಬ್ರಹ್ಮ ಬೈದರ್ಕಳ ನಗರ ಬಡಾವಣೆ ನಿವಾಸಿಗಳ ಸಂಘದ ಸಭೆ
- ಕರಾವಳಿ - ವ್ಯವಹಾರ

  ಬ್ರಹ್ಮ ಬೈದರ್ಕಳ ನಗರ ಬಡಾವಣೆ ನಿವಾಸಿಗಳ ಸಂಘದ ಸಭೆ

Share:   ಬ್ರಹ್ಮ ಬೈದರ್ಕಳ ನಗರ ಬಡಾವಣೆ ನಿವಾಸಿಗಳ ಸಂಘದ ಸಭೆ ಉಡುಪಿ: ಮಹಾಸಭೆ ಜುಲೈ 23 ರಂದು ಶ್ರೀ ವೀರಭದ್ರ ಕಲಾ ಭವನ, ಕಿನ್ನಿ ಮುಲ್ಕಿ ಇಲ್ಲಿ ಜರಗಿತು.  ಉಡುಪಿ ನಗರಸಭೆ ಸದಸ್ಯೆ ಶ್ರೀಮತಿ ಅಮೃತ ಕೃಷ್ಣಮೂರ್ತಿ ಆಚಾರ್ಯ ರವರು ಇವರು ಅಧ್ಯಕ್ಷತೆ ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ, ಬಡಾವಣೆಯನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸರಕಾರದ ಅನುದಾನದಿಂದ ಪ್ರಯತ್ನ ಮಾಡಲಾಗುವುದು ಎಂದರು.   ಬಡಾವಣೆಯ ನಿವಾಸಿಗಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು […]

  ಬ್ರಹ್ಮ ಬೈದರ್ಕಳ ನಗರ ಬಡಾವಣೆ ನಿವಾಸಿಗಳ ಸಂಘದ ಸಭೆ

ಉಡುಪಿ: ಮಹಾಸಭೆ ಜುಲೈ 23 ರಂದು ಶ್ರೀ ವೀರಭದ್ರ ಕಲಾ ಭವನ, ಕಿನ್ನಿ ಮುಲ್ಕಿ ಇಲ್ಲಿ ಜರಗಿತು.

 ಉಡುಪಿ ನಗರಸಭೆ ಸದಸ್ಯೆ ಶ್ರೀಮತಿ ಅಮೃತ ಕೃಷ್ಣಮೂರ್ತಿ ಆಚಾರ್ಯ ರವರು ಇವರು ಅಧ್ಯಕ್ಷತೆ ವಹಿಸಿದ್ದರು.

ಅವರು ಈ ಸಂದರ್ಭ ಮಾತನಾಡಿ, ಬಡಾವಣೆಯನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸರಕಾರದ ಅನುದಾನದಿಂದ ಪ್ರಯತ್ನ ಮಾಡಲಾಗುವುದು ಎಂದರು.

  ಬಡಾವಣೆಯ ನಿವಾಸಿಗಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅನಾರೋಗ್ಯದಿಂದ ಆರ್ಥಿಕ ಸಂಕಷ್ಟದಲ್ಲಿರುವ ಬಡಾವಣೆಯ ನಿವಾಸಿಗೆ ಸಂಘದ ವತಿಯಿಂದ ಸಹಾಯಧನ ವಿತರಿಸಲಾಯಿತು.

  ಅಧ್ಯಕ್ಷರಾದ  ವಿಜಯ್ ಕುಮಾರ್ ಇವರು ಸ್ವಾಗತಿಸಿದರು. ಸಂಘದ ಜೊತೆ ಕಾರ್ಯದರ್ಶಿ ಶ್ರೀಮತಿ ಪುಷ್ಪಲತಾ ತಂತ್ರಿ  ವರದಿ ವಾಚಿಸಿದರು. ಕೋಶಾಧಿಕಾರಿ ಗುಣ ಪಾಲ್ ರವರು ಲೆಕ್ಕಪತ್ರ ಮಂಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಶಂಕರ್ ಯು ರವರು  ವಂದಿಸಿದರು.

2023- 24ನೇ ಸಾಲಿನ ನೂತನ ಅಧ್ಯಕ್ಷರಾಗಿ ಸುಧೀರ್ ಕುಮಾರ್ ರವರು ಆಯ್ಕೆಯಾದರು.

ಸಂಘದ  ಸದಸ್ಯರಿಗೆ ವಿವಿಧ ಸ್ಪರ್ಧೆ ಜರಗಿಸಿ ಬಹುಮಾನ ವಿತರಿಸಲಾಯಿತು.

ಶ್ರೀಮತಿ ಪುಷ್ಪಲತಾ ರಂಜನ್ ಅವರು ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.