• Home  
  • ಮಂಗಳೂರು: ಡೆತ್ ನೋಟ್ ಬರೆದಿಟ್ಟು ವಸತಿ ಸಂಕೀರ್ಣದಿಂದ ಜಿಗಿದು ಉದ್ಯಮಿ ಆತ್ಮಹತ್ಯೆಗೆ ಶರಣು
- ಅಪರಾಧ

ಮಂಗಳೂರು: ಡೆತ್ ನೋಟ್ ಬರೆದಿಟ್ಟು ವಸತಿ ಸಂಕೀರ್ಣದಿಂದ ಜಿಗಿದು ಉದ್ಯಮಿ ಆತ್ಮಹತ್ಯೆಗೆ ಶರಣು

Share:  ಡೆತ್ ನೋಟ್ ಬರೆದಿಟ್ಟು ವಸತಿ ಸಂಕೀರ್ಣದಿಂದ ಜಿಗಿದು ಉದ್ಯಮಿ ಆತ್ಮಹತ್ಯೆಗೆ ಶರಣು  ಮಂಗಳೂರು: ತಾನು ವಾಸವಿದ್ದ ಅಪಾರ್ಟ್‌ಮೆಂಟಿನ  17ನೆ ಮಹಡಿಯಿಂದ ಜಿಗಿದು ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೆಂದೂರ್ ವೆಲ್ ನಲ್ಲಿ ನಡೆದಿದೆ.  ಕ್ವಾರಿ ಉದ್ಯಮಿ ಹಾಗೂ ಬಿಲ್ಡರ್ ಆಗಿರುವ 62 ವರ್ಷದ   ಮೋಹನ್ ಅಮೀನ್ ಎಂಬವರೇ ಈ ರೀತಿಯಾಗಿ ಆತ್ಮಹತ್ಯೆಗೆ ಶರಣಾಗಿರುವ ಉದ್ಯಮಿಯಾಗಿದ್ದಾರೆ.   ತನ್ನ ಮನೆಯಿಂದ ಹೊರಗಡೆ ಹೋಗಿದ್ದ ಮೋಹನ್ ಅವರು ಬಳಿಕ ತಮ್ಮ ‍ಫ್ಲ್ಯಾಟ್ ಇರುವ ಅಟ್ಲಾಂಟಿಕ್ ಅಪಾರ್ಟ್ಮೆಂಟ್ ಗೆ ಬಂದು […]

 ಡೆತ್ ನೋಟ್ ಬರೆದಿಟ್ಟು ವಸತಿ ಸಂಕೀರ್ಣದಿಂದ ಜಿಗಿದು ಉದ್ಯಮಿ ಆತ್ಮಹತ್ಯೆಗೆ ಶರಣು

 ಮಂಗಳೂರು: ತಾನು ವಾಸವಿದ್ದ ಅಪಾರ್ಟ್‌ಮೆಂಟಿನ  17ನೆ ಮಹಡಿಯಿಂದ ಜಿಗಿದು ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೆಂದೂರ್ ವೆಲ್ ನಲ್ಲಿ ನಡೆದಿದೆ.

 ಕ್ವಾರಿ ಉದ್ಯಮಿ ಹಾಗೂ ಬಿಲ್ಡರ್ ಆಗಿರುವ 62 ವರ್ಷದ   ಮೋಹನ್ ಅಮೀನ್ ಎಂಬವರೇ ಈ ರೀತಿಯಾಗಿ ಆತ್ಮಹತ್ಯೆಗೆ ಶರಣಾಗಿರುವ ಉದ್ಯಮಿಯಾಗಿದ್ದಾರೆ.

  ತನ್ನ ಮನೆಯಿಂದ ಹೊರಗಡೆ ಹೋಗಿದ್ದ ಮೋಹನ್ ಅವರು ಬಳಿಕ ತಮ್ಮ ‍ಫ್ಲ್ಯಾಟ್ ಇರುವ ಅಟ್ಲಾಂಟಿಕ್ ಅಪಾರ್ಟ್ಮೆಂಟ್ ಗೆ ಬಂದು ಬಳಿಕ ಅಲ್ಲಿಂದ 17ನೇ ಮಹಡಿಗೆ ಹೋಗಿ ಏಕಾಏಕಿ ಕೆಳಕ್ಕೆ ಜಿಗಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 ಘಟನೆಯ ತೀವ್ರತೆಗೆ ಮೋಹನ್ ಅವರ ತಲೆಭಾಗ ಸಂಪೂರ್ಣವಾಗಿ ಛಿದ್ರಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

‘ವಿಜಯವಾಹಿನಿʼಎಂಬ ಹೆಸರಿನಲ್ಲಿ ಮೋಹನ್ ಅವರು ಟಿಪ್ಪರ್, ಕ್ವಾರಿ ಮತ್ತು ಜಲ್ಲಿಕಲ್ಲು ಉದ್ಯಮವನ್ನು ನಡೆಸುತ್ತಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲೂ ಹೆಸರು ಮಾಡಿದ್ದ ಇವರ ಕಚೇರಿ ಮಲ್ಲಿಕಟ್ಟೆಯಲ್ಲಿ ಕಾರ್ಯಾಚರಿಸುತ್ತಿತ್ತು.

‘ನನ್ನನ್ನು ಕ್ಷಮಿಸಿ..’

ಆತ್ನಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿಟ್ಟದ್ದ ಮೋಹನ್ ಅವರು ಅದರಲ್ಲಿ ‘ನನ್ನ ಸಾವಿಗೆ ನಾನೇ ಕಾರಣ, ನನ್ನನ್ನು ಕ್ಷಮಿಸಿ’ ಎಂದು ಬರೆದಿದ್ದು ಇದು ತನ್ನ ಪತ್ನಿ ಮತ್ತು ಮಕ್ಕಳನ್ನು ಉದ್ದೇಶಿಸಿ ಬರೆದಿರುವುದು ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.