ಮಲ್ಪೆ ಬಂದರಿನಲ್ಲಿ ಸಮುದ್ರಕ್ಕೆ ಬಿದ್ದಿದ್ದ 1.5 ಲಕ್ಷದ ಮೌಲ್ಯದ ಐಫೋನ್ ಹುಡುಕಿ ಕೊಟ್ಟ ಮುಳುಗುತಜ್ಞ ಈಶ್ವರ್ ಮಲ್ಪೆ
ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನ ಬೇಸಿನ್‌ನಲ್ಲಿ ಹೂಳು ತುಂಬಿಕೊಂಡಿದ್ದು ಕಾಲು ಜಾರಿ ಬಿದ್ದ ಮನುಷ್ಯನ ಮೃತದೇಹವೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಮುಳುಗುತಜ್ಞ ಈಶ್ವರ್ ಮಲ್ಪೆ ಅವರು ಅಂತಹ ಅಪಾಯಕಾರಿ ಬೇಸಿನ್‌ಗೆ ಧುಮುಕಿ 1.5 ಲಕ್ಷ ರೂ. ಮೌಲ್ಯದ ಐ-ಫೋನ್ ಮೊಬೈಲ್ ಹುಡುಕಿ ಮೇಲೆ ತಂದಿದ್ದಾರೆ.
ಇಂದು ಬೆಳಗ್ಗೆ ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ವ್ಯಾಪಾರಿಯೊಬ್ಬರ 1.5 ಲಕ್ಷ ರೂ. ಮೌಲ್ಯದ ಐ-ಫೋನ್ ಮೊಬೈಲ್ ಜೆಟ್ಟಿ ಬಳಿ ಬೇಸಿನ್‌ನ ನೀರಿಗೆ ಬಿದ್ದಿತ್ತು. ಮೊಬೈಲ್ ಕಳೆದುಕೊಂಡು ಚಿಂತಿತರಾದ ಅವರು ಬೇರೆಯವರ ಸಹಾಯದಿಂದ ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ತತ್ಕ್ಷಣ ಧಾವಿಸಿ ಬಂದ ಈಶ್ವರ್, ನೀರಿನ ಆಳದಲ್ಲಿ ಹುಡುಕಾಟ ನಡೆಸಿ ಪತ್ತೆಹಚ್ಚಿ ಮೊಬೈಲ್‌ನ್ನು ಹೊರತೆಗೆದು ವಾರೀಸುದಾರರಿಗೆ ನೀಡಿದರು.
ನೆರೆದಿದ್ದ ಜನ ಈಶ್ವರ್ ಮಲ್ಪೆ ಅವರ ಚಾಕಚಕ್ಯತೆಯನ್ನು ಶ್ಲಾಘಿಸಿದರು.
