ಸಾಸ್ತಾನ ಸಹಕಾರಿ ವ್ಯಾವಸಾಯಿಕ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸುರೇಶ್ ಅಡಿಗ ಆಯ್ಕೆ
ಕೋಟ: ಸಾಸ್ತಾನ ಸಹಕಾರಿ ವ್ಯಾವಸಾಯಿಕ ಸಂಘದ ಆಡಳಿತ ಮಂಡಳಿಯ
ಅಧ್ಯಕ್ಷರಾಗಿ ಸುರೇಶ್ ಅಡಿಗ, ಉಪಾಧ್ಯಕ್ಷರಾಗಿ ಗೋವಿಂದ ಪೂಜಾರಿ ಅವಿರೋಧ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ 13 ಸ್ಥಾನಗಳಲ್ಲಿ 12 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 6, ಕಾಂಗ್ರೆಸ್ ಬೆಂಬಲಿತ 5, ಓರ್ವ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದು, ಎಸ್ಟಿ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧ ಆಯ್ಕೆಗೊಂಡಿದ್ದು ಇದರಿಂದ ಬಿಜೆಪಿ 6, ಕಾಂಗ್ರೆಸ್ 6, ಓರ್ವ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲಗೊಂಡಿತ್ತು.
ಆದರೆ ಆ.10 ರಂದು ನಡೆದ ನೂತನ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುರೇಶ್ ಅಡಿಗ ಅವರಿಗೆ ಬಿಜೆಪಿ ಬೆಂಬಲ ಸೂಚಿಸಿತು ಹಾಗೂ ಬಿಜೆಪಿ ಬೆಂಬಲಿತ ಗೋವಿಂದ ಪೂಜಾರಿಯವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

