• Home  
  • ಪುತ್ತೂರಿನಲ್ಲಿ ಆಸ್ಪತ್ರೆಯ ಕರ್ತವ್ಯ ಲೋಪ ಆರೋಪ:  ಆಸ್ಪತ್ರೆ ಮುಂದೆ ಯುವಕನ ಮೃತದೇಹ ಇಟ್ಟು ಪ್ರತಿಭಟನೆ
- ಅಪರಾಧ

ಪುತ್ತೂರಿನಲ್ಲಿ ಆಸ್ಪತ್ರೆಯ ಕರ್ತವ್ಯ ಲೋಪ ಆರೋಪ:  ಆಸ್ಪತ್ರೆ ಮುಂದೆ ಯುವಕನ ಮೃತದೇಹ ಇಟ್ಟು ಪ್ರತಿಭಟನೆ

Share: ಪುತ್ತೂರಿನಲ್ಲಿ ಆಸ್ಪತ್ರೆಯ ಕರ್ತವ್ಯ ಲೋಪ ಆರೋಪ:  ಆಸ್ಪತ್ರೆ ಮುಂದೆ ಯುವಕನ ಮೃತದೇಹ ಇಟ್ಟು ಪ್ರತಿಭಟನೆ ಪುತ್ತೂರು; ಶಸ್ತ್ರಚಿಕಿತ್ಸೆಗೆ ದಾಖಲಾದ ಬಾಲಕನ ಸಾವಿಗೆ ಆಸ್ಪತ್ರೆಯೇ ಕಾರಣ ಎಂದು ಬಾಲಕನ ಮೃತದೇಹ ಆಸ್ಪತ್ರೆಯ ಮುಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಶಾಂತಿನಗರ ನಿವಾಸಿ ಸಂಜೀವ ಎಂಬವರ ಪುತ್ರ ಶ್ರೀಜಿತ್(17) ಮೃತಪಟ್ಟ ಬಾಲಕ.  ಈತನನ್ನು ಕಳೆದ ಶನಿವಾರ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರವಿವಾರ ಆತನಿಗೆ ಪುತ್ತೂರಿನಲ್ಲಿ ಶಸ್ತ್ರ ಚಿಕಿತ್ಸೆ […]

ಪುತ್ತೂರಿನಲ್ಲಿ ಆಸ್ಪತ್ರೆಯ ಕರ್ತವ್ಯ ಲೋಪ ಆರೋಪ:  ಆಸ್ಪತ್ರೆ ಮುಂದೆ ಯುವಕನ ಮೃತದೇಹ ಇಟ್ಟು ಪ್ರತಿಭಟನೆ

ಪುತ್ತೂರು; ಶಸ್ತ್ರಚಿಕಿತ್ಸೆಗೆ ದಾಖಲಾದ ಬಾಲಕನ ಸಾವಿಗೆ ಆಸ್ಪತ್ರೆಯೇ ಕಾರಣ ಎಂದು ಬಾಲಕನ ಮೃತದೇಹ ಆಸ್ಪತ್ರೆಯ ಮುಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಶಾಂತಿನಗರ ನಿವಾಸಿ ಸಂಜೀವ ಎಂಬವರ ಪುತ್ರ ಶ್ರೀಜಿತ್(17) ಮೃತಪಟ್ಟ ಬಾಲಕ.

 ಈತನನ್ನು ಕಳೆದ ಶನಿವಾರ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ರವಿವಾರ ಆತನಿಗೆ ಪುತ್ತೂರಿನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಆತನ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನಲೆಯಲ್ಲಿ ಸೋಮವಾರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಬಾಲಕ ಮೃತಪಟ್ಟಿದ್ದ.

ಪುತ್ತೂರಿನ ವೈದ್ಯರ ನಿರ್ಲಕ್ಷ್ಯದ ಕಾರಣದಿಂದಾಗಿ ಆತ ಸಾವನ್ನಪ್ಪಿರುವುದಾಗಿ ಆರೋಪಿಸಿ ಮಂಗಳವಾರ ಸಂಜೆ
ಬಾಲಕನ ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಯಿಂದ ತಂದು ಪುತ್ತೂರಿನ ಆಸ್ಪತ್ರೆಯ ಮುಂಭಾಗದಲ್ಲಿ ಇರಿಸಿ ಪ್ರತಿಭಟನೆ ನಡೆಸಲಾಗಿದೆ.

ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ರೂ.25 ಲಕ್ಷ ಪರಿಹಾರ ಘೋಷಣೆ ಮಾಡಬೇಕು.ವೈದ್ಯರನ್ನು ಬಂಧಿಸಬೇಕೆಂದು ಆಗ್ರಹಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.