ಪುತ್ತೂರಿನಲ್ಲಿ ಆಸ್ಪತ್ರೆಯ ಕರ್ತವ್ಯ ಲೋಪ ಆರೋಪ: ಆಸ್ಪತ್ರೆ ಮುಂದೆ ಯುವಕನ ಮೃತದೇಹ ಇಟ್ಟು ಪ್ರತಿಭಟನೆ
ಪುತ್ತೂರಿನಲ್ಲಿ ಆಸ್ಪತ್ರೆಯ ಕರ್ತವ್ಯ ಲೋಪ ಆರೋಪ: ಆಸ್ಪತ್ರೆ ಮುಂದೆ ಯುವಕನ ಮೃತದೇಹ ಇಟ್ಟು ಪ್ರತಿಭಟನೆ ಪುತ್ತೂರು; ಶಸ್ತ್ರಚಿಕಿತ್ಸೆಗೆ ದಾಖಲಾದ ಬಾಲಕನ ಸಾವಿಗೆ ಆಸ್ಪತ್ರೆಯೇ ಕಾರಣ ಎಂದು ಬಾಲಕನ ಮೃತದೇಹ ಆಸ್ಪತ್ರೆಯ ಮುಂದಿಟ್ಟು ಪ್ರತಿಭಟನೆ ನಡೆಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಶಾಂತಿನಗರ ನಿವಾಸಿ ಸಂಜೀವ ಎಂಬವರ ಪುತ್ರ ಶ್ರೀಜಿತ್(17) ಮೃತಪಟ್ಟ ಬಾಲಕ. ಈತನನ್ನು ಕಳೆದ ಶನಿವಾರ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ರವಿವಾರ ಆತನಿಗೆ ಪುತ್ತೂರಿನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. […]


