• Home  
  • ಕಾಪು ಫ್ಲೈಓವರ್ ಬಳಿ ನಿಲ್ಲಿಸಿದ್ದ ಬೈಕ್‌ ಕಳ್ಳತನದ  ಆರೋಪಿ ಯನ್ನು ಬಂಧಿಸಿದ ಪಣಂಬೂರು ಪೋಲೀಸರು
- ಅಪರಾಧ

ಕಾಪು ಫ್ಲೈಓವರ್ ಬಳಿ ನಿಲ್ಲಿಸಿದ್ದ ಬೈಕ್‌ ಕಳ್ಳತನದ  ಆರೋಪಿ ಯನ್ನು ಬಂಧಿಸಿದ ಪಣಂಬೂರು ಪೋಲೀಸರು

Share: ಕಾಪು ಫ್ಲೈಓವರ್ ಬಳಿ ನಿಲ್ಲಿಸಿದ್ದ ಬೈಕ್‌ ಕಳ್ಳತನದ  ಆರೋಪಿ ಯನ್ನು ಬಂಧಿಸಿದ ಪಣಂಬೂರು ಪೋಲೀಸರು ಕಾಪು: ಕಾಪು ಫ್ಲೈಓವರ್ ಬಳಿ ನಿಲ್ಲಿಸಿದ್ದ ಬೈಕ್‌ನ್ನು ಕಳವುಗೈದಿರುವ ಆರೋಪಿ  ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ೩೨ ವರ್ಷದ ಅಹಮದ್ ನಿನಾನ್ ಯಾನೆ ಚಿನ್ನು   ಎಂಬಾತನನ್ನು ಕಾಪು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುರತ್ಕಲ್ ಸುಲ್ತಾನ್ ಜ್ಯುವೆಲ್ಲರ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಹೇರೂರು ನಿವಾಸಿ ಚೇತನ್ ಆಚಾರ್ಯ ಅವರು ಕಾಪು ಫ್ಲೈ ಓವರ್ ಪಾರ್ಕಿಂಗ್ ಸ್ಥಳದಲ್ಲಿ   ತನ್ನ ಬೈಕ್ ನಿಲ್ಲಿಸಿ ಕೆಲಸಕ್ಕೆಂದು ತೆರಳಿದ್ದರು. […]

ಕಾಪು ಫ್ಲೈಓವರ್ ಬಳಿ ನಿಲ್ಲಿಸಿದ್ದ ಬೈಕ್‌ ಕಳ್ಳತನದ  ಆರೋಪಿ ಯನ್ನು ಬಂಧಿಸಿದ ಪಣಂಬೂರು ಪೋಲೀಸರು

ಕಾಪು: ಕಾಪು ಫ್ಲೈಓವರ್ ಬಳಿ ನಿಲ್ಲಿಸಿದ್ದ ಬೈಕ್‌ನ್ನು ಕಳವುಗೈದಿರುವ ಆರೋಪಿ  ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ೩೨ ವರ್ಷದ ಅಹಮದ್ ನಿನಾನ್ ಯಾನೆ ಚಿನ್ನು   ಎಂಬಾತನನ್ನು ಕಾಪು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸುರತ್ಕಲ್ ಸುಲ್ತಾನ್ ಜ್ಯುವೆಲ್ಲರ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಹೇರೂರು ನಿವಾಸಿ ಚೇತನ್ ಆಚಾರ್ಯ ಅವರು ಕಾಪು ಫ್ಲೈ ಓವರ್ ಪಾರ್ಕಿಂಗ್ ಸ್ಥಳದಲ್ಲಿ   ತನ್ನ ಬೈಕ್ ನಿಲ್ಲಿಸಿ ಕೆಲಸಕ್ಕೆಂದು ತೆರಳಿದ್ದರು.

  ವಾಪಾಸು ಬಂದು ನೋಡಿದಾಗ ಬೈಕ್ ಕಾಣೆಯಾಗಿತ್ತು. ಚೇತನ್ ಆಚಾರ್ಯ ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ  ತನ್ನ ಬೈಕ್ ಕಳ್ಳವಾಗಿದೆ ಎಂದು ದೂರು ನೀಡಿದ್ದರು.

  ಪಣಂಬೂರು ಪೊಲೀಸರು ಬೈಕ್ ಕಳ್ಳ ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಹಮದ್ ನಿನಾನ್ ಯಾನೆ ಚಿನ್ನು ಎಂಬಾತನನ್ನು ಬಂಧಿಸಿದ್ದು ತನಿಖೆಯ ವೇಳೆ ಆರೋಪಿಯು ತಾನು ಕಾಪುವಿನಲ್ಲೂ ಬೈಕ್ ಕಳವು ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದನು.

ಈ ಬಗ್ಗೆ ಪಣಂಬೂರು ಪೊಲೀಸರು ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದು ಕಾಪು ಕ್ರೈಂ ಎಸ್ಸೈ ಪುರುಷೋತ್ತಮ್ ಅವರು ಮೇಲಾಧಿಕಾರಿಗಳ ಮಾರ್ಗದರ್ಶನದಂತೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಬಳಿಕ ಬೈಕ್ ಕಳವು ನಡೆಸಿರುವ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದರು.

ತನಿಖೆಯ ಬಳಿಕ ಆರೋಪಿಯನ್ನು ಮತ್ತೆ ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕಾಪು ಪೊಲೀಸ್ ಮೂಲಗಳು ತಿಳಿಸಿವೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.