ಸುರತ್ಕಲ್ ಸಮೀಪ ಜೆಸಿಬಿ ಬಳಸಿ ಎಟಿಎಂ ಕಳವು ಯತ್ನ; ಶಿವಮೊಗ್ಗ ಜಿಲ್ಲೆಯ 4 ಮಂದಿ ಆರೋಪಿಗಳ ಬಂಧನ

ಸುರತ್ಕಲ್: ಜೆಸಿಬಿ ಬಳಸಿ ಎಟಿಎಂ ಮೆಷಿನ್ ಕಳವು ಮಾಡಲು ಪ್ರಯತ್ನಿಸಿದ ಅಂತರ್ ಜಿಲ್ಲಾ ಕಳ್ಳರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 15.50 ಲಕ್ಷ ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.
4 ರಂದು ಸುರತ್ಕಲ್ ಇಡ್ಯಾ ಗ್ರಾಮದ ವಿದ್ಯಾದಾಯಿನಿ ಇಂಗ್ಲೀಷ್ ಮೀಡಿಯಂ ಶಾಲೆಯ ಎದುರುಗಡೆ ರಾಜಶ್ರೀ ಕಟ್ಟಡದಲ್ಲಿರುವ ದಿ ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ರೋಹಿತ್ ಅವರಿಗೆ ಬೆಳಿಗ್ಗೆ 2:13 ಗಂಟೆಗೆ ಸಿಸಿಟಿವಿ ಸೆಂಟ್ರಲ್ ಟೀಂ ನಿಂದ ದೂರುವಾಣಿ ಕರೆ ಬಂದ ಮೇರೆಗೆ ಅವರು ಬ್ಯಾಂಕಿನ ಎಟಿಎಂ ಬಳಿಗೆ ಬಂದು ನೋಡಿದಾಗ ಎಟಿಎಂ ನ ಮುಂಭಾಗದ ಗಾಜನ್ನು ಒಡೆದು ಎಟಿಎಂ ಮೆಷಿನ್ ನ್ನು ಕಳವು ಮಾಡಲು ಪ್ರಯತ್ನಿಸಿದ್ದರು.
ಕೆಳ ಮಹಡಿಗೆ ಬೀಳಿಸಿ ಹೋಗಿರುವುದು ಕಂಡು ಬಂದಿದ್ದು, ಈ ‘ಕೃತ್ಯವನ್ನು ಯಾರೋ ಕಳ್ಳರು ದಿನಾಂಕ 04-08-2023 ರಂದು ಬೆಳಿಗ್ಗೆ 02:00 ಗಂಟೆಯಿಂದ ಬೆಳಿಗ್ಗೆ 02:13 ಗಂಟೆಯ ಒಳಗೆ ಜೆಸಿಬಿಯನ್ನು ಬಳಸಿ ಐಟಿಎಂನ ಮುಂಭಾಗದ ಗ್ಲಾಸ್ ನ್ನು ಒಡೆದು ಎಟಿಎಂ ಮೆಸ್ ನ್ನು ಕಳವು ಮಾಡಲು ಪ್ರಯತ್ನಿಸಿದ್ದರು.
ಈ ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಹಾಗೂ ಡಿಸಿಪಿಗಳಾದ ಅಂತ ಕುಮಾರ್, ದಿನೇಶ್ ಕುಮಾರ್ ಮತ್ತು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಮನೋಜ್ ಕುಮಾರ್ ನಾಯ್ಡು ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಹೇಶ್ ಪ್ರಸಾದ್ರವರ ನೇತೃತ್ವದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ರಘು ನಾಯ್ಕ ಅರುಣ್ ಕುಮಾರ್ ಡಿ ಮತ್ತು ಎ.ಎಸ್.ಐ ರಾಧಾಕೃಷ್ಣ, ಹೆಚ್.ಸಿ ಉಮೇಶ್ ಕೊಟ್ಟಾರಿ, ಹೆಚ್.ಸಿ ಅಣ್ಣಪ್ಪ ಎಂಡ್ರೆ ಪಿಸಿ ಕಾರ್ತಿಕ್ ಕುಲಾಲ್, ಪಿ.ಸಿ, ಸುನೀಲ್, ಕುಸುನಾಳ ರವರುಗಳು ಈ ಪ್ರಕರಣದ ತನಿಖೆ ಕೈಗೊಂಡು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಐಒಸಿಎಲ್ ಕಡೆಯಿಂದ ಜೋಕಟ್ಟೆ ಕಡೆಗೆ ಹೋಗುವ ರಸ್ತೆಯಲ್ಲಿ ಜೆಸಿಬಿಯನ್ನು ಪತ್ತೆ ಮಾಡಿದ್ದಾರೆ.
ಜೆಸಿಬಿ ಯ ಅಂದಾಜು ಮೌಲ್ಯವು 15 ಲಕ್ಷ ಆಗಿರ ಬಹುದೆಂದು ಅಂದಾಜಿಸಲಾಗಿದೆ.
ಈ ಜೆಸಿಬಿಯು ಪಡುಬಿದ್ರೆ ಪೊಲೀಸ್ ಠಾಣಾ ಸರಹದ್ದಿನಿಂದ ಕಳವಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಎಸ್.ಐ ರಘು ನಾಯಕ ರವರು ಸಿಬ್ಬಂದಿಗಳೊಂದಿಗೆ ಆರೋಪಿ ಪತ್ತೆಯ ಬಗ್ಗೆ ತೆರಳಿ ಆ. 15ರಂದು ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ಶಿಕಾರಿಪುರ ತಾಲೂಕಿನ ದೇವರಾಜ್ (24), ಭರತ್ ಎಚ್. (20), ನಾಗರಾಜ ನಾಯ್ಕ ಯಾನೆ ನಾಗು(21) ಹಾಗೂ
ಈ ಕೃತ್ಯಕ್ಕೆ ಧನಸಹಾಯ ಮಾಡಿದ ಆರೋಪದ ಮೇರೆಗೆ ಧನರಾಜ್ ನಾಯ್ಕ( 22) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಸುಮಾರು 50,000/- ಮೌಲ್ಯದ ಹೀರೋ ಸ್ಪೆಂಡರ್ ಬೈಕ್ ಹಾಗೂ 2 ಆಂಡ್ರಾಯ್ಡ್ ಮೊಬೈಲುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಪೂರ್ವ ಅಪರಾಧ ಚರಿತ್ರೆಯುಳ್ಳವರಾಗಿದ್ದು, ಆರೋಪಿಗಳ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ.
ಆರೋಪಿಗಳನ್ನು ಒಂದನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 1 ರಿಂದ 3ನೇ ಆರೋಪಿತರುಗಳಿಗೆ 4 ದಿವಸಗಳ ಪೊಲೀಸ್ ಕಸ್ಟಡಿ ಹಾಗೂ 4ನೇ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

