ಬಹಳಷ್ಟು ಜನ ಬಿಜೆಪಿಯಿಂದ ಕಾಂಗ್ರೆಸ್ಗೆ ಬರಲಿದ್ದಾರೆ : ಜಗದೀಶ್ ಶೆಟ್ಟರ್
ಮಣಿಪಾಲ: ರಾಜ್ಯದಲ್ಲಿ ಆಪರೇಷನ್ ಹಸ್ತ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಸ್ಪೋಟಕ ಹೇಳಿಕೆ ನೀಡಿದ್ದು, ಬಹಳಷ್ಟು ಜನ ಬಿಜೆಪಿಯಿಂದ ಕಾಂಗ್ರೆಸ್ಗೆ ಬರಲಿದ್ದಾರೆ ಎಂದು ಹೇಳಿದ್ದಾರೆ.
ಮಣಿಪಾಲಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಜಗದೀಶ್ ಶೆಟ್ಟರ್ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ತುಂಬಾ ಜನ ಬಿಜೆಪಿ ನಾಯಕರು ನನಗೆ ಫೋನ್ ಮಾಡಿ ತಮ್ಮ ಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ನಾಯಕರೇ ಇಲ್ಲ. ನಮಗೆ ಗೈಡ್ ಮಾಡಲು ಯಾರೂ ಕೂಡ ಇಲ್ಲ ಎಂದು ತಮ್ಮ ಆಳಲು ತೋಡಿಕೊಳ್ಳುತ್ತಿದ್ದಾರೆ.
ನಾನು ಮಾತ್ರ ನನ್ನ ಮನಸ್ಸಿನಲ್ಲಿದ್ದುದನ್ನು ಹೊರಗೆ ಹಾಕಿದ್ದೇನೆ. ಆದರೆ ಅವರೆಲ್ಲ ಸಾಕಷ್ಟು ನೊಂದಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್ಗೆ ಬಂದರೆ ಅದನ್ನು ಆಪರೇಷನ್ ಹಸ್ತ ಎಂದು ಕರೆಯಲು ಆಗುವುದಿಲ್ಲ. ಯಾಕೆಂದರೆ ಅವರೆಲ್ಲ ಸ್ವ ಇಚ್ಚೆಯಿಂದ ಕಾಂಗ್ರೆಸ್ ಗೆ ಸೇರುವವರು ಎಂದು ಹೇಳಿದ್ದಾರೆ.
