• Home  
  •   ಇರಾ: ಮನೆಗೆ ಕಳ್ಳರು ನುಗ್ಗಿ‌ನಗ, ನಗದು‌ ಕಳವು
- ಅಪರಾಧ

  ಇರಾ: ಮನೆಗೆ ಕಳ್ಳರು ನುಗ್ಗಿ‌ನಗ, ನಗದು‌ ಕಳವು

Share:    ಇರಾ: ಮನೆಗೆ ಕಳ್ಳರು ನುಗ್ಗಿ‌ನಗ, ನಗದು‌ ಕಳವು   ಬಂಟ್ವಾಳ:  ಇಲ್ಲಿಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರಾ ಗ್ರಾಮದ ನಿವಾಸಿ ಅಬ್ದುಲ್ ಹಮೀದ್ ಅವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು  ಕಳವುಗೈದ ಘಟನೆ  ನಡೆದಿದೆ. ಅಬ್ದುಲ್ ಹಮೀದ್ ಅವರು ಶನಿವಾರ ರಾತ್ರಿ ಮನೆಗೆ ಬೀಗ ಹಾಕಿ ಅತ್ತೆ ಮನೆಗೆ ತೆರಳಿದ್ದರು. ಭಾನುವಾರ ವಾಪಾಸ್   ಮನೆಗೆ ಬಂದಾಗ ಮನೆಯ ಹಿಂದಿನ ಬಾಗಿಲು ತೆರೆದ ಸ್ಥಿತಿಯಲ್ಲಿ ಕಂಡುಬಂದಿದ್ದು, ಅನುಮಾನಗೊಂಡು‌ ಮನೆಯೊಳಗೆ […]

   ಇರಾ: ಮನೆಗೆ ಕಳ್ಳರು ನುಗ್ಗಿ‌ನಗ, ನಗದು‌ ಕಳವು

  ಬಂಟ್ವಾಳ:  ಇಲ್ಲಿಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರಾ ಗ್ರಾಮದ ನಿವಾಸಿ ಅಬ್ದುಲ್ ಹಮೀದ್ ಅವರ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು  ಕಳವುಗೈದ ಘಟನೆ  ನಡೆದಿದೆ.


ಅಬ್ದುಲ್ ಹಮೀದ್ ಅವರು ಶನಿವಾರ ರಾತ್ರಿ ಮನೆಗೆ ಬೀಗ ಹಾಕಿ ಅತ್ತೆ ಮನೆಗೆ ತೆರಳಿದ್ದರು. ಭಾನುವಾರ ವಾಪಾಸ್   ಮನೆಗೆ ಬಂದಾಗ ಮನೆಯ ಹಿಂದಿನ ಬಾಗಿಲು ತೆರೆದ ಸ್ಥಿತಿಯಲ್ಲಿ ಕಂಡುಬಂದಿದ್ದು, ಅನುಮಾನಗೊಂಡು‌ ಮನೆಯೊಳಗೆ ಪರಿಶೀಲನೆ ನಡೆಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ.

 ಮನೆಯೊಳಗಿನ ಕಪಾಟಿನಲ್ಲಿದ್ದ 1.12 ಲಕ್ಷ ರೂಪಾಯಿ ಮೌಲ್ಯದ 4 ಪವನ್ ತೂಕದ ಚಿನ್ನದ ನೆಕ್ಲಸ್ ಹಾಗೂ 11 ಸಾವಿರ ರೂಪಾಯಿ ನಗದು ಕಳವಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.