• Home  
  • ಮುದರಂಗಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳ ಮೀನು ಮಾರುಕಟ್ಟೆ ಈಗ ನಾಯಿಗಳ ವಾಸಸ್ಥಾನ
- Uncategorised

ಮುದರಂಗಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳ ಮೀನು ಮಾರುಕಟ್ಟೆ ಈಗ ನಾಯಿಗಳ ವಾಸಸ್ಥಾನ

Share: ಮುದರಂಗಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳ ಮೀನು ಮಾರುಕಟ್ಟೆ ಈಗ ನಾಯಿಗಳ ವಾಸಸ್ಥಾನ ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಎದುರು ನಿರ್ಮಾಣಗೊಂಡಿರುವ ಅತ್ಯಾಧುನಿಕ ಸೌಲಭ್ಯಗಳ ಮೀನು ಮಾರುಕಟ್ಟೆ ಈಗ ನಾಯಿಗಳ ವಾಸಸ್ಥಾನವಾಗಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 57 ಲಕ್ಷ ಮತ್ತು ವಿಧಾನ ಪರಿಷತ್ ಸದಸ್ಯರಾಗಿದ್ದ ಐವನ್ ಡಿಸೋಜರವರ ಅನುದಾನದ ಮೂರು ಲಕ್ಷ ರೂ ಸೇರಿ ಒಟ್ಟು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಆಧುನಿಕ ಮೀನು  ಮಾರುಕಟ್ಟೆಯನ್ನು 03-10-2015ರಲ್ಲಿ ಆಗಿನ ಸಚಿವರಾಗಿದ್ದ ವಿನಯ್ ಕುಮಾರ್ ಸೊರಕೆ ಮತ್ತು ಮುದರಂಗಡಿಯ […]

ಮುದರಂಗಡಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳ ಮೀನು ಮಾರುಕಟ್ಟೆ ಈಗ ನಾಯಿಗಳ ವಾಸಸ್ಥಾನ

ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ಎದುರು ನಿರ್ಮಾಣಗೊಂಡಿರುವ ಅತ್ಯಾಧುನಿಕ ಸೌಲಭ್ಯಗಳ ಮೀನು ಮಾರುಕಟ್ಟೆ ಈಗ ನಾಯಿಗಳ ವಾಸಸ್ಥಾನವಾಗಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 57 ಲಕ್ಷ ಮತ್ತು ವಿಧಾನ ಪರಿಷತ್ ಸದಸ್ಯರಾಗಿದ್ದ ಐವನ್ ಡಿಸೋಜರವರ ಅನುದಾನದ ಮೂರು ಲಕ್ಷ ರೂ ಸೇರಿ ಒಟ್ಟು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಆಧುನಿಕ ಮೀನು  ಮಾರುಕಟ್ಟೆಯನ್ನು 03-10-2015ರಲ್ಲಿ ಆಗಿನ ಸಚಿವರಾಗಿದ್ದ ವಿನಯ್ ಕುಮಾರ್ ಸೊರಕೆ ಮತ್ತು ಮುದರಂಗಡಿಯ ಅಧ್ಯಕ್ಷರಾಗಿದ್ದ ಡೇವಿಡ್‌ ಡಿಸೋಜಾರವರ ಮುತುವರ್ಜಿಯಿಂದ ನಿರ್ಮಿಸಲಾಗಿತ್ತು.

ಈಗ ಆ ಮಾರುಕಟ್ಟೆಯು ಪಾಳು ಬಿದ್ದಿದ್ದು, ಮೀನುಗಾರರು ಮಾರು ಕಟ್ಟೆಯಲ್ಲಿ ಮೀನಿನ ವ್ಯಾಪಾರ ಮಾಡದೆ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ.

 ಈ ಬಗ್ಗೆ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ಶ್ರೀಮತಿ ಸುಶೀಲ ಅವರನ್ನು  ಪ್ರಶ್ನಿಸಿದಾಗ, ಮಾರುಕಟ್ಟೆಯಲ್ಲಿ ಮೀನು ಖರೀದಿಸಲು ಯಾರು ಬರುವುದಿಲ್ಲ. ಪಕ್ಕದಲ್ಲಿಯೇ ಎಲ್ಲೂರು ಗ್ರಾಮ ಪಂಚಾಯತ್ ನ ಪರವಾನಿಗೆಯಲ್ಲಿ ಸ್ಥಳೀಯರೋರ್ವರು ಮೀನು ಮಾರಾಟ ಮಾಡುತ್ತಿದ್ದಾರೆ. ಅಲ್ಲಿ ವಾಸ್ತು ದೋಷ ಇದ್ದು, ವ್ಯಾಪಾರವೂ ಆಗುತ್ತಿಲ್ಲ. ನಾವು ಅಲ್ಲಿ ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.

 ಈ ಬಗ್ಗೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರಲ್ಲಿ ವಿಚಾರಿಸಿದಾಗ, ನಾನು ಸಚಿವನಾಗಿದ್ದಾಗ 60 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದೇನೆ. ಕೆಲವೊಂದು ತಾಂತ್ರಿಕ ತೊಂದರೆಯಿಂದ ಮೀನುಗಾರರು ಮೀನು ಮಾರುಕಟ್ಟೆಯಲ್ಲಿ ಮೀನು ಮಾರುವುದಿಲ್ಲ. ಆದಷ್ಟು ಶೀಘ್ರ ಸಮಸ್ಯೆ ಬಗ್ಗೆ ಹರಿಯಬಹುದು ಎಂದರು.

 ಮುದರಂಗಡಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಮುತ್ತುರವರಲ್ಲಿ ಈ ಬಗ್ಗೆ ವಿಚಾರಿಸಿದಾಗ, ನಾವು ಹಲವಾರು ಬಾರಿ ರಸ್ತೆ ಬದಿಯಲ್ಲಿ ಮೀನು ಮಾರಾಟ  ಮಾಡಬಾರದು ಮಾರುಕಟ್ಟೆಯಲ್ಲಿಯೇ ಮಾರಾಟ ಮಾಡಿ ಎಂದು ಹೇಳಿದ್ದೇವೆ. ಆದರೂ ಮೀನು ಮಾರಾಟಗಾರರು ಮಾರುಕಟ್ಟೆಗೆ ಬರುತ್ತಿಲ್ಲ. ಹೊಸ ಅಧ್ಯಕ್ಷರು ಬಂದ ನಂತರ ನಾವು ಮೀನುಗಾರರ ಮನವೊಲಿಸಲು ಪ್ರಯತ್ನ ಮಾಡುತ್ತೇವೆ ಎಂದರು.

  60 ಲಕ್ಷ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ  ಸೌಲಭ್ಯ ಇರುವ ಮೀನು ಮಾರುಕಟ್ಟೆ ಈಗ ಊಟಕ್ಕೆ ಇಲ್ಲದ ಉಪ್ಪಿನಕಾಯಿ ಯಂತಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.