ಪಡುಬಿದ್ರಿ: ಟ್ಯಾಂಕರ್- ಸ್ಕೂಟರ್ ಅಪಘಾತ -ಗಂಭೀರ ಗಾಯಗೊಂಡಿದ್ದ ಸಹ ಸವಾರ ಮೃತ್ಯು
ಪಡುಬಿದ್ರಿ: ಹೆಜಮಾಡಿ ಕನ್ನಂಗಾರಿನಲ್ಲಿ ರಶಹೆ ೬೬ರಲ್ಲಿ ಸ್ಕೂಟರ್ ಮತ್ತು ಟ್ಯಾಂಕರ್ ಮಧ್ಯೆ ನಡೆದ ಅಪಘಾತದಲ್ಲಿ ಸ್ಕೂಟರ್ನ ಸಹ ಸವಾರ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.
ಮೃತ ಯುವಕ ಜಾರ್ಖಂಡ್ ಮೂಲದ ಹೆಜಮಾಡಿ ಬ್ರಹ್ಮಸ್ಥಾನ ಬಳಿ ಬಾಡಿಗೆ ಮನೆಯೊಂದರ ನಿವಾಸಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಸದ್ದಾಂ ಅನ್ಸಾರಿ (20).
ಸ್ಕೂಟರ್ ಸವಾರ ಪರ್ವೇಜ್ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ತಮ್ಮ ಮನೆಯಿಂದ ಪಡುಬಿದ್ರಿ ಕಡೆಗೆ ಸ್ಕೂಟರ್ ನಲ್ಲಿ ಬರುತ್ತಿದ್ದು, ಹೆಜಮಾಡಿ ಒಳ ರಸ್ತೆಯಿಂದ ಹೆದ್ದಾರಿಗೆ ಎಂಟ್ರಿ ಕೊಡುತ್ತಿದ್ದಂತೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ಗೆ ಡಿಕ್ಕಿಯಾಗಿದೆ.
ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

