21ವರ್ಷದ ಗರ್ಭಿಣಿ ಮಹಿಳೆಯ ಗುಂಡಿಟ್ಟು ಹತ್ಯೆ ; ಅಮೇರಿಕಾ ಪೊಲೀಸರ ಕೃತ್ಯ
ವಾಷಿಂಗ್ಟನ್ ; ಕಳ್ಳತನದ ಆರೋಪದಲ್ಲಿ 21 ವರ್ಷದ ಗರ್ಭಿಣಿ ಮಹಿಳೆಯನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದ ಘಟನೆ ಅಮೆರಿಕದ ಓಹಿಯೊ ರಾಜ್ಯದಲ್ಲಿ ನಡೆದಿದೆ.
ವೆಸ್ಟರ್ವಿಲ್ಲೆಯಲ್ಲಿನ ಕಿರಾಣಿ ಅಂಗಡಿಯ ಬಳಿ ಟಾಕಿಯಾ ಯಂಗ್ ಎಂಬ ಗರ್ಭಿಣಿ ಕಾರಿನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದ ಪೊಲೀಸರು ಆಕೆಯನ್ನು ತಡೆದಿದ್ದಾರೆ.
ಮಹಿಳೆ ಅಂಗಡಿಯಿಂದ ಮದ್ಯದ ಬಾಟಲಿಗಳನ್ನು ಕದ್ದಿರುವುದಾಗಿ ಅಂಗಡಿಯವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆಗೆ ಬಂದಿದ್ದು, ಮಹಿಳೆ ಇದನ್ನು ನಿರಾಕರಿಸಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾಳೆ.
ಬಳಿಕ ಪೊಲೀಸರ ಮೇಲೆ ಕಾರನ್ನು ಚಲಾಯಿಸಲು ಯತ್ನಿಸಿದ್ದಾಳೆಂದು ಆರೋಪಿಸಿ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಆದರೆ ಇದನ್ನು ನಿರಾಕರಿಸುವ ಮಹಿಳೆಯ ಕುಟುಂಬದವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

