ಕರಾವಳಿಯ ತಿಂಡಿಯಲ್ಲಿ ಅಷ್ಠಮಿ ಮೂಡೆ ವಿಶೇಷ: ಅದಮಾರಿನ ಲತಾರಿಂದ ಮೂಡೆ ತಯಾರಿ
ಉಡುಪಿ: ಯಾವುದೇ ಹಬ್ಬಹರಿದಿನಗಳು ಬಂತೆಂದರೆ ತಿಂಡಿ ತಿನಿಸುಗಳಿಗೂ ಪ್ರಾಮುಖ್ಯವಿದೆ. ಅಂತೆಯೇ ಆಯಾಯ ಹಬ್ಬಗಳಂದು ಕೆಲವೊಂದು ತಿನಿಸುಗಳನ್ನು ಮಾಡುವ ಮೂಲಕ ಜನರು ಹಬ್ಬದೂಟವನ್ನು ಸವಿಯುತ್ತಾರೆ.
ಕರಾವಳಿಯಲ್ಲಿ ಜನರು ವಿಶೇಷವಾಗಿ ಅಷ್ಟಮಿಯಂದು ಮೂಡೆಯನ್ನು ತಯಾರಿಸುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮಹತ್ವ ಇದೆ. ಮೂಡೆ ತಯಾರಿಕೆಯು ಒಂದು ಕಲೆಯಾಗಿದ್ದು. ಎಲ್ಲರಿಗೂ ಒಗ್ಗುವಂತದ್ದಲ್ಲ. ಆದರೆ ಎರ್ಮಾಳು ಮೂಡಬೆಟ್ಟು ಲತಾ ಕುಮಾರ್ ರವರು ಅಷ್ಟಮಿ ಬಂತೆಂದರೆ ಕಾರ್ಯನಿರತರಾಗಿರುತ್ತಾರೆ. ಇವರು ಅಷ್ಟಮಿ ಮಾತ್ರವಲ್ಲದೆ ಇತರೆ ದಿನಳಲ್ಲೂ ಯಾರಿಗಾದರೂ ಮೂಡೆ ಬೇಕಾದಲ್ಲಿ ಮಾಡಿಕೊಡುತ್ತಾರೆ. ಹಿಂದೆ ಮೂಡೆ ಗರಿಗಳಿಗಾಗಿ ಅಲೆಯ ಬೇಕಿತ್ತು. ಅದಕ್ಕಾಗಿ ಮನೆಯ ಸಮೀಪವೇ ಮೂಡೆಯ ಗರಿಗಳನ್ನು ನೆಟ್ಟು ಅದರಿಂದ ಬೇಕಾದ ಗರಿಗಳನ್ನು ತೆಗೆದು ಬೆಂಕಿ ತಾಗಿಸಿ ಹದಮಾಡಿ ಮುಳ್ಳನ್ನು ತೆಗೆಯುತ್ತಾರೆ. ತದನಂತರ ಅದನ್ನು ಮಡಚಿ ಅದಕ್ಕೆ ಬೇಕಾದಲ್ಲಿ ಮುಳ್ಳನ್ನು ಸಿಕ್ಕಿಸಲಾಗುತ್ತದೆ. ಆ ಮೂಲಕ ಸಣ್ಣ ಮತ್ತು ದೊಡ್ಡದಾದ ಮೂಡೆ ತಯಾರಾಗುತ್ತದೆ.
ಕರಾವಳಿಯ ಅಷ್ಠಮಿ ಮತ್ತು ಚೌತಿಯಂದು ಮೂಡೆ ಬೇಕೇಬೇಕು.
