ಬಹು ನಿರೀಕ್ಷೆಯ ‘ಗಂಟ್ ಕಲ್ವೆರ್’ ತುಳು ಚಿತ್ರ : ಡಿಸೆಂಬರ್ 21 ರಂದು ತೆರೆಗೆ
ಮಂಗಳೂರು: ತುಳು ಚಿತ್ರ ರಸಿಕರಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಸುಧಾಕರ ಬನ್ನಂಜೆ ನಿರ್ದೇಶನ “ಗಂಟ್ ಕಲ್ವೆರ್” ತುಳು ಚಿತ್ರ ಇದೇ ವರ್ಷ ದ ಕೊನೆಯಲ್ಲಿ ಅಂದರೆ ಡಿಸೆಂಬರ್ 21 ರಂದು ವಿಶ್ವದಾದ್ಯಂತ ಏಕ ಕಾಲದಲ್ಲಿ ಬಿಡುಗಡೆ ಗೊಳ್ಳಲಿದೆ.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜತೆಗೆ ಮಡಿಕೇರಿ ಸಕಲೇಶಪುರ, ತೀರ್ಥಹಳ್ಳಿ, ಮೂಡಿಗೆರೆ ಬೆಂಗಳೂರು ಮುಂಬಯಿ, ಚೆನೈ, ಹೈದರಾಬಾದ್, ದೆಹಲಿ ಜತೆಗೆ ಗಲ್ಫ್ ದೇಶಗಳಲ್ಲದೆ ತುಳುವರು ಅಧಿಕ ವಾಗಿರುವ ಇತರ ದೇಶಗಳಲ್ಲಿ ಬಿಡುಗಡೆಗೆ ತಯಾರಿನಡೆಸುತ್ತಿದೆ.
ತುಳು ಚಿತ್ರ ರಂಗದ ಇತಿಹಾಸದಲ್ಲಿ ಮೊದಲ ಬಾರಿಗೆ ಸುಮಾರು ಇನ್ನೂರಕ್ಕೂ ಅಧಿಕ ಕಲಾವಿದರು ಇದರಲ್ಲಿ ನಟಿಸಿದ್ದಾರೆ.
ಖ್ಯಾತ ಕಲಾವಿದರ ಜತೆ ಬಹಳಷ್ಟು ಹೊಸ ಮುಖಗಳು ಸಹ ತೆರೆಯಲ್ಲಿ ಮಿಂಚಲಿವೆ.
ಆರ್ಯನ್ ಹರ್ಷ ಶೆಟ್ಟಿ ಮತ್ತು ಸ್ಮಿತಾ ಸುವರ್ಣ ನಾಯಕ ನಾಯಕಿ ಆಗಿರು ಈ ಚಿತ್ರ ದಲ್ಲಿ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಉಮೇಶ್ ಮಿಜಾರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಸುಂದರ ರೈ ಮಂದಾರ, ರವಿ ಸುರತ್ಕಲ್, ವಸಂತ ಮುನಿಯಾಲ್, ಪ್ರಶಾಂತ್ ಎಳ್ಳಂಪಳಿ, ಜೀವನ ಉಲ್ಲಾಳ್ , ತಮ್ಮ ಲಕ್ಷಣ, ಪ್ರದೀಪ್ ಆಳ್ವ, ಚೇತಕ್ ಪೂಜಾರಿ, ಮಂಗೇಶ್ ಭಟ್ ವಿಟ್ಲ, ಶೇಖರ ಪಾಂಗಾಳ, ಕಿರಣ್, ಅನೀಶ್, ಸಂದೀಪ್, ಸುದೇಶ್, ಸತೀಶ್, ಭುವನೇಶ್ ಪ್ರಭು, ಸುರೇಶ್ ಯು.ಪಿ. ಪ್ರಭಾಕರ ಆಚಾರ್ಯ, ಅಶೋಕ್, ರಮಾನಂದ ಕೆರ್ಪೆ, ಧನಂಜಯ, ಸುಧೀರ್, ಬಾಬಣ್ಣ ಹಾಗೂ ಇನ್ನೂ ಅನೇಕ ಪ್ರತಿಭೆಗಳು ಹಾಸ್ಯದ ಹೊನಲು ಹರಿಸಿದ್ದಾರೆ.
ದಿವಂಗತ ಕಾರ್ಕಳ ಶೇಖರ ಭಂಡಾರಿ ಅವರು ಪ್ರಧಾನ ಪಾತ್ರ ಒಂದರಲ್ಲಿ ನಟಿಸಿದ್ದಾರೆ
ಅಥರ್ವ ಪ್ರಕಾಶ್, ಪ್ರಭವ್ ಹೆಗ್ಡೆ, ಶೈಲೇಶ್, ಶ್ರೀಕಾಂತ್, ಇವರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ದೇವೆರ್ ಖ್ಯಾತಿಯ ಸುಧೀರ್ ಕೊಠಾರಿ, ಗಿರೀಶ್ ಎಂ ಶೆಟ್ಟಿ ಕಟೀಲು, ನಾಗೇಶ್ ಡಿ ಶೆಟ್ಟಿ ಮೂಡುಬಿದಿರೆ, ಸಂಪತ್ ಕೈಕಂಬ,ಕ್ಲಾ ಡಿ ಡಿಲೀಮಾ, ಮೋಹನ ಕೊಪ್ಪಳ ರಾಜಾರಾಂ ಶೆಟ್ಟಿ ಉಪ್ಪಳ, ನಮಿತಾ ಕೂಳೂರು, ದಿಶಾ, ಸಂಚಿತ, ಸಿಂಚನಾ, ಉಷಾ ಫರ್ನಾಂಡೀಸ್, ಮೈತ್ರಿ, ಶಾಂತಿ ಶೆಣೈ, ಮೋನಿಕಾ, ಸುಮಾಲಿನಿ, ಮುಂತಾದ ಪ್ರಬುದ್ಧ ನಟ ನಟಿಯರು ಇದ್ದಾರೆ.
ಪ್ರೇರಣ್, ನಿಧಿ, ಸಮೃದ್ದಿ, ಹಂಪನ್ ಮುಂತಾದ ಬಾಲ ಕಲಾವಿದರು ಬಣ್ಣ ಹಚ್ಚಿದ್ದಾರೆ.
ವಿ ಮನೋಹರ್ ಅವರು ಸಂಗೀತ ನೀಡಿದ್ದು, ಸುಧಾಕರ ಶೆಟ್ಟಿ, ಚಿನ್ಮಯ, ಐಶ್ವರ್ಯ, ಗಗನ್, ವಿಜಯ್, ನರೇಂದ್ರ ಸುಮಧುರ ಹಾಡುಗಳಿಗೆ ದ್ವನಿ ನೀಡಿದ್ದಾರೆ.
ಶಂಕರ್, ರಾಜಕಿಶೋರ್ ಛಾಯಾಗ್ರಹಣ, ಕೆ .ಗಿರೀಶ್ ಕುಮಾರ್ ಸಂಕಲನ, ತಮ್ಮ ಲಕ್ಷ್ಮಣ್ ಕಲೆ, ಕೌರವ ವೆಂಕಟೇಶ್ ಸಾಹಸ, ಸತೀಶ್ ಬ್ರಹ್ಮಾವರ, ಸ್ವಾಮಿ ನಿರ್ಮಾಣ ನಿರ್ವಹಣೆ, ಲಕ್ಷೀರಾಜ್ ಶೆಟ್ಟಿ ವಿನ್ಯಾಸ, ಪ್ರಶಾಂತ್ ಎಳ್ಳಂಪಳಿ, ರಾಮದಾಸ್ ಸಸಿಹಿತ್ಲು ಸಹ ನಿರ್ದೇಶಕರು.
ಸ್ನೇಹ ಕೃಪಾ ಮೂವೀಸ್ ನಲ್ಲಿ ಉಪ್ಪಳ ರಾಜಾರಾಂ ಶೆಟ್ಟಿ ಈ ಚಿತ್ರ ಅರ್ಪಣೆ.
ಸಹಕಾರ ಗಿರೀಶ್ ಎಸ್ ಪೂಜಾರಿ, ಮಮತಾ ಎಸ್ ಬನ್ನಂಜೆ ಪ್ರಾರ್ಥನ್ ಬನ್ನಂಜೆ , ಪ್ರೇರಣ್ ಬನ್ನಂಜೆ, ಕೃತಿ ಆರ್ ಶೆಟ್ಟಿ ಸಹ ನಿರ್ಮಾಪಕರು.
ಸುಧಾಕರ ಬನ್ನಂಜೆಯವರು ಕಥೆ, ಚಿತ್ರ ಕಥೆ, ಸಂಭಾಷಣೆ, ಹಾಡು ಬರೆದು ನಿರ್ದೇಶಿಸಿದ್ದಾರೆ.

