• Home  
  • ಮಹಿಳೆಯರಿಗೆ ಮೀಸಲಾತಿ ನೀಡುವಲ್ಲಿ  ಕರ್ನಾಟಕ  ಮೊದಲ ರಾಜ್ಯ:  ಮಾಜಿ ಮುಖ್ಯ ಮಂತ್ರಿ  ಡಾ. ಎಂ. ವೀರಪ್ಪ ಮೊಯಿಲಿ
- ಕರಾವಳಿ - ರಾಜಕೀಯ - ವಿಡಿಯೋ

ಮಹಿಳೆಯರಿಗೆ ಮೀಸಲಾತಿ ನೀಡುವಲ್ಲಿ  ಕರ್ನಾಟಕ  ಮೊದಲ ರಾಜ್ಯ:  ಮಾಜಿ ಮುಖ್ಯ ಮಂತ್ರಿ  ಡಾ. ಎಂ. ವೀರಪ್ಪ ಮೊಯಿಲಿ

Share: ಮಹಿಳೆಯರಿಗೆ ಮೀಸಲಾತಿ ನೀಡುವಲ್ಲಿ  ಕರ್ನಾಟಕ  ಮೊದಲ ರಾಜ್ಯ:  ಮಾಜಿ ಮುಖ್ಯ ಮಂತ್ರಿ  ಡಾ. ಎಂ. ವೀರಪ್ಪ ಮೊಯಿಲಿ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಕಳ  ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶ ಉಡುಪಿ\ಕಾರ್ಕಳ: ಮಹಿಳೆಯರಿಗೆ  ಮೀಸಲಾತಿ ನೀಡುವಲ್ಲಿ  ಕರ್ನಾಟಕ  ಮೊದಲ ರಾಜ್ಯವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ  ಡಾ. ಎಂ. ವೀರಪ್ಪ ಮೊಯಿಲಿ ಹೇಳಿದರು.  ಅವರು ಶನಿವಾರ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಕಳ  […]

ಮಹಿಳೆಯರಿಗೆ ಮೀಸಲಾತಿ ನೀಡುವಲ್ಲಿ  ಕರ್ನಾಟಕ  ಮೊದಲ ರಾಜ್ಯ:  ಮಾಜಿ ಮುಖ್ಯ ಮಂತ್ರಿ  ಡಾ. ಎಂ. ವೀರಪ್ಪ ಮೊಯಿಲಿ

ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಕಳ  ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶ

ಉಡುಪಿ\ಕಾರ್ಕಳ: ಮಹಿಳೆಯರಿಗೆ  ಮೀಸಲಾತಿ ನೀಡುವಲ್ಲಿ  ಕರ್ನಾಟಕ  ಮೊದಲ ರಾಜ್ಯವಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ  ಡಾ. ಎಂ. ವೀರಪ್ಪ ಮೊಯಿಲಿ ಹೇಳಿದರು.

 ಅವರು ಶನಿವಾರ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಕಳ  ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶ ದಲ್ಲಿ ಮಾತನಾಡಿದರು.

1993 ರಲ್ಲಿಯೆ ಮಹಿಳೆಯರಿಗೆ ಮೀಸಲಾತಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ನಲ್ಲಿ 50% ಮೀಸಲಾತಿ ಯನ್ನು ಕಾಂಗ್ರೆಸ್ ಪಕ್ಷ  ಜಾರಿಗೆ ತಂದಿತ್ತು.  ಅಂದಿನ ಪಂಚಾಯತ್ ಚುನಾವಣೆಯಲ್ಲಿ 52% ದಷ್ಟು ಮಹಿಳೆಯರು ಚುನಾವಣೆಯಲ್ಲಿ ಅಯ್ಕೆಯಾಗಿದ್ದರು.

 ಬಿಜೆಪಿ ಪಕ್ಷ ದರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಿದೆ.  2024 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜಾತಿಗಳ  ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು.  ಕಾಂಗ್ರೆಸ್‌ ಪಕ್ಷದ ವಿಜಯೋತ್ಸವ ಕಂಡು  ಜೆಡಿಎಸ್ ಬಿಜೆಪಿ ಕಾಲು ಹಿಡಿದು ಸಖ್ಯ ಬೆಳೆಸಿದೆ ಎಂದು ಹೇಳಿದರು.

  ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ,  ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸಲು ಮೂರು ವರ್ಷ ತಗುಲಿದ್ದು, ಅದರೆ ಕಾರ್ಕಳ ತಾಲೂಕಿನಲ್ಲಿ ಮಾತ್ರ ಅರು ತಿಂಗಳಲ್ಲಿ ಪರಶುರಾಮ ಮೂರ್ತಿ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಜನರ ದಿಕ್ಕು ತಪ್ಪಿಸಿದ್ದಾರೆ. ಸತ್ಯಾಸತ್ಯತೆ ತಿಳಿದಿದೆ ಎಂದರು.

 ಒಂದು ಕೋಟಿ ಎಂಟು‌ಲಕ್ಷ  ಗೃಹ ಲಕ್ಷ್ಮಿ ಯೊಜನೆಯು ಫಲಾನುಭವಿಗಳಿಗೆ ತಲುಪಿದೆ. ಎಂಟು ಲಕ್ಷ ಖಾತೆಗಳಿಗೆ ಅಧಾರ್ ಸೀಡಿಂಗ್ ಹಾಗೂ ಮಹಿಳೆಯರ ಖಾತೆಗಳು ಸ್ಥಗಿತಹೊಂಡ ಕಾರಣ ಹಣ ಇನ್ನೂ ಹೋಗಿಲ್ಲ. ರಾಜ್ಯ ಸರಕಾರವು  34000 ಕೋಟಿ ಹಣವನ್ನು ನೇರವಾಗಿ ಮಹಿಳೆಯರಿಗೆ   ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡ  ಉದಯ ಶೆಟ್ಟಿ ಮುನಿಯಾಲು,  ಕಾಂಗ್ರೇಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಸುಧೀರ್ ಮರೋಳಿ,   ರಾಜ್ಯ ಕೃಷಿ ಘಟಕ ಕಾರ್ಯದರ್ಶಿ ಉದಯ ವಿ. ಶೆಟ್ಟಿ ಕಾರ್ಯದರ್ಶಿ, ಕೆಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ,ಹೆಬ್ರಿ  ಬ್ಲಾಕ್  ಮಾಜಿ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ವಕ್ತಾರರ ಬಿಪಿನ್‌ ಚಂದ್ರ ಪಾಲ್, ಜಿಲ್ಲಾ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್‌, ರಾಘವ ದೇವಾಡಿಗ,  ಜಿಲ್ಲಾ ಕಾಂಗ್ರೆಸ್ ಸದಸ್ಯ ಶಿರಿಯಣ್ಣ ಶೆಟ್ಟಿ ,ಸುಭೋದ್ ಶೆಟ್ಟಿ,ಇಂಟಕ್ ಅದ್ಯಕ್ಷ ಕಿರಣ್ ಹೆಗ್ಡೆ, ಜಿಲ್ಲಾ ಯುವ ಕಾಂಗ್ರೆಸ್ ಅಧಯಕ್ಷ ದೀಪಕ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು

Leave a comment

Your email address will not be published. Required fields are marked *

eMedia Kannada  @2025. All Rights Reserved.