• Home  
  • ಕೇರಳದಲ್ಲಿ ರಾಜ್ಯದಲ್ಲಿ ಕಂಡು ಬರುವಂತಹ ಗುಹಾ ಸಮಾಧಿ ಉಡುಪಿಯ ಹಾವಂಜೆ ಗ್ರಾಮದ ಬನ್ಸಾಲೆ ಪತ್ತೆ!
- ಕರಾವಳಿ

ಕೇರಳದಲ್ಲಿ ರಾಜ್ಯದಲ್ಲಿ ಕಂಡು ಬರುವಂತಹ ಗುಹಾ ಸಮಾಧಿ ಉಡುಪಿಯ ಹಾವಂಜೆ ಗ್ರಾಮದ ಬನ್ಸಾಲೆ ಪತ್ತೆ!

Share: ಕೇರಳದಲ್ಲಿ ರಾಜ್ಯದಲ್ಲಿ ಕಂಡು ಬರುವಂತಹ ಗುಹಾ ಸಮಾಧಿ ಉಡುಪಿಯ ಹಾವಂಜೆ ಗ್ರಾಮದ ಬನ್ಸಾಲೆ ಪತ್ತೆ! ಉಡುಪಿ:  ಹಾವಂಜೆ ಗ್ರಾಮದ ಅಂಗಡಿ ಬೆಟ್ಟುವಿನಲ್ಲಿ ಪ್ರಸಾದ್ ಶೆಟ್ಟಿ ಕಪ್ಪೆಟ್ಟು ಅವರ ಮನೆಯ ಕಾಂಪೌಂಡಿಗೆ ತಾಗಿ ರಸ್ತೆಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ರಸ್ತೆಯ ಮಧ್ಯಭಾಗ ಕುಸಿತ ಕಂಡುಬಂದಂತಹ ಪ್ರದೇಶದಲ್ಲಿ  ಸಂಶೋಧನಾರ್ತಿಗಳು ನಿನ್ನೆ ಭೇಟಿ ನೀಡಿ ಅಧ್ಯಾಯನ ನಡೆಸಿದಾಗ ಇದೊಂದು ಪ್ರಾಚೀನಕಾಲದ ಗುಹಾಸಮಾಧಿ ಇದಾಗಿದೆ ಎಂದು ಖಚಿತಪಡಿಸಿ ತಿಳಿಸಿರುತ್ತಾರೆ.  ಈ ಗುಹಾ ಸಮಾಧಿಯನ್ನು ಪರಿಶೀಲಿಸುತ್ತಿರುವಾಗ  ಸ್ಥಳೀಯರಾದ ಹರೀಶ್ ಶೆಟ್ಟಿ ಮತ್ತು ಪ್ರಸಾದ್ ಶೆಟ್ಟಿ […]

ಕೇರಳದಲ್ಲಿ ರಾಜ್ಯದಲ್ಲಿ ಕಂಡು ಬರುವಂತಹ ಗುಹಾ ಸಮಾಧಿ ಉಡುಪಿಯ ಹಾವಂಜೆ ಗ್ರಾಮದ ಬನ್ಸಾಲೆ ಪತ್ತೆ!

ಉಡುಪಿ:  ಹಾವಂಜೆ ಗ್ರಾಮದ ಅಂಗಡಿ ಬೆಟ್ಟುವಿನಲ್ಲಿ ಪ್ರಸಾದ್ ಶೆಟ್ಟಿ ಕಪ್ಪೆಟ್ಟು ಅವರ ಮನೆಯ ಕಾಂಪೌಂಡಿಗೆ ತಾಗಿ ರಸ್ತೆಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ರಸ್ತೆಯ ಮಧ್ಯಭಾಗ ಕುಸಿತ ಕಂಡುಬಂದಂತಹ ಪ್ರದೇಶದಲ್ಲಿ  ಸಂಶೋಧನಾರ್ತಿಗಳು ನಿನ್ನೆ ಭೇಟಿ ನೀಡಿ ಅಧ್ಯಾಯನ ನಡೆಸಿದಾಗ ಇದೊಂದು ಪ್ರಾಚೀನಕಾಲದ ಗುಹಾಸಮಾಧಿ ಇದಾಗಿದೆ ಎಂದು ಖಚಿತಪಡಿಸಿ ತಿಳಿಸಿರುತ್ತಾರೆ.

 ಈ ಗುಹಾ ಸಮಾಧಿಯನ್ನು ಪರಿಶೀಲಿಸುತ್ತಿರುವಾಗ  ಸ್ಥಳೀಯರಾದ ಹರೀಶ್ ಶೆಟ್ಟಿ ಮತ್ತು ಪ್ರಸಾದ್ ಶೆಟ್ಟಿ ಕಪ್ಪೆಟ್ಟು ಅವರ ಮಾಹಿತಿ ಮೇರೆಗೆ ಈ ರೀತಿಯ ರಚನೆಗಳು ಅಥವಾ ಸುರಂಗಗಳು ಬೇರೆಲ್ಲಿಯಾದರೂ ಕಂಡುಬಂದಿವೆಯೇ  ಎಂದು ವಿಚಾರಿಸಿ ದಾಗ ಸಮೀಪದ ಒಂದು ಕಿಲೋಮೀಟರ್. ಇನ್ನೊಂದು ಮಗ್ಗಲು ಪ್ರದೇಶವಾದ ಹಾವಂಜೆಯ ಬನ್ಸಾಲೆಯಲ್ಲಿ ಇಂತಹುದೇ ಒಂದು ಸುರಂಗ ಇದೆ ಎಂದು ತಿಳಿಸಿದಾಗ ಆ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಅಚ್ಚರಿ ಕಾದಿತ್ತು.

 ಇಲ್ಲಿರುವ ಗುಹಾ ಸಮಾಧಿಯೂ ಅತ್ಯಂತ ಅಪರೂಪದ ಒಂದು ಗುಹಾ ಸಮಾಧಿ ಯಾಗಿದೆ ಎಂದು ಕರಾವಳಿಯ ಪುರಾತತ್ವ ವಿದ್ವಾಂಸ ಪ್ರೋ. ಟಿ. ಮುರುಗೇಶಿ ಯವರು ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಪತ್ತೆಯಾದ ಗುಹಾ ಸಮಾಧಿಗಳ ಮೇಲ್ಭಾಗದಲ್ಲಿ ಸುಮಾರು ಎರಡು ಅಡಿ ವಿಸ್ತೀರ್ಣದ ಒಂದು ಪ್ರವೇಶ ದ್ವಾರವಿರುತ್ತದೆ ಒಳಭಾಗದಲ್ಲಿ ಅರ್ಧಗೋಳಾಕಾರದ ರಚನೆ ಕಂಡು ಬರುತ್ತದೆ. ಪ್ರಸ್ತುತ ಬನ್ಸಾಲೆಯಲ್ಲಿ  ಕಂಡುಬಂದ ಗುಹಾ ಸಮಾಧಿಯ ಮೇಲ್ಭಾಗದಲ್ಲಿ ಕೇವಲ ಅರ್ಧ ಅಡಿ ವಿಸ್ತೀರ್ಣದ ಪ್ರವೇಶ ದ್ವಾರವಿದೆ ಇದರ ಮೂಲಕ ಯಾವುದೇ ಮನುಷ್ಯ ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಈ ಗುಹಾ ಸಮಾಧಿಯ ನೇರವಾಗಿ ದಕ್ಷಿಣ ದಿಕ್ಕಿನ ಎತ್ತರವಾದ ಪ್ರದೇಶದಲ್ಲಿ ಸುಮಾರು 500 ಮೀಟರ್ ಅಂತರದಲ್ಲಿ ಗುಹಾ ಸಮಾಧಿಯ ಪ್ರತ್ಯೇಕ ಪ್ರವೇಶ ದ್ವಾರವಿದೆ ಇಳಿಯಲು ಕಲ್ಲಿನ ಮೆಟ್ಟಿಲುಗಳನ್ನು ಸಹ ಮಾಡಲಾಗಿದೆ.

 ಈ ರೀತಿಯ ಗುಹಾ ಸಮಾಧಿಯ ರಚನೆಗಳು ಕೇರಳದಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಉಡುಪಿಯಲ್ಲಿ ಇಂತಹ ಮಾದರಿಯ ಗುಹಾ ಸಮಾಧಿ ದೊರೆತಿರುವುದು ಇದೇ ಪ್ರಥಮವಾಗಿದ್ದು, ಹೆಚ್ಚಿನ ಅಧ್ಯಯನಕ್ಕೆ ಅವಕಾಶವನ್ನು ಕಲ್ಪಿಸಿದೆ ಎಂದು ಪ್ರೋ. ಟಿ. ಮುರುಗೇಶಿ ಯವರು ತಿಳಿಸಿದ್ದಾರೆ.

 ಕ್ಷೇತ್ರ ಕಾರ್ಯಾಚರಣೆ ಯಲ್ಲಿ ಪ್ರಮುಖ ಪಾತ್ರ ವಹಿಸಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ರಾಜೇಶ್ ಪ್ರಭು ಪರ್ಕಳ ಜೊತೆಗಿದ್ದರು.

 ಪ್ರೊ.ಟಿ, ಮುರುಗೇಶಿಯವರ ಮಾರ್ಗದರ್ಶನದಲ್ಲಿ. ಸಂಶೋಧಕರುಗಳಾದ  ಶ್ರೇಯಸ್,  (ಸ್ನಾತಕೋತ್ತರ ಪದವಿ) ಗೌತಮ್ ಇತಿಹಾಸ ಹಾಗೂ ಪುರಾತತ್ವ,  ವಿದ್ಯಾರ್ಥಿ ಕಾರ್ತಿಕ್, ಯುನಿವರ್ಸಿಟಿ ಕಾಲೇಜು ಮಂಗಳೂರು ಇವರೆಲ್ಲರೂ ಹಾವಂಜೆಯ ಬನ್ಸಾಲೆಯಲ್ಲಿ ಇರುವ ಗುಹಾ ಸಮಾಧಿಯ ಪ್ರಾಥಮಿಕ  ಹಂತದ ಅಧ್ಯಯನ ನಡೆಸಿದ್ದಾರೆ.

  ಈ ಸಂದರ್ಭದಲ್ಲಿ ಸ್ಥಳೀಯರಾದ ಪ್ರಸಾದ್ ಶೆಟ್ಟಿ ಕಪ್ಪೆಟ್ಟು, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು, ರಾಜೇಶ್ ಪ್ರಭು ಪರ್ಕಳ, ಜಯ ಶೆಟ್ಟಿ ಬನ್ನಂಜೆ. ಹರೀಶ್ ಶೆಟ್ಟಿ ಕೀಳಂಜೆ ಮತ್ತಿತರರು ಜೊತೆಗಿದ್ದು ಸಹಕರಿಸಿದರು.

 ಹಳೆ ಶಿಲಾಯುಗದ  ಕೇರಳ ಮಾದರಿ (ಶೈಲಿಯ) ಸಮಾಧಿಯು ತುಳುನಾಡಿನಲ್ಲಿ ಮೊದಲಾಗಿ ಪತ್ತೆಯಾಗಿರುವುದು ಮತ್ತು ಇಂತಹ ಹಳೆಯ ಕಾಲಘಟ್ಟದ ಪಳಯುಳಿಕೆಗಳು ನಮ್ಮ ತುಳುನಾಡಿನಲ್ಲಿ ಪ್ರಥಮವಾಗಿ ಸಿಕ್ಕಿರುವುದು ಎಂದು ಸರಳೇ ಬೆಟ್ಟು, ಸಂತಸ ವ್ಯಕ್ತಪಡಿಸಿದ್ದಾರೆ. ಈ ಪ್ರದೇಶ ಖಾಸಗಿ ಜಮೀನಿನಲ್ಲಿದ್ದು. ಮುಂದಿನ ದಿನಗಳಲ್ಲಿ ಅವರೊಂದಿಗೆ ಚರ್ಚಿಸಿ ಅಧ್ಯಯನಕ್ಕೆ ಪೂರಕವಾಗಿ ಸಹಕಾರ ನೀಡುವಂತೆ ಭೂ ಮಾಲಕರಲ್ಲಿ ಮಾತನಾಡುವಂತೆ ಸ್ಥಳೀಯರಲ್ಲಿ ಮಾತುಕತೆ ನಡೆಸಿದ್ದೇನೆ ಎಂದು ಸರಳೇಬೆಟ್ಟು ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.