• Home  
  • ಅ. ೧ ಕ್ಕೆ  ಪಡುಬಿದ್ರಿ ಬಂಟರ ಸಂಘದ ಆಶ್ರಯದಲ್ಲಿ  ಸಿರಿಮುಡಿ ದತ್ತಿ ನಿಧಿ ಕಾರ್ಯಕ್ರಮ: ಪಡುಬಿದ್ರಿಯಲ್ಲಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ
- ಕರಾವಳಿ - ವಿಡಿಯೋ

ಅ. ೧ ಕ್ಕೆ  ಪಡುಬಿದ್ರಿ ಬಂಟರ ಸಂಘದ ಆಶ್ರಯದಲ್ಲಿ  ಸಿರಿಮುಡಿ ದತ್ತಿ ನಿಧಿ ಕಾರ್ಯಕ್ರಮ: ಪಡುಬಿದ್ರಿಯಲ್ಲಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ

Share: ಅ. ೧ ಕ್ಕೆ  ಪಡುಬಿದ್ರಿ ಬಂಟರ ಸಂಘದ ಆಶ್ರಯದಲ್ಲಿ  ಸಿರಿಮುಡಿ ದತ್ತಿ ನಿಧಿ ಕಾರ್ಯಕ್ರಮ: ಪಡುಬಿದ್ರಿಯಲ್ಲಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಉಡುಪಿ\ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯ ಸಮಾಜದ ಆರ್ಥಿಕ ದುರ್ಬಲರಿಗೆ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಆರ್ಥಿಕ ಹಿಂದುಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪಡುಬಿದ್ರಿ ಬಂಟರ ಸಂಘ ಸಹಭಾಗಿತ್ವದ ಸಿರಿಮುಡಿ ದತ್ತಿ ನಿಧಿ ಯೋಜನೆಯಡಿ ಸುಮಾರು ರೂ. ೨೦ ಲಕ್ಷ ಸಹಾಯಧನವನ್ನು ಅಕ್ಟೋಬರ್ ೧ರ ಆದಿತ್ಯವಾರ ಬೆಳಿಗ್ಗೆ ೧೦.೦೦ ಗಂಟೆಗೆ ವಿತರಿಸಲಾಗುವುದೆಂದು ಬಂಟರ ಸಂಘದ ಅಧ್ಯಕ್ಷರಾದ ಡಾ| […]

. ಕ್ಕೆ  ಪಡುಬಿದ್ರಿ ಬಂಟರ ಸಂಘದ ಆಶ್ರಯದಲ್ಲಿ  ಸಿರಿಮುಡಿ ದತ್ತಿ ನಿಧಿ ಕಾರ್ಯಕ್ರಮ: ಪಡುಬಿದ್ರಿಯಲ್ಲಿ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ

ಉಡುಪಿ\ಪಡುಬಿದ್ರಿ: ಪಡುಬಿದ್ರಿ ಬಂಟರ ಸಂಘದ ವ್ಯಾಪ್ತಿಯ ಸಮಾಜದ ಆರ್ಥಿಕ ದುರ್ಬಲರಿಗೆ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಆರ್ಥಿಕ ಹಿಂದುಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪಡುಬಿದ್ರಿ ಬಂಟರ ಸಂಘ ಸಹಭಾಗಿತ್ವದ ಸಿರಿಮುಡಿ ದತ್ತಿ ನಿಧಿ ಯೋಜನೆಯಡಿ ಸುಮಾರು ರೂ. ೨೦ ಲಕ್ಷ ಸಹಾಯಧನವನ್ನು ಅಕ್ಟೋಬರ್ ೧ರ ಆದಿತ್ಯವಾರ ಬೆಳಿಗ್ಗೆ ೧೦.೦೦ ಗಂಟೆಗೆ ವಿತರಿಸಲಾಗುವುದೆಂದು ಬಂಟರ ಸಂಘದ ಅಧ್ಯಕ್ಷರಾದ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪುರವರು ಗುರುವಾರ ಪಡುಬಿದ್ರಿ ಬಂಟರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

  ಬಂಟರ ಸಂಘದ ವ್ಯಾಪ್ತಿಯಲ್ಲಿ ಪ್ರಪ್ರಥಮ ಬಾರಿಗೆ ಸಮಾಜದ ವೃದ್ಧರಿಗೆ ನಮ್ಮ ಸಂಘವು ಆಶ್ರಯವಾಗಬೇಕೆಂಬ ದೃಷ್ಟಿಯಿಂದ ಸುಮಾರು ೬ ಎಕ್ರೆ ಜಾಗದಲ್ಲಿ ಬಂಟಾಶ್ರಯ, ಕುಟುಂಬ ಸೇವಾಶ್ರಮ ಎಂಬ ವೃದ್ಧಾಶ್ರಮ ನಿರ್ಮಿಸುವ ಯೋಜನೆ ಹಾಕಿಕೊಂಡಿದೆ.

  ಪಡುಬಿದ್ರಿ ಬಂಟರ ಸಂಘದ ಸಹಭಾಗಿತ್ವದಲ್ಲಿ ಆರ್ಥಿಕ ಸಬಲೀಕರಣ ಮತ್ತು ಎಲ್ಲಾ ಸಮಾಜದವರಿಗೂ ಅನುಕೂಲವಾಗುವಂತೆ ಸಿರಿಮುಡಿ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಚಾಲನೆ ನೀಡಲಾಗುವುದು.

ಶಾಸಕರಾದ ಗುರ್ಮೆ ಸುರೇಶ ಶೆಟ್ಟಿಯವರಿಗೆ ಸಮಾಜದ ವತಿಯಿಂದ ಅಭಿನಂದನೆ ನಡೆಯಲಿದ್ದು, ಹುಬ್ಬಳ್ಳಿಯ ಉದ್ಯಮಿ ರಾಜೇಂದ್ರ ಶೆಟ್ಟಿಯವರು ವಿವಿಧ ಗಣ್ಯರನ್ನು ಗೌರವಿಸಲಿದ್ದಾರೆ.

ಮುಂಬಯಿ ಬಂಟರ ಸಂಘದ ಅಧ್ಯಕ್ಷ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಮುಂಬೈ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಸಿ.ಎ. ಸುರೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ತಿಳಿಸಿದರು.

  ಕಾರ್ಯಕ್ರಮವನ್ನು ಅದಾನಿ ಸಮೂಹ ಸಂಸ್ಥೆಗಳ ಆಧ್ಯಕ್ಷರಾದ ಕಿಶೋರ ಆಳ್ವ ಉದ್ಘಾಟಿಸಲಿದ್ದು, ಹಿರಿಯ ಉದ್ಯಮಿ ಹೇರಂಬ ಇಂಡಸ್ಟ್ರೀ ಮಾಲಕರಾದ ಕನ್ಯಾನ ಸದಾಶಿವ ಶೆಟ್ಟಿ ಯವರು ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್‌ಗೆ ಚಾಲನೆ ನೀಡಲಿದ್ದಾರೆ. ಜಾಗತಿಕ ಬಂಟರ ಸಂಘದ ಆಧ್ಯಕ್ಷರಾದ ಐಕಳ ಹರೀಶ ಶೆಟ್ಟಿಯವರು ಅಶಕ್ತರಿಗೆ ನೆರವು ವಿತರಿಸಲಿದ್ದಾರೆ.

     ಮುಂಬಯಿಯ ಉದ್ಯಮಿ ಎಲ್ಲೂರಿನ ಪ್ರವೀಣ ಭೋಜ ಶೆಟ್ಟಿಯವರು ಬಂಟಾಶ್ರಯಕ್ಕೆ ಚಾಲನೆ ನೀಡಲಿದ್ದಾರೆ.  

ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.    ಪತ್ರಿಕಾಗೋಷ್ಠಿಯಲ್ಲಿ  ಬಂಟ್ಸ್ ವೆಲ್ ಫೇರ್ ಟ್ರಸ್ಟ್‌ ಅಧ್ಯಕ್ಷರಾದ  ಎರ್ಮಾಳು ಶಶಿಧರ ಶೆಟ್ಟಿ, ಸಿರಿಮುಡಿ ದತ್ತಿ ನಿಧಿಯ ಅಧ್ಯಕ್ಷರು ಸಾಂತೂರು ಭಾಸ್ಕರ ಶೆಟ್ಟಿ, ಸಂಘದ ಕಾರ್ಯದರ್ಶಿ ಪ್ರಕಾಶ ಶೆಟ್ಟಿ ಪಡುಹಿತ್ಲು, ಕೋಶಾಧಿಕಾರಿ ರವಿ ಶೆಟ್ಟಿ ಗುಂಡ್ಲಾಡಿಯವರು, ಯುವ ಬಂಟರ ಸಂಘದ ಅಧ್ಯಕ್ಷ ನವೀನ್‌ ಎನ್‌ ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ಜಯ ಶೆಟ್ಟಿ ಪದ್ರ,  ಮಹಿಳಾ ವಿಭಾಗದ ಜ್ಯೋತಿ ಶೆಟ್ಟಿ ಉಪಸ್ಥಿತರಿದ್ದರು

Leave a comment

Your email address will not be published. Required fields are marked *

eMedia Kannada  @2025. All Rights Reserved.