• Home  
  • ಅ. 3 ರ ಉಡುಪಿ ಜಿಲ್ಲಾ ಬಂದ್ ಕರೆ ಕಾನೂನು ಬಾಹಿರ : ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್ ಕೆ
- ಅಪರಾಧ - ಕರಾವಳಿ

ಅ. 3 ರ ಉಡುಪಿ ಜಿಲ್ಲಾ ಬಂದ್ ಕರೆ ಕಾನೂನು ಬಾಹಿರ : ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್ ಕೆ

Share: ಅ. 3 ರ ಉಡುಪಿ ಜಿಲ್ಲಾ ಬಂದ್ ಕರೆ ಕಾನೂನು ಬಾಹಿರ : ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಉಡುಪಿ: ಉಡುಪಿ ಜಿಲ್ಲಾ ಲಾರಿ ಮಾಲಿಕರ ಒಕ್ಕೂಟ ಇವರು ಮತ್ತು ಇತರ ಸಂಘಟನೆಗಳು, ಸರಕಾರದ ವಿವಿಧ ಆದೇಶಗಳ ವಿರುದ್ಧ ಉಡುಪಿ ಜಿಲ್ಲೆಗೆ ಬಂದ್ ಕರೆ ನೀಡಿದ್ದು ಕಾನೂನು ಬಾಹಿರವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, […]

. 3 ಉಡುಪಿ ಜಿಲ್ಲಾ ಬಂದ್ ಕರೆ ಕಾನೂನು ಬಾಹಿರ : ಉಡುಪಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್ ಕೆ

ಉಡುಪಿ: ಉಡುಪಿ ಜಿಲ್ಲಾ ಲಾರಿ ಮಾಲಿಕರ ಒಕ್ಕೂಟ ಇವರು ಮತ್ತು ಇತರ ಸಂಘಟನೆಗಳು, ಸರಕಾರದ ವಿವಿಧ ಆದೇಶಗಳ ವಿರುದ್ಧ ಉಡುಪಿ ಜಿಲ್ಲೆಗೆ ಬಂದ್ ಕರೆ ನೀಡಿದ್ದು ಕಾನೂನು ಬಾಹಿರವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಯಾವುದೇ ಬಂದ್ ಕರೆ ನೀಡುವುದು, ಕಾನೂನು ಬಾಹಿರ ಸಂವಿಧಾನ ವಿರೋಧಿ. ಜನಸಾಮಾನ್ಯರ ಮೂಲಭೂತ ಹಕ್ಕು ವಿರೋಧಿ ಎಂದು ಕೇರಳ ಉಚ್ಚ ನ್ಯಾಯಾಲಯವು ಎಐಆರ್ 1997 ಕೇರಳ 291 (ಫುಲ್ ಬೆಂಚ್) ನ ನ್ಯಾಯಾಲಯದ ತೀರ್ಪಿನಲ್ಲಿ ಘೋಷಿಸಿದ್ದು, ಈ ತೀರ್ಪನ್ನು ಸವೋಚ್ಚ ನ್ಯಾಯಾಲಯವು ಸನ್ 1998 ರಲ್ಲಿ ಸಿ.ಪಿ.ಐ (ಎಮ್) v/s ಭರತ್ ಕುಮಾರ್ ಪ್ರಕರಣದಲ್ಲಿ ಬಂದ್ ಕರೆ ನೀಡುವುದು ಆ ಸಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ಆದೇಶಿಸಿದೆ.

ಆದ್ದರಿಂದ ಅಕ್ಟೋಬರ್ 3ರಂದು ಉಡುಪಿ ಜಿಲ್ಲಾ ಲಾರಿ ಮಾಲಿಕರ ಒಕ್ಕೂಟ ಇವರು ಮತ್ತು ಇತರ ಸಂಘಟನೆಗಳು ನೀಡಿರುವ ಬಂದ್ ಕರೆ ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ. ಜನ ಸಾಮಾನ್ಯರ ಮೂಲಭೂತ ಹಕ್ಕು ಚ್ಯುತಿಯಾಗುವುದರಿಂದ ಯಾವುದೇ ರೀತಿಯ ಬಂದಿಗೆ ಅಥವಾ ಇದಕ್ಕೆ ಸಂಬಂದಿಸಿದ ಇತರೇ ಪ್ರತಿಭಟನೆಗೆ ಅವಕಾಶವಿರುವುದಿಲ್ಲ.

 ಉಡುಪಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಮೆರವಣಿಗೆಯನ್ನು ಹಮ್ಮಿಕೊಳ್ಳಲು ಅವಕಾಶ ನೀಡಲು ಸಾಧ್ಯವಿರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.