• Home  
  • ಮಂಗಳೂರು : ಮಹೇಶ್ ಟ್ರಾವೆಲ್ಸ್ ಮಾಲಕ ಪ್ರಕಾಶ್ ಆತ್ಮಹತ್ಯೆ
- ಅಪರಾಧ

ಮಂಗಳೂರು : ಮಹೇಶ್ ಟ್ರಾವೆಲ್ಸ್ ಮಾಲಕ ಪ್ರಕಾಶ್ ಆತ್ಮಹತ್ಯೆ

Share: ಮಂಗಳೂರು : ಕರಾವಳಿಯಾದ್ಯಂತ ಸುಮಾರು 50ಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿದ್ದು, ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಕಳೆದ ಹಲವಾರು ವರ್ಷಗಳಿಂದ ಉತ್ತಮ ಸೇವೆ ಒದಗಿಸುತ್ತಿದ್ದ ಮಹೇಶ್ ಟ್ರಾವೆಲ್ಸ್ ಮಾಲಕ ಪ್ರಕಾಶ್ ಶೇಖ (40) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹೇಶ್ ಅವರು ತಮ್ಮ ಕದ್ರಿ ಕಂಬಳದಲ್ಲಿರುವ ಪ್ಲ್ಯಾಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಇದೀಗ ಮರಣೋತ್ತರ ಪರೀಕ್ಷೆಗಾಗಿ ಪ್ರಕಾಶ್ ಅವರ ಶವವನ್ನು ಎ ಜೆ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಹೆಚ್ಚಿನ […]

ಮಂಗಳೂರು : ಕರಾವಳಿಯಾದ್ಯಂತ ಸುಮಾರು 50ಕ್ಕೂ ಹೆಚ್ಚು ಬಸ್ಸುಗಳನ್ನು ಹೊಂದಿದ್ದು, ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಕಳೆದ ಹಲವಾರು ವರ್ಷಗಳಿಂದ ಉತ್ತಮ ಸೇವೆ ಒದಗಿಸುತ್ತಿದ್ದ ಮಹೇಶ್ ಟ್ರಾವೆಲ್ಸ್ ಮಾಲಕ ಪ್ರಕಾಶ್ ಶೇಖ (40) ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಹೇಶ್ ಅವರು ತಮ್ಮ ಕದ್ರಿ ಕಂಬಳದಲ್ಲಿರುವ ಪ್ಲ್ಯಾಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಇದೀಗ ಮರಣೋತ್ತರ ಪರೀಕ್ಷೆಗಾಗಿ ಪ್ರಕಾಶ್ ಅವರ ಶವವನ್ನು ಎ ಜೆ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹೇಶ್ ಮೋಟಾರ್ಸ್‌ಗೆ ಸೇರಿದ ಅನೇಕ ಸಿಟಿ ಬಸ್‌ಗಳು ಪ್ರತಿದಿನ ಸಂಚರಿಸುತ್ತಿದ್ದು ಜನಪ್ರಿಯವಾಗಿದೆ. ಪ್ರಕಾಶ್ ಅವರು ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಸದಸ್ಯರಾಗಿದ್ದರು ಮತ್ತು ಹಿಂದೆ ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.