• Home  
  • ರವಿ ಕಟಪಾಡಿ ಕೃಷ್ಣಜನ್ಮಾಷ್ಟಮಿ ವೇಷದಿಂದ ಸಂಗ್ರಹಿತ ೮ ಲಕ್ಷ ರೂ. ೫ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ  ವಿತರಣೆ
- ಕರಾವಳಿ - ವಿಡಿಯೋ

ರವಿ ಕಟಪಾಡಿ ಕೃಷ್ಣಜನ್ಮಾಷ್ಟಮಿ ವೇಷದಿಂದ ಸಂಗ್ರಹಿತ ೮ ಲಕ್ಷ ರೂ. ೫ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ  ವಿತರಣೆ

Share: ರವಿ ಕಟಪಾಡಿ ಕೃಷ್ಣಜನ್ಮಾಷ್ಟಮಿ ವೇಷದಿಂದ ಸಂಗ್ರಹಿತ ೮ ಲಕ್ಷ ರೂ. ೫ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ  ವಿತರಣೆ ಉಡುಪಿ\ ಕಟಪಾಡಿ: ಶ್ರೀ ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಅನಾರೋಗ್ಯದಿಂದ ಇರುವ ಬಡ ಅಶಕ್ತ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ರಾಕ್ಷಸ ವೇಷವನ್ನು ಧರಿಸಿದ ಸಮಾಜ ಸೇವಕ ರವಿ ಕಟಪಾಡಿ ತಂಡವು ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ೫ ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಈ ಬಾರಿ ೮,೨೨,೨೧೨ […]

ರವಿ ಕಟಪಾಡಿ ಕೃಷ್ಣಜನ್ಮಾಷ್ಟಮಿ ವೇಷದಿಂದ ಸಂಗ್ರಹಿತ ೮ ಲಕ್ಷ ರೂ. ೫ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ  ವಿತರಣೆ

ಉಡುಪಿ\ ಕಟಪಾಡಿ: ಶ್ರೀ ಕೃಷ್ಣಜನ್ಮಾಷ್ಟಮಿ ಸಂದರ್ಭದಲ್ಲಿ ಅನಾರೋಗ್ಯದಿಂದ ಇರುವ ಬಡ ಅಶಕ್ತ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ರಾಕ್ಷಸ ವೇಷವನ್ನು ಧರಿಸಿದ ಸಮಾಜ ಸೇವಕ ರವಿ ಕಟಪಾಡಿ ತಂಡವು ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ೫ ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಈ ಬಾರಿ ೮,೨೨,೨೧೨ ರೂ. ಸಂಗ್ರಹಿಸಿದ ಮೊತ್ತವನ್ನು ರವಿವಾರ ವಿತರಣೆ ಮಾಡಿದರು.

 ರವಿ ಕಟಪಾಡಿ ಈ ಸಂದರ್ಭ ಮಾತನಾಡಿ, ತಂಡವು   ಡಬ್ಬಿಯನ್ನು ಹಿಡಿಯದೆ ಜನರ ಪ್ರೀತಿ, ವಿಶ್ವಾಸ, ನಂಬಿಕೆಯ ಮೇಲೆಗೆ ಸಂಗ್ರಹವಾಗಿರುವ ಹಣವನ್ನು ಈ ಬಾರಿ ಅನಾರೋಗ್ಯದಿಂದಿರುವ ಕಾರ್ಕಳ ಕಣಜಾರು ನಿಶ್ಮಿತಾ ಕೆ. ಅವರಿಗೆ ೩ಲಕ್ಷ ರೂ., ಕುಂದಾಪುರ ಕಟ್ ಬೇಲ್ತೂರು ನಾಗೇಂದ್ರಗೆ ೨ಲಕ್ಷ ೫೦ ಸಾವಿರ, ಮಾರಣಕಟ್ಟೆ ಇಡೂರು ಸುಶಾಂತ್ ಶೆಟ್ಟಿಗೆ ಮತ್ತು ಋತಿಕ್ ಮೂಡಬಿದ್ರಿಗೆ ತಲಾ ೧ ಲಕ್ಷ ರೂ., ಸಸಿಹಿತ್ಲುವಿನ ಪೂರ್ವಿಗೆ ೫೦ ಸಾವಿರ ನೀಡಲಾಗಿದೆ. ಆ ಮೂಲಕ ೯ ವರ್ಷಗಳಿಂದ  ಅಷ್ಟಮಿಯಂದು ವೇಷ ಧರಿಸಿ ಸಂಗ್ರಹಿಸಲಾದ ಒಟ್ಟು ೧ಕೋಟಿ ೨೨ಲಕ್ಷ ರೂವನ್ನು ೧೧೮ ಬಡ ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ನೀಡಿದಂತಾಗಿದೆ ಎಂದರು.

ಶ್ರೀ ಕ್ಷೇತ್ರ ಪೇಟೆಬೆಟ್ಟು ಗುರಿಕಾರರಾದ ಹರಿಶ್ಚಂದ್ರ ಪಿಲಾರು ಮತ್ತು ತುಕಾರಾಮ ಎಸ್. ಉರ್ವ ಶುಭವನ್ನು ಹಾರೈಸಿದರು.

ಈ ಸಂಧರ್ಭ ಮಹೇಶ್ ಶೆಣೈ, ಅರ್ಚಕರಾದ ಜಯಕರ ವಿ., ಪ್ರಮುಖರಾದ ಯಶವಂತ್, ಶಂಕರ್ ಕಟಪಾಡಿ, ರಾಜ್‌ಗೋಪಾಲ್, ಲಕ್ಷ್ಮಣ್, ಉಮೇಶ್ ಹಾಗೂ ರವಿ ಫ್ರೆಂಡ್ಸ್ ಕಟಪಾಡಿ‌ ತಂದ ಸದಸ್ಯರು ಉಪಸ್ಥಿತರಿದ್ದರು.

ಈ ಬಾರಿ ರವಿ ಕಟಪಾಡಿ ಅವರು ಸೀ ಫೋಕ್ ಎಂಬ ಆಂಗ್ಲ ಚಲನಚಿತ್ರದ ವೇಷವನ್ನು ಧರಿಸಿ ಹಣ ಸಂಗ್ರಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.