• Home  
  • ಡಾ| ಜಿ. ಶಂಕರ್ ೬೮ನೇ ಹುಟ್ಟು ಹಬ್ಬದ ಸಂಭ್ರಮ
- ಕರಾವಳಿ - ಜೀವನಶೈಲಿ

ಡಾ| ಜಿ. ಶಂಕರ್ ೬೮ನೇ ಹುಟ್ಟು ಹಬ್ಬದ ಸಂಭ್ರಮ

Share: ಡಾ| ಜಿ. ಶಂಕರ್ ೬೮ನೇ ಹುಟ್ಟು ಹಬ್ಬದ ಸಂಭ್ರಮಉಡುಪಿ\ಕಾಪು : ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ದಾರ ಮತ್ತು ಉಚ್ಚಿಲ ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜಾ ಡಾ| ಜಿ. ಶಂಕರ್ ಅವರ ೬೮ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಗುರುವಾರ ಲಕ್ಷ್ಮೀ ನಾರಾಯಣ ಹೃದಯ ಹೋಮ, ಗೌರವಾರ್ಪಣೆ ಮತ್ತು ಅನ್ನಸಂತರ್ಪಣೆ ನಡೆಯಿತು.ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಡಾ| ಜಿ. ಶಂಕರ್ ಮತ್ತು ಶಾಲಿನಿ ಜಿ. […]

ಡಾ| ಜಿ. ಶಂಕರ್ ೬೮ನೇ ಹುಟ್ಟು ಹಬ್ಬದ ಸಂಭ್ರಮ
ಉಡುಪಿ\ಕಾಪು : ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ದಾರ ಮತ್ತು ಉಚ್ಚಿಲ ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜಾ ಡಾ| ಜಿ. ಶಂಕರ್ ಅವರ ೬೮ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಗುರುವಾರ ಲಕ್ಷ್ಮೀ ನಾರಾಯಣ ಹೃದಯ ಹೋಮ, ಗೌರವಾರ್ಪಣೆ ಮತ್ತು ಅನ್ನಸಂತರ್ಪಣೆ ನಡೆಯಿತು.
ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಡಾ| ಜಿ. ಶಂಕರ್ ಮತ್ತು ಶಾಲಿನಿ ಜಿ. ಶಂಕರ್ ದಂಪತಿಯನ್ನು ದ.ಕ. ಮೊಗವೀರ ಮಹಾಜನ ಸಂಘದ ಪದಾಧಿಕಾರಿಗಳ ಸಮ್ಮುಖದಲ್ಲಿ ಪೂರ್ಣಕುಂಭ ಸಹಿತವಾಗಿ ಮಲ್ಲಿಗೆ ಹಾರ, ಕಮಲದ ಹೂಹಾರ ಮಾಲಾರ್ಪಣೆಯೊಂದಿಗೆ ಬರಮಾಡಿಕೊಳ್ಳಲಾಯಿತು.

 ದೇಗುಲದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ವೈದಿಕರ ಪಾಲ್ಗೊಳ್ಳುವಿಕೆಯೊಂದಿಗೆ ಶ್ರೀ ಲಕ್ಷ್ಮೀ ನಾರಾಯಣ ಹೋಮ, ಶ್ರೀ ಮಹಾಲಕ್ಷ್ಮೀ, ಭದ್ರಕಾಳಿ, ಗಣಪತಿ ದೇವರ ಸನ್ನಿಧಾನದಲ್ಲಿ ಸರ್ವಾಲಂಕಾರ ಸೇವೆ ಮತ್ತು ಮಹಾಪೂಜೆ ನಡೆಯಿತು. ಬಳಿಕ ದೀರ್ಘಾಯುಷ್ಯದ ಹಾರೈಕೆಯೊಂದಿಗೆ ದೇವರ ಪ್ರಸಾದ ಸಹಿತವಾಗಿ ಗೌರವಿಸಲಾಯಿತು.
ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಅಮೀನ್, ಮೊಗವೀರ ಮಹಾಜನ ಸಂಘದ ಉಪಾಧ್ಯಕ್ಷ ಸುಭಾಶ್ಚಂದ್ರ ಕಾಂಚನ್, ಪ್ರಧಾನ ಕಾರ್ಯದರ್ಶಿ ಸುಧಾಕರ ಕುಂದರ್, ಕೋಶಾಧಿಕಾರಿ ಭರತ್ ಎರ್ಮಾಳ್, ಮಹಿಳಾ ಸಂಘದ ಅಧ್ಯಕ್ಷೆ ಉಷಾ ರಾಣಿ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಂದ್ರ ಸುವರ್ಣ ಹಿರಿಯಡಕ, ಪ್ರಮುಖರಾದ ಕೇಶವ್ ಕುಂದರ್, ಮೋಹನ್ ಬೇಂಗ್ರೆ, ಕೇಶವ್ ಕೋಟ್ಯಾನ್, ಶಂಕರ್ ಸಾಲ್ಯಾನ್, ಚೇತನ್ ಬೇಂಗ್ರೆ, ನಾರಾಯಣ ಸಿ. ಕರ್ಕೇರ, ವಿನಯ್ ಕರ್ಕೇರ, ವಿಜಯ್ ಕುಂದರ್, ಎನ್.ಟಿ. ಅಮೀನ್, ಎಚ್.ಟಿ. ಕಿದಿಯೂರು, ಸತೀಶ್ ಕುಂದರ್, ದಿನೇಶ್‌ ಎರ್ಮಾಳು, ದಿನೇಶ್ ಮೂಳೂರು, ಸರ್ವೋತ್ತಮ ಕುಂದರ್, ರವೀಂದ್ರ ಶ್ರೀಯಾನ್, ವಿಶ್ವಾಸ್ ಅಮೀನ್, ಗಣೇಶ್ ಸಾಲ್ಯಾನ್ ಕೊಳ, ಮಂಜು ಕೊಳ, ರಾಮಚಂದ್ರ ಕುಂದರ್, ಶರಣ್ ಮಟ್ಟು, ಸುಗುಣಾ ಕರ್ಕೇರ, ಸರಳಾ ಕಾಂಚನ್, ಅಪ್ಪಿ ಸಾಲ್ಯಾನ್, ಪ್ರಧಾನ ವ್ಯವಸ್ಥಾಪಕ ಸತೀಶ್ ಅಮೀನ್, ಸಮಾಜ ಭಾಂದವರು, ಭಕ್ತಾಧಿಗಳು ಪಾಲ್ಗೊಂಡಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.