• Home  
  • (SKPA UDUPI -DK) ಎಸ್ಕೆಪಿಎ ಕಾಪು ಮತ್ತು ದಕ ಮೊಗವೀರ ಮಹಾಜನ ಸಂಘ (MOGAVEERA MAHAJANA SANGHA) ಇದರ ಅಯೋಜನೆಯಲ್ಲಿ ದಸರಾ ಪ್ರಯುಕ್ತ ಉಚ್ಚಿಲದಲ್ಲಿ ವಿಡಿಯೋ, ಫೊಟೋ ಸ್ಪರ್ಧೆಯ ಪೋಸ್ಟರ್‌ ಬಿಡುಗಡೆ
- ಕರಾವಳಿ - ಫ್ಯಾಷನ್ - ವಿಡಿಯೋ

(SKPA UDUPI -DK) ಎಸ್ಕೆಪಿಎ ಕಾಪು ಮತ್ತು ದಕ ಮೊಗವೀರ ಮಹಾಜನ ಸಂಘ (MOGAVEERA MAHAJANA SANGHA) ಇದರ ಅಯೋಜನೆಯಲ್ಲಿ ದಸರಾ ಪ್ರಯುಕ್ತ ಉಚ್ಚಿಲದಲ್ಲಿ ವಿಡಿಯೋ, ಫೊಟೋ ಸ್ಪರ್ಧೆಯ ಪೋಸ್ಟರ್‌ ಬಿಡುಗಡೆ

Share: ಎಸ್ಕೆಪಿಎ ಕಾಪು ಮತ್ತು ದಕ ಮೊಗವೀರ ಮಹಾಜನ ಸಂಘ ಇದರ ಅಯೋಜನೆಯಲ್ಲಿ ದಸರಾ ಪ್ರಯುಕ್ತ ಉಚ್ಚಿಲದಲ್ಲಿ ವಿಡಿಯೋ, ಫೊಟೋ ಸ್ಪರ್ಧೆಯ ಪೋಸ್ಟರ್‌ ಬಿಡುಗಡೆ ಉಡುಪಿ\ ಉಚ್ಚಿಲ: (Udupi \ kaup)ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್   ಕಾಪು ವಲಯ ಮತ್ತು ಮೊಗವೀರ ಮಹಾಜನ ಸಂಘ   ಉಚ್ಚಿಲ ಇದರ ಸಹಯೋಗದಲ್ಲಿ ಈ ಬಾರಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ದಸರಾ ೨೦೨೩ರ (uchila shree mahalaxmi temple dassara – 2023)ಸಂದರ್ಭ “ಉಚ್ಚಿಲ ದಸರಾ ವೈಭವ” ಫೋಟೋಗ್ರಾಫಿ ಮತ್ತು […]

ಎಸ್ಕೆಪಿಎ ಕಾಪು ಮತ್ತು ದಕ ಮೊಗವೀರ ಮಹಾಜನ ಸಂಘ ಇದರ ಅಯೋಜನೆಯಲ್ಲಿ ದಸರಾ ಪ್ರಯುಕ್ತ ಉಚ್ಚಿಲದಲ್ಲಿ ವಿಡಿಯೋ, ಫೊಟೋ ಸ್ಪರ್ಧೆಯ ಪೋಸ್ಟರ್‌ ಬಿಡುಗಡೆ

ಉಡುಪಿ\ ಉಚ್ಚಿಲ: (Udupi \ kaup)ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್   ಕಾಪು ವಲಯ ಮತ್ತು ಮೊಗವೀರ ಮಹಾಜನ ಸಂಘ   ಉಚ್ಚಿಲ ಇದರ ಸಹಯೋಗದಲ್ಲಿ ಈ ಬಾರಿಯ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ದಸರಾ ೨೦೨೩ರ (uchila shree mahalaxmi temple dassara – 2023)ಸಂದರ್ಭ “ಉಚ್ಚಿಲ ದಸರಾ ವೈಭವ” ಫೋಟೋಗ್ರಾಫಿ ಮತ್ತು ವಿಡಿಯೋ ಗ್ರಾಫಿ ಸ್ಪರ್ಧೆ2023 ಪೋಸ್ಟರನ್ನು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿಯವರು ಗುರುವಾರ ಮದ್ಯಾಹ್ನ ಉಚ್ಚಿಲ ಮಹಾಲಕ್ಷ್ಮೀ ದೇವಳದ ಸಭಾಭವನದಲ್ಲಿ ಬಿಡುಗಡೆಗೊಳಿಸಿದರು.

ಈಸಂದರ್ಭ ಜಯ ಸಿ ಕೋಟ್ಯಾನ್ ಮಾತನಾಡಿ, ಕಳೆದ ಬಾರಿಯ ದಸರಾ ಮಹೋತ್ಸವವನ್ನು ಛಾಯಾಗ್ರಾಹಕರು ದೇಶ ವಿದೇಶದಲಿ ಬಿತ್ತರಿಸಿ ಸಾಕಷ್ಟು ಪ್ರಚಾರ ನೀಡಿದ್ದಾರೆ. ಈ ಬಾರಿಯೂ ಇನ್ನಷ್ಟು ಪ್ರಚಾರ ನೀಡುವಂತಾಗಲಿ ಎಂದು ಹಾರೈಸಿದರು.

ಈ ಸಂದರ್ಭ ಉಚ್ಚಿಲ ಮಹಾಲಕ್ಷ್ಮೀ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ,  ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ವಾಸುದೇವ ಸಾಲಿಯನ್,  ದೇವಳದ ಪ್ರಧಾನ ವ್ಯವಸ್ಥಾಪಕ ಸತೀಶ್ ಪಡುಕೆರೆ, ಎಸ್ಕೆಪಿಎ ಕಾಪು ವಲಯ  ಅಧ್ಯಕ್ಷ  ಸಚಿನ್ ಉಚ್ಚಿಲ, ಅರುಲ್ ಡಿಸೋಜಾ, ಅನಂತ್ ರಾಜ್ ಭಟ್, ಕೃಷ್ಣರಾವ್, ಸುಬ್ರಮಣ್ಯ  ಐತಾಳ್‌, ಸತೀಷ್‌ ಪೂಜಾರಿ, ಪ್ರವೀಣ್‌ ಪೂಜಾರಿ ಕಾಪು, ಬಾಲಕೃಷ್ಣ ಪೂಜಾರಿ ಉಚ್ಚಿಲ, ಸತೀಷ್‌ ಪೂಜಾರಿ ಮೂಡಬೆಟ್ಟು, ಪ್ರಭಾಕರ ಪೂಜಾರಿ ಉಚ್ಚಿಲ ಉಪಸ್ಥಿತರಿದ್ದರು.

  ವೀರೇಂದ್ರ ಪೂಜಾರಿ ಶಿರ್ವ ಸ್ವಾಗತಿಸಿದರು.

  ರಾಘವೇಂದ್ರ ಭಟ್ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.