ಮಠಾಧೀಶರು,ಗಣ್ಯರ ಸಮ್ಮುಖದಲ್ಲೇ ಧರ್ಮಸಂರಕ್ಷಣಾ ಸಮಾವೇಶವನ್ನು ವೈಯುಕ್ತಿಕ ನಿಂದನೆಗೆ ಬಳಕೆ: ಅವಾಚ್ಯ ಹಾಗೂ ಕೀಳುಮಟ್ಟದ ಮಾತುಗಳನ್ನಾಡಿದ ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ವಿರುದ್ಧ ವ್ಯಾಪಕ ಟೀಕೆ.
(Karkala) ಕಾರ್ಕಳ: ಬೆಳ್ತಂಗಡಿಯ ಕುಮಾರಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆಯವರ (d̤ veerendra heggade) ಹೆಸರನ್ನು ಕೆಡಿಸಲು ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಭಾನುವಾರ ಜನಜಾಗೃತಿ ವೇದಿಕೆ ವತಿಯಿಂದ ಕಾರ್ಕಳದಲ್ಲಿ ಭಾನುವಾರ ನಡೆದ ಧರ್ಮಸಂರಕ್ಷಣಾ ಸಭೆಯಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಪವರ್ ಟಿವಿ ಖಾಸಗಿ ಸುದ್ಧಿ ವಾಹಿನಿಯ ಮುಖ್ಯಸ್ಥ ರಾಕೇಶ್ ಶೆಟ್ಟಿ (rakesh Shetty) ಮಾತನಾಡಿರುವ ಕೀಳುಮಟ್ಟದ ಮಾತುಗಳಿಗೆ ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವೃ ಆಕ್ರೋಶ ವ್ಯಕ್ತವಾಗಿದೆ.
ವೇದಿಕೆಯಲ್ಲಿದ್ದ ವಿವಿಧ ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಆಸಿನರಾಗಿದ್ದ ವೇದಿಕೆಯಲ್ಲೇ ಸಮಾವೇಶದ ಮೂಲ ಉದ್ದೇಶ ಮರೆತು ಭಾಷಣ ಆರಂಭಿಸಿದ ರಾಕೇಶ್ ಶೆಟ್ಟಿ ತನ್ನ ಒಂದು ಗಂಟೆಯ ಭಾಷಣವನ್ನು ಕೇವಲ ವೈಯುಕ್ತಿಕ ನಿಂದನೆಗೆ ಬಳಸಿಕೊಂಡ ಪರಿಣಾಮ ಗಣ್ಯರು ಹಾಗೂ ಸ್ವಾಮೀಜಿಗಳಿಗೆ ತೀವ್ರ ಇರಿಸುಮುರುಸು ಅನುಭವಿಸುವಂತಾಗಿದೆ.
ಬಹುತೇಕ ಗಣ್ಯರು ಹಾಗೂ ಮಠಾಧೀಶರು ಸಭ್ಯತೆಯ ಎಲ್ಲೆಯಲ್ಲೇ ಆಧರ್ಮದ ವಿರುದ್ಧ ಮಾತುಗಳನ್ನಾಡಿದರೆ, ಸಭೆಯಲ್ಲಿ ಕೊನೆಗೆ ಮಾತು ಆರಂಭಿಸಿದ ರಾಕೇಶ್ ಶೆಟ್ಟಿಯವರು ಸಾವಿರಾರು ಸಾರ್ವಜನಿಕರ ಸಮ್ಮುಖದಲ್ಲೇ ಮಹೇಶ್ ಶೆಟ್ಟಿಯವರ ವಿರುದ್ಧ ತೀರಾ ಕೆಟ್ಟ ಹಾಗೂ ಅವಾಚ್ಯ ಪದಗಳನ್ನು ಬಳಸಿ ಸಭ್ಯತೆಯನ್ನೇ ಮರೆತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸೌಜನ್ಯಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ (santosh rao) ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿದ ಬಳಿಕ ಈ ಹೋರಾಟವು ಮತ್ತೆ ತಿರುವು ಪಡೆದುಕೊಂಡಿತ್ತು. ಇದೇ ವಿಚಾರ ಮುಂದಿಟ್ಟುಕೊಂಡು ಮಹೇಶ್ ಶೆಟ್ಟಿ ತಿಮರೋಡಿ (Mahesh Shetty thimarodi) ಹಾಗೂ ರಾಕೇಶ್ ಶೆಟ್ಟಿಯವರು ಹಲವು ಸಂದರ್ಭಗಳಲ್ಲಿ ತಮಗೆ ವೇದಿಕೆ ಸಿಕ್ಕಾಗಲೆಲ್ಲ ಕೀಳುಮಟ್ಟದ ಅವಾಚ್ಯ ಪದಗಳಿಂದ ನಿಂದನೆಗೆ ಬಳಸಿಕೊಳ್ಳುತ್ತಿದ್ದರು.
ಇತ್ತ ಮಹೇಶ್ ಶೆಟ್ಟಿಯವರೂ ಕೂಡ ತಮಗೆ ಸಿಕ್ಕ ಅವಕಾಶದಲ್ಲಿ ವಿರೋಧಿಗಳನ್ನು ಹಣಿಯುವುದರಲ್ಲಿ ಹಿಂದೆ ಬಿದ್ದಿಲ್ಲ. ಕಾರ್ಕಳದ ವೇದಿಕೆಯಲ್ಲಿ ಧರ್ಮಾಧಿಕಾರಿಗಳ ವಿರುದ್ಧ ಮಹೇಶ್ ಶೆಟ್ಟಿ ಹಾಗೂ ಅವರ ತಂಡದ ವಿರುದ್ದ ಅಸಂಬದ್ಧ ಪದಬಳಕೆಯ ಆರೋಪವೂ ಕೇಳಿಬಂದಿತ್ತು.
ಯಾವುದೇ ಹೋರಾಟವಾಗಲಿ ಅಥವಾ ಸಂಘಟನೆಯಾಗಲಿ ತಮ್ಮ ಮೂಲ ಉದ್ದೇಶ ಮರೆಯಬಾರದು. ವ್ಯಕ್ತಿ, ವ್ಯಕ್ತಿಗಳ ನಡುವೆ ಏನೇ ಭಿನ್ನಾಭಿಪ್ರಾಯ ಅಥವಾ ವೈಯುಕ್ತಿಕ ದ್ವೇಷ ಇರಲಿ, ಸಾರ್ವಜನಿಕ ವೇದಿಕೆಯಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಬಳಸುವ ಪದಗಳು ಅಥವಾ ಮಾತುಗಳು ಎಂದಿಗೂ ಸಭ್ಯತೆಯ ಎಲ್ಲೆ ಮೀರದಂತಿರಬೇಕು, ಯಾಕೆಂದರೆ ಸಾರ್ವಜನಿಕ ಜೀವನದಲ್ಲಿರುವವರಿಗೆ ಕೀಳುಮಟ್ಟದ ಪದಬಳಕೆ ಶೋಭೆ ತರುವುದಿಲ್ಲ.
ಸಭೆಯ ಮೂಲ ಉದ್ದೇಶ ಮರೆತು ಬಹಿರಂಗವಾಗಿ ಅಶ್ಲೀಲ ಪದಪ್ರಯೋಗದಿಂದ ವೇದಿಕೆ ಹಂಚಿಕೊಂಡವರ ಘನತೆಗೆ ಧಕ್ಕೆಯಾಗುತ್ತದೆ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಪತ್ರಕರ್ತ ಎನಿಸಿ ಕೊಂಡವ ಭಾಷಣ ಮಾಡುತ್ತಿರುವಾಗ ಅಲ್ಲಿಯ ಪತ್ರಕರ್ತರು ಅಲ್ಲಿಂದ ಎದ್ದು ಬರುವುದು ಸೌಜನ್ಯವಲ್ಲ. ಆದರೆ ರಾಕೇಶ್ ಶೆಟ್ಟಿ ಮಾತು ಕೇಳಲಾಗದೆ ಅಲ್ಲಿಯ ಪತ್ರಕರ್ತರು (karkala press team) ಅಲ್ಲಿಂದ ಎದ್ದು ಬಂದಿರುವುದು ರಾಕೇಶ್ ಶೆಟ್ಟಿಗೆ ಪಾಠ ಆಗ ಬೇಕಿತ್ತು. ಆದರೆ ಆಗಿದೆಯೋ ಇಲ್ಲವೋ ಗೊತ್ತಿಲ್ಲ.
