ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಿಬ್ಬಂದಿ, ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಭಟ್ ಅವರಿಗೆ ಬೀಳ್ಕೊಡುಗೆ ಸನ್ಮಾನ.
(Shirva) ಶಿರ್ವ: ಕಳೆದ 16 ವರ್ಷಗಳಿಂದ SCDCC ಬ್ಯಾಂಕಿನ ವಲಯ ಮೇಲ್ವಿಚಾರಕ ರಾಗಿ ಸೇವೆ ಸಲ್ಲಿಸಿ, ಈ ತಿಂಗಳ 31 ರಂದು ನಿವೃತ್ತ ರಾಗಲಿರುವ ಶ್ರೀ ಬಾಲಕೃಷ್ಣ ಭಟ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಶಿರ್ವ ಸಹಕಾರಿ ವ್ಯವಾಸಾಯಿಕ ಸಂಘ. (ನಿ) ಇದರ ಶಿರ್ವ ಸಭಾಂಗಣದಲ್ಲಿ ನೆರವೇರಿತುಜರಗಿಸಲಾಯಿತು.
ಸಮಾರಂಭವು ಸಂಘದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಆಚಾರ್ಯ ಅಭಿನಂದನಾ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ವಾರಿಜಾ ಆರ್ ಕಲ್ಮಾಡಿ, ನಿರ್ದೇಶಕರಾದ ಶ್ರೀ ರಮೇಶ್ ಪ್ರಭು, ಕೃಷ್ಣ, ವಿಲಿಯಂ ಬ್ಯಾಪ್ಟಿಸ್ಟ್ ಮಚಾಡೋ, ವೀರೇಂದ್ರ ಪಾಟ್ಕರ್, ಉಮೇಶ್ ಆಚಾರ್ಯ, ಹರಿಣಾಕ್ಷ ಶೆಟ್ಟಿ, ನಾರಾಯಣ ನಾಯ್ಕ ,ರೀಟಾ ಮಥಾಯಸ್, ವಿಜಯ ಪೂಜಾರಿ , ಅಶೋಕ್ ರಾವ್, ಸಂಜೀವ ಕುಲಾಲ್ ಮತ್ತು ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

