• Home  
  • (shree kshetra polali) ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತರಿಗೆ 9 ಸಾವಿರ ಸೀರೆ ವಿತರಣೆ
- ಕರಾವಳಿ - ದೇಶ-ವಿದೇಶ

(shree kshetra polali) ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತರಿಗೆ 9 ಸಾವಿರ ಸೀರೆ ವಿತರಣೆ

Share: (shree kshetra polali) ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತರಿಗೆ 9 ಸಾವಿರ ಸೀರೆ ವಿತರಣೆ (bantwala) ಬಂಟ್ವಾಳ: ಪೊಳಲಿಶ್ರೀ ರಾಜರಾಜೇಶ್ವರೀ (polali raja Rajeshwari temple) ಸನ್ನಿಧಿಯಲ್ಲಿ  ಗುರುವಾರ ಲಲಿತಾ ಪಂಚಮಿಯ ವಿಶೇಷ ದಿನದಂದು  ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು ೧೮ ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ರಾತ್ರಿ ಪೂಜೆಯ ಬಳಿಕ 8 ಗಂಟೆಯಿಂದ  ೧೦ ಗಂಟೆಯವರೆಗೆ ಸುಮಾರು ಒಂಬತ್ತು ಸಾವಿರ ಭಕ್ತಾದಿಗಳು ದೇವರ ಪ್ರಸಾದ ರೂಪದಲ್ಲಿ ಸೀರೆಯನ್ನು ಪಡೆದುಕೊಂಡರು.   ನವರಾತ್ರಿಯ […]

(shree kshetra polali) ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಕ್ತರಿಗೆ 9 ಸಾವಿರ ಸೀರೆ ವಿತರಣೆ

(bantwala) ಬಂಟ್ವಾಳ: ಪೊಳಲಿಶ್ರೀ ರಾಜರಾಜೇಶ್ವರೀ (polali raja Rajeshwari temple) ಸನ್ನಿಧಿಯಲ್ಲಿ  ಗುರುವಾರ ಲಲಿತಾ ಪಂಚಮಿಯ ವಿಶೇಷ ದಿನದಂದು  ಶ್ರೀ ದೇವರಿಗೆ ಹರಕೆಯಾಗಿ ಬಂದ ಸೀರೆಯನ್ನು ೧೮ ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು.

ರಾತ್ರಿ ಪೂಜೆಯ ಬಳಿಕ 8 ಗಂಟೆಯಿಂದ  ೧೦ ಗಂಟೆಯವರೆಗೆ ಸುಮಾರು ಒಂಬತ್ತು ಸಾವಿರ ಭಕ್ತಾದಿಗಳು ದೇವರ ಪ್ರಸಾದ ರೂಪದಲ್ಲಿ ಸೀರೆಯನ್ನು ಪಡೆದುಕೊಂಡರು. 

 ನವರಾತ್ರಿಯ ಲಲಿತಾ ಪಂಚಮಿಯ ಹಿನ್ನಲೆಯಲ್ಲಿ ಪೊಳಲಿ ಶ್ರೀರಾಜರಾಜೇಶ್ವರೀ ದೇವಿ ದರ್ಶನಕ್ಕಾಗಿ ಬೆಳಗ್ಗಿನಿಂದಲೇ  ಭಕ್ತಾದಿಗಳು ಸಾವಿರಾರು‌ ಸಂಖ್ಯೆಯಲ್ಲಿ‌ ಅಗಮಿಸಿದ್ದರು.

 ಹೀಗೆ ಬಂದವರ ಪೈಕಿ ಕೆಲವರು ರಾತ್ರಿವರೆಗೂ ದೇವಾಲಯದಲ್ಲಿ ಕಾದು ಕುಳಿತು ದೇವಿಯ ಪ್ರಸಾದ ರೂಪದ  ಸ್ತ್ರೀಯರು ಸೀರೆಯನ್ನು ಸ್ವೀಕರಿಸಿದರು.

 ಭಕ್ತಾದಿಗಳು ಸರತಿಯ ಸಾಲಿನಲ್ಲಿ  ಬಂದು  ದೇವಳದ ಪ್ರಮುಖರಿಂದ ಸೀರೆಯನ್ನು ಸ್ವೀಕರಿಸಿದರು.

 ದೇವಳದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ (dr. manjayya Shetty ammunje guttu) ಅಮ್ಮುಂಜೆಗುತ್ತು,  ಮೊಕ್ತೇಸರರಾದ ಯು. ತಾರಾನಾಥ ಆಳ್ವ,ಚೇರ ಸೂರ್ಯ ನಾರಾಯಣ ರಾವ್, ಪವಿತ್ರಪಾಣಿ ಮಾಧವ ಭಟ್, ಅರ್ಚಕರಾದ ಕೆ. ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ್ ಭಟ್, ಕಾರ್ಯನಿರ್ವಹಣಾಧಿಕಾರಿ ಪ್ರವೀಣ್  ಹಾಜರಿದ್ದರು.

 ಮಧ್ಯಾಹ್ನ ಶ್ರೀ ರಾಜರಾಜೇಶ್ವರೀ ಸನ್ನಿಧಿಯಲ್ಲಿ ಚಂಡಿಕಾಹೋಮ, ರಾತ್ರಿ ದೇವರಿಗೆ ನವರಾತ್ರಿ ಪೂಜೆ ಜರುಗಿತು.

 ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ‌ಸುಗಮ ಸಂಗೀತ, ಭಕ್ತಿ ಗಾಯನ, ದಾಸ ಕೀರ್ತನೆ ಮತ್ತು ದೇವರ ನಾಮಗಳ ಗಾಯನ ಹಾಗೂ ಶಾಸ್ತ್ರೀಯ ಸಂಗೀತ  ನಡೆದವು.

Leave a comment

Your email address will not be published. Required fields are marked *

eMedia Kannada  @2025. All Rights Reserved.