• Home  
  • ಯುವಕನಿಗೆ 5 ಲಕ್ಷ ವಂಚನೆ ಪ್ರಕರಣ: ವಿಚಾರಣೆಗಾಗಿ ಚೈತ್ರಾಳನ್ನು (Chaitha K.) ಉಡುಪಿಗೆ ಕರೆತಂದ ಪೊಲೀಸರು
- ಅಪರಾಧ - ಕರಾವಳಿ - ವಿಡಿಯೋ

ಯುವಕನಿಗೆ 5 ಲಕ್ಷ ವಂಚನೆ ಪ್ರಕರಣ: ವಿಚಾರಣೆಗಾಗಿ ಚೈತ್ರಾಳನ್ನು (Chaitha K.) ಉಡುಪಿಗೆ ಕರೆತಂದ ಪೊಲೀಸರು

Share: ಯುವಕನಿಗೆ 5 ಲಕ್ಷ ವಂಚನೆ ಪ್ರಕರಣ: ವಿಚಾರಣೆಗಾಗಿ ಚೈತ್ರಾಳನ್ನು ಉಡುಪಿಗೆ ಕರೆತಂದ ಪೊಲೀಸರು UDUPI \kota) ಕೋಟ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಚೈತ್ರಾಳನ್ನು ಇಂದು ವಿಚಾರಣೆಗಾಗಿ ಕೋಟ ಪೊಲೀಸರು ಕರೆತಂದಿದ್ದಾರೆ. ಕೋಟ ಠಾಣೆ ವ್ಯಾಪ್ತಿಯ ಸುಧೀನ್ ಪೂಜಾರಿ (Sudheen Poojary) ಎಂಬ ಯುವಕ  ತನಗೆ ಚೈತ್ರಾ 5 ಲಕ್ಷ ರೂ ವಂಚನೆ ಮಾಡಿದ್ದಾಗಿ ದೂರು ದಾಖಲಿಸಿದ್ದರು. ಆ ಪ್ರಕರಣದ ವಿಚಾರಣೆಗಾಗಿ ಚೈತ್ರಾಳನ್ನು ಇಲ್ಲಿಗೆ ಕರೆತರಲಾಗಿತ್ತು. ಬ್ರಹ್ಮಾವರದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು […]

CHAITHARA K. ENQUIRY AT UDUPI KOTA

ಯುವಕನಿಗೆ 5 ಲಕ್ಷ ವಂಚನೆ ಪ್ರಕರಣ: ವಿಚಾರಣೆಗಾಗಿ ಚೈತ್ರಾಳನ್ನು ಉಡುಪಿಗೆ ಕರೆತಂದ ಪೊಲೀಸರು

UDUPI \kota) ಕೋಟ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಚೈತ್ರಾಳನ್ನು ಇಂದು ವಿಚಾರಣೆಗಾಗಿ ಕೋಟ ಪೊಲೀಸರು ಕರೆತಂದಿದ್ದಾರೆ.

ಕೋಟ ಠಾಣೆ ವ್ಯಾಪ್ತಿಯ ಸುಧೀನ್ ಪೂಜಾರಿ (Sudheen Poojary) ಎಂಬ ಯುವಕ  ತನಗೆ ಚೈತ್ರಾ 5 ಲಕ್ಷ ರೂ ವಂಚನೆ ಮಾಡಿದ್ದಾಗಿ ದೂರು ದಾಖಲಿಸಿದ್ದರು. ಆ ಪ್ರಕರಣದ ವಿಚಾರಣೆಗಾಗಿ ಚೈತ್ರಾಳನ್ನು ಇಲ್ಲಿಗೆ ಕರೆತರಲಾಗಿತ್ತು. ಬ್ರಹ್ಮಾವರದ

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಕ ದಂಡಾಧಿಕಾರಿ ನ್ಯಾಯಾಲಯ ಸಂಚಾರಿಪೀಠ ಇಲ್ಲಿಯ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮುಂದೆ ಚೈತ್ರಾಳನ್ನು ಹಾಜರು ಪಡಿಸಲಾಯಿತು. ಪೊಲೀಸರು ವಿಚಾರಣೆಗಾಗಿ ಎರಡು ದಿನ ಪೊಲೀಸ್ ಕಸ್ಟಡಿಗೆ ಕೇಳಿದ್ದರು. ಆದರೆ ಒಂದೇ ದಿನದಲ್ಲಿ ಪೊಲೀಸ್ ವಿಚಾರಣೆ ಪೂರ್ಣ ಗೊಂಡ ಬಳಿಕ ಚೈತ್ರಾಳನ್ನು ಕರೆದೊಯ್ಯಲಾಯಿತು.

ಮಾಧ್ಯಮದ ಕ್ಯಾಮೆರಾ ಕಂಡು ಟಾಟಾ ಮಾಡಿದ ಚೈತ್ರಾ

ಚೈತ್ರಾ ಬಹಳ ಲವಲವಿಕೆಯಲ್ಲಿರುವಂತೆ ಕಂಡುಬಂದಳು. ಪೊಲೀಸರು ವಿಚಾರಣೆ ಮುಗಿಸಿ ಮಂಗಳೂರು ಜೈಲಿಗೆ ಚೈತ್ರಳನ್ನು ಕರೆದೊಯ್ದರು. ಅಲ್ಲಿಂದ ಗುರುವಾರ  ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಚೈತ್ರ ರವಾನೆ ಯಾಗುವ ಸಾಧ್ಯತೆ ಇದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.