• Home  
  • ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯ ಧನ ಹಸ್ತಾಂತರ (World Bunts Association)
- ಜೀವನಶೈಲಿ

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯ ಧನ ಹಸ್ತಾಂತರ (World Bunts Association)

Share: ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯ ಧನ ಹಸ್ತಾಂತರ(Mangaluru) ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು ಇದರ ವತಿಯಿಂದ ಸಮಾಜ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಪರಿಹಾರ ಧನ ವಿತರಿಸಲಾಯಿತು.ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು (Aikala Harish Shetty) ಸಮಾಜ ಕಲ್ಯಾಣ ಯೋಜನೆಯಡಿ ಮಂಗಳೂರಿನ ತಲಪಾಡಿ ನಿವಾಸಿ  ಜಯಲತಾ ಶೆಟ್ಟಿಯವರ ವೈದ್ಯಕೀಯ ಶಸ್ತ್ರಚಿಕಿತ್ಸೆ ಗಾಗಿ ಮಂಜೂರಾದ ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು. ಮಂಗಳೂರಿನ ಆಶ್ರಯ ಕಾಲೋನಿ ನಿವಾಸಿ ರೇಷ್ಮಾ ಶೆಟ್ಟಿಯವರ ಪುತ್ರ […]

ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಸಹಾಯ ಧನ ಹಸ್ತಾಂತರ
(Mangaluru) ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು ಇದರ ವತಿಯಿಂದ ಸಮಾಜ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ಪರಿಹಾರ ಧನ ವಿತರಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು (Aikala Harish Shetty) ಸಮಾಜ ಕಲ್ಯಾಣ ಯೋಜನೆಯಡಿ ಮಂಗಳೂರಿನ ತಲಪಾಡಿ ನಿವಾಸಿ  ಜಯಲತಾ ಶೆಟ್ಟಿಯವರ ವೈದ್ಯಕೀಯ ಶಸ್ತ್ರಚಿಕಿತ್ಸೆ ಗಾಗಿ ಮಂಜೂರಾದ ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.
 ಮಂಗಳೂರಿನ ಆಶ್ರಯ ಕಾಲೋನಿ ನಿವಾಸಿ ರೇಷ್ಮಾ ಶೆಟ್ಟಿಯವರ ಪುತ್ರ ೧೨ ವರ್ಷದ ರಿತ್ವಿಕ್ ಶೆಟ್ಟಿಯವರು ಅಂಗವೈಕಲ್ಯದಿಂದ ಬಳಲುತ್ತಿದ್ದು ನಡೆದಾಡಲು ಕಷ್ಟಕರವಾಗಿದೆ. ಅವರ ವೈದ್ಯಕೀಯ ಚಿಕಿತ್ಸೆಗಾಗಿ  ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.
ಉಡುಪಿಯ ಹೆಗ್ಗುಂಜೆ ಗ್ರಾಮದ ನಿವಾಸಿ  ವಿಜಯ ನಾಯಕ್ ರವರು ಕಾಲಿನ ಅಂಗವೈಕಲ್ಯದಿಂದ ಬಳಲುತ್ತಿದ್ದು ನಡೆದಾಡಲು ಕಷ್ಟಕರವಾಗಿದೆ. ಅವರ ವೈದ್ಯಕೀಯ ಚಿಕಿತ್ಸೆಗಾಗಿ ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.
ಕಾಸರಗೋಡಿನ ನಿವಾಸಿ  ರವೀಂದ್ರ ರೈಯವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಅವರ ವೈದ್ಯಕೀಯ ಚಿಕಿತ್ಸೆಗೆ ಮಂಜೂರಾದ ಸಹಾಯ ಧನದ ಚೆಕ್ಕನ್ನು ಅವರ ಪತ್ನಿ ಸರಸ್ವತಿ ರೈಯವರಿಗೆ ಒಕ್ಕೂಟದ ಕಚೇರಿಯಲ್ಲಿ ಹಸ್ತಾoತರಿಸಿದರು.    
ಮಂಗಳೂರಿನ ಮೂಡಬಿದ್ರೆ ನಿವಾಸಿ ಶಿವಪ್ಪ ಶೆಟ್ಟಿಯವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದು, ಅವರಿಗೆ ಮನೆ ನಿರ್ಮಾಣಕ್ಕೆ ಸಹಾಯ ಧನದ ಚೆಕ್ಕನ್ನು ಒಕ್ಕೂಟದ ಕಚೇರಿಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾಜಿ ಕೋಶಾಧಿಕಾರಿ  ಕೊಲ್ಲಾಡಿ ಬಾಲಕೃಷ್ಣ ರೈ, ಕಾರ್ಯಕಾರಿ ಸಮಿತಿ ಸದಸ್ಯರಾದ  ಅಮರೇಶ್ ಶೆಟ್ಟಿ ತಿರುವಾಜೆ, ಆಹ್ವಾನಿತ ಸದಸ್ಯರಾದ  ರವಿರಾಜ್ ಶೆಟ್ಟಿ ಜತ್ತಬೆಟ್ಟು, ಆಡಳಿತಾಧಿಕಾರಿ  ಸಚ್ಚಿದಾನಂದ ಹೆಗ್ಡೆ ಕೊಳ್ಕೆಬೈಲ್, ಫಲಾನುಭವಿಗಳ ಕುಟುಂಬಸ್ಥರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.