ಹೈದರಾಬಾದ್ನಲ್ಲಿ ಭೀಕರ ಅಗ್ನಿ ದುರಂತ: 9 ಜನರ ಸಜೀವ ದಹನ, 10 ಮಂದಿಯ ರಕ್ಷಣೆ
(Hydarabad) ಹೈದರಾಬಾದ್: ನಾಂಪಲ್ಲಿ ಬಜಾರ್ ಘಾಟ್ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 9 ಮಂದಿ ಮೃತಪಟ್ಟಿದ್ದಾರೆ.
ನಾಲ್ಕು ಅಂತಸ್ತಿನ ರಾಸಾಯನಿಕ ಗೋದಾಮಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಗೋದಾಮಿನೊಳಗೆ 10 ಕಾರ್ಮಿಕರು ಮತ್ತು ಮಗುವನ್ನು ರಕ್ಷಿಸಲಾಗಿದೆ.
ಈ ಅವಘಡದಲ್ಲಿ ಗೋದಾಮಿನಲ್ಲಿದ್ದ ಕಾರು ಹಾಗೂ ಎರಡು ಸೈಕಲ್ ಸುಟ್ಟು ಕರಕಲಾಗಿವೆ.
ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ 4 ಅಗ್ನಿಶಾಮಕ ಯಂತ್ರಗಳ ಮೂಲಕ ಬೆಂಕಿ ನಂದಿಸಿದ್ದಾರೆ.
ಮೃತರ ಕುಟುಂಬಕ್ಕೆ ಸರಕಾರದಿಂದ ೫ ಲಕ್ಷ ರೂ. ಪರಿಹಾರ ನೀಡಲಾಗುವುದು10 ಎಂದು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ (Telangana CM Chandrashekhar Rao) ಘೋಷಿಸಿದ್ದಾರೆ.

