ಕುಂದಾಪುರದ ಆನೆಗುಡ್ಡೆ ಕುಂಭಾಶಿ ಶ್ರೀ ವಿನಾಯಕ ದೇವಾಲಯದ ಸನ್ನಿಧಿಯಲ್ಲಿ ಕಾಂತಾರ 2 ಚಿತ್ರದ ಮುಹೂರ್ತ ಕಾರ್ಯಕ್ರಮ ಸಂಪನ್ನ
(Kundapura) ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಸನ್ನಿಧಿಯಲ್ಲಿ ಕಾಂತಾರ 2 ಚಿತ್ರದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಇದುವರೆಗೂ ಚಿತ್ರದ ಬಗ್ಗೆ ಯಾವುದೇ ಸುಳಿವು ನೀಡದ ತಂಡ, ಫಸ್ಟ್ ಗ್ಲಿಪ್ಸ್ ಮೂಲಕ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ. ಮುಂದಿನ ತಿಂಗಳಿನಿಂದ ಕಾಂತಾರ 2 ಚಿತ್ರೀಕರಣ ಆರಂಭವಾಗಲಿದ್ದು, ಮುಂದಿನ ವರ್ಷ ತೆರೆ ಮೇಲೆ ಬರುವ ನಿರೀಕ್ಷೆ ಇದೆ.
ಕರಾವಳಿಯ ಮಣ್ಣಿನ ಕಥೆ ಒಳಗೊಂಡಂತಹ ಕಾಂತಾರ ಚಿತ್ರ ದೇಶದಾದ್ಯಂತ ದೊಡ್ಡ ಸದ್ದು ಮಾಡಿತ್ತು. ಕೇವಲ 17 ಕೋಟಿ ಬಜೆಟ್ ನಲ್ಲಿ ನಿರ್ಮಾಣಗೊಂಡ ಕಾಂತಾರ ಚಿತ್ರ ಕನ್ನಡ ಸೇರಿದಂತೆ ಉಳಿದ ಎಲ್ಲಾ ಭಾಷೆಗಳಿಗೂ ಡಬ್ ಆಗುವ ಮೂಲಕ ಚಿತ್ರರಸಿಕರ ಮನ ಸೂರೆಗೊಂಡಿತ್ತು.
ಕರಾವಳಿ ಕರ್ನಾಟಕದ ದೈ̧ವ, ದೇವರು, ಕಂಬಳ ಆಚರಣೆಯ ವಿಚಾರಗಳನ್ನು ಒಳಗೊಂಡ ಕಾಂತಾರ ಚಿತ್ರಕ್ಕೆ ಮೌತ್ ಪಬ್ಲಿಸಿಟಿ ಮೂಲಕ ದೊಡ್ಡ ಮಟ್ಟದ ಪ್ರಚಾರ ಸೃಷ್ಟಿಯಾಗಿ ವಿಶ್ವದಾದ್ಯಂತ ಸದ್ದು ಮಾಡಿತ್ತು.
ಕಾಂತಾರ ಚಿತ್ರದ ಸಕ್ಸಸ್ ಬಳಿಕ ನಟ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ತಮ್ಮ ಕಾಂತಾರ ಚಿತ್ರದ ಫ್ರಿಕ್ವೆಲ್ ಕಾಂತರಾ 2 ಚಿತ್ರವನ್ನು ತೆರೆ ಮೇಲೆ ತರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಸನ್ನಿಧಿಯಲ್ಲಿ ಕಾಂತಾರ 2 ಚಿತ್ರದ ಮುಹೂರ್ತ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಇಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದಲ್ಲಿ ಸುಮಾರು 14 ಲಕ್ಷ ರೂಪಾಯಿ ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡಲಾಗಿತ್ತು. ದೇವಳದ ಮುಂಭಾಗದಲ್ಲಿ ಹೊಂಬಾಳೆ ಮತ್ತು ಕಾಂತಾರ ಹೆಸರಿನ ಹೂವಿನ ಅಲಂಕಾರದ ಮಾಡಲಾಗಿದೆ.
ಮದ್ಯಾಹ್ನ 12 -15ರ ಸುಮಾರಿಗೆ ದೇವಳದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ (Vijaya Kiragandhuru) ಕಿರಗಂದೂರು, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್̈ (Music Director Ajanish Lokanath), ರಿಷಬ್ ಪತ್ನಿ ಪ್ರಗತಿ ಶೆಟ್ಟಿ(Pragati Shetty) ಹಾಗೂ ಕಾಂತರಾ ಚಿತ್ರ ತಂಡ ಸಮ್ಮುಖದಲ್ಲಿ ಮುಹೂರ್ತ ಕಾರ್ಯಕ್ರಮ ನಡೆಯಿತು.
ಮುಹೂರ್ತದ ಹಿನ್ನೆಲೆಯಲ್ಲಿ ದೇವರಿಗೆ ಮೂಡು ಗಣಪತಿ ಸೇವೆ, ಒಂದು ಮುಡಿ ಕಡಬು ಸೇವೆ, ತ್ರಿಕಾಲ ಪೂಜೆ, ಅನ್ನದಾನ ಸೇವೆ ಸಲ್ಲಿಸಲಾಯಿತು.
ಮುಹೂರ್ತದಲ್ಲಿ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಭಾಗಿಯಾದ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸಂತಸ ಹಂಚಿಕೊಂಡರು.
ಚಿತ್ರತಂಡ ಕಾಂತಾರ ಮುಹೂರ್ತವನ್ನು ಕೂಡ ಆನೆಗುಡ್ಡೆಯಲ್ಲಿ ಮಾಡಿತ್ತು. ಹೀಗಾಗಿ ಕಾಂತಾರ 2 ಇದರ ಫ್ರೀಕ್ವೆಲ್ ಮಹೂರ್ತವನ್ನು ಕೂಡ ಆನೆಗುಡ್ಡೆಯಲ್ಲಿ ಮಾಡಲಾಗುತ್ತಿದೆ. ಆನೆಗುಡ್ಡೆ ನಮಗೆ ಬಹಳ ಇಷ್ಟದ ಕ್ಷೇತ್ರ ನನ್ನ ಮತ್ತು ರಿಷಬ್ ಶೆಟ್ಟಿಯ ಮೊದಲ ಭೇಟಿ ಕೂಡ ಇದೇ ಆನೆಗುಡ್ಡೆಯಲ್ಲಿ ಆಗಿರೋದು ಎಂದು ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಹೇಳಿದ್ದಾರೆ.
ಈ ಸಂದರ್ಭ ನಟ, ನಿರ್ದೇಶಕ ಋಷಭ್ ಶೆಟ್ಟಿ ಮಾತನಾಡಿ, ಒಟ್ಟಾರೆಯಾಗಿ ಕಾಂತಾರ 2 ಚಿತ್ರದ ಮಹೂರ್ತ ಅದ್ದೂರಿಯಾಗಿ ನಡೆದಿದೆ. ಮೊದಲನೇ ಚಿತ್ರಕ್ಕಿಂತ ಇನ್ನೂ ಹೆಚ್ಚಿನ ಬಜೆಟ್ ಹಾಕಿ ಈ ಚಿತ್ರ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಪೂರ್ವಸಿದ್ಧತೆಗಳನ್ನ ಮಾಡಿಕೊಂಡು ಚಿತ್ರ ಚಿತ್ರೀಕರಣಕ್ಕೆ ಹೊರಟಿದೆ. ಇನ್ನು ಚಿತ್ರದ ಫಸ್ಟ್ ಲುಕ್ ಇನ್ನಷ್ಟು ಕ್ರೇಜಿ ಹೆಚ್ಚಿಸಿರೋದು ಕಾಂತಾರ ಚಿತ್ರ ತಂಡಕ್ಕೆ ಸಂತಸ ತಂದಿದೆ ಎಂದರು.
ವಿಶೇಷವಾಗಿ ತುಳು ಚಿತ್ರರಂಗದ ಅರ್ಜುನ್ ಕಾಪಿಕಾಡ್ (Film Star Arjun Kapikad) , ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ (Shain Shetty), ಕೆ ಜಿ ಎಫ್ ಖ್ಯಾತಿಯ ರವಿ ಬಸ್ರೂರು (KGF Ravi Basruru), ಹಾಸ್ಯ ಕಲಾವಿದ ಪ್ರಕಾಶ್ ತುಂಬಿನಾಡು (Prakash Tuminadu), ನಟ ಪ್ರಮೋದ್ ಶೆಟ್ಟಿ (Pramod Shetty)ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
