• Home  
  • ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವು: ತೆಂಗಿನ ಕಾಯಿ ಕೀಳುವಾಗ ದುರ್ಘಟನೆ (Electric shock – young boy death)
- ಅಪರಾಧ

ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವು: ತೆಂಗಿನ ಕಾಯಿ ಕೀಳುವಾಗ ದುರ್ಘಟನೆ (Electric shock – young boy death)

Share: ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವು: ತೆಂಗಿನ ಕಾಯಿ ಕೀಳುವಾಗ ದುರ್ಘಟನೆ  (Kaduru)ಕಡೂರು; ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಪಟ್ಟಣಗೆರೆ ಗ್ರಾಮದಲ್ಲಿ ನಡೆದಿದೆ.   ಮೃತನನ್ನು 27 ವರ್ಷದ ಅಭಿಷೇಕ್ (Abhishek) ಎಂದು ಗುರುತಿಸಲಾಗಿದೆ.  ಮೃತ ಅಭಿಷೇಕ್‌ರವರಿಗೆ  ಮೂರು ಎಕರೆ ಅಡಿಕೆ ತೋಟವಿದೆ.   ಭಾನುವಾರ ಸಂಜೆ ತೋಟದಲ್ಲಿ ತೆಂಗಿನಕಾಯಿ ಕೀಳಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.   ಅಲ್ಯುಮಿನಿಯಂ ಏಣಿಯನ್ನ ಎತ್ತಿಕೊಂಡು ಹೋಗುವಾಗ ಪ್ರೈಮರಿ […]

ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವು: ತೆಂಗಿನ ಕಾಯಿ ಕೀಳುವಾಗ ದುರ್ಘಟನೆ

 (Kaduru)ಕಡೂರು; ವಿದ್ಯುತ್ ತಂತಿಗೆ ಅಲ್ಯೂಮಿನಿಯಂ ಏಣಿ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಪಟ್ಟಣಗೆರೆ ಗ್ರಾಮದಲ್ಲಿ ನಡೆದಿದೆ.

  ಮೃತನನ್ನು 27 ವರ್ಷದ ಅಭಿಷೇಕ್ (Abhishek) ಎಂದು ಗುರುತಿಸಲಾಗಿದೆ.

 ಮೃತ ಅಭಿಷೇಕ್‌ರವರಿಗೆ  ಮೂರು ಎಕರೆ ಅಡಿಕೆ ತೋಟವಿದೆ.  

ಭಾನುವಾರ ಸಂಜೆ ತೋಟದಲ್ಲಿ ತೆಂಗಿನಕಾಯಿ ಕೀಳಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.   ಅಲ್ಯುಮಿನಿಯಂ ಏಣಿಯನ್ನ ಎತ್ತಿಕೊಂಡು ಹೋಗುವಾಗ ಪ್ರೈಮರಿ ಲೈನ್ (11 ಸಾವಿರ ಕಿಲೋ ವ್ಯಾಟ್) ವಿದ್ಯುತ್ ತಂತಿಗೆ ಏಣಿ ತಗುಲಿ ಸಾವನ್ನಪ್ಪಿದ್ದಾನೆ.

ವಿದ್ಯುತ್ ಶಾಕ್ ನಿಂದ ತೋಟದಲ್ಲೇ ಬಿದ್ದಿದ್ದ ಅಭಿಷೇಕ್ ನನ್ನು ಕೂಡಲೇ ಕಡೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾನೆ.

 ಕಡೂರು ಪೊಲೀಸ್ ಠಾಣೆಯಲ್ಲಿ (Kaduru police station)ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.