• Home  
  •  ಶಿರ್ವ ಮಟ್ಟಾರಿನ ಪಾಂಜಗುಡ್ಡೆಯಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಯೋಜನೆಯಾದ ಸಂತ ಆಶ್ರಯಧಾಮ ನಿರ್ಮಾಣಕ್ಕೆ ಭೂಮಿ ಪೂಜೆ, ಭಗವಾಧ್ವಜ ಸ್ಥಾಪನೆ (At Shirva Panjagudde Santa Ashraya Dhama Bhoomi pooja celebration)
- ದೇಶ-ವಿದೇಶ - ಪ್ರಚಲಿತ

 ಶಿರ್ವ ಮಟ್ಟಾರಿನ ಪಾಂಜಗುಡ್ಡೆಯಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಯೋಜನೆಯಾದ ಸಂತ ಆಶ್ರಯಧಾಮ ನಿರ್ಮಾಣಕ್ಕೆ ಭೂಮಿ ಪೂಜೆ, ಭಗವಾಧ್ವಜ ಸ್ಥಾಪನೆ (At Shirva Panjagudde Santa Ashraya Dhama Bhoomi pooja celebration)

Share: ಶಿರ್ವ ಮಟ್ಟಾರಿನ ಪಾಂಜಗುಡ್ಡೆಯಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಯೋಜನೆಯಾದ ಸಂತ ಆಶ್ರಯಧಾಮ ನಿರ್ಮಾಣಕ್ಕೆ ಭೂಮಿ ಪೂಜೆ, ಭಗವಾಧ್ವಜ ಸ್ಥಾಪನೆ (Shirva) ಶಿರ್ವ;  ರವಿವಾರ ಶಿರ್ವ ಮಟ್ಟಾರಿನ ಪಾಂಜಗುಡ್ಡೆಯಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಯೋಜನೆಯಾದ ಸಂತ ಆಶ್ರಯಧಾಮ ನಿರ್ಮಾಣದ ಭೂಮಿಯಲ್ಲಿ ೫೪ ಸಾಧು-ಸಂತರಿAದ ದೀಪ ಬೆಳಗಿಸಿ, ಭಗವಾಧ್ವಜ ಸ್ಥಾಪಿಸಿ ಪ್ರಾರ್ಥನೆ ಸಲ್ಲಿಸಿ  ಚಾಲನೆಯನ್ನು ನೀಡಲಾಯಿತು. ಶಂಕರಪುರ ದ್ವಾರಕಾಮಾಯಿ ಮಠ ಶ್ರೀಸಾಯಿ ಮುಖ್ಯಪ್ರಾಣ  ದೇವಸ್ಥಾನದ (Shnakarpura Sri Sai Mamndira) (ಧರ್ಮದರ್ಶಿ ಶ್ರೀ […]

ಶಿರ್ವ ಮಟ್ಟಾರಿನ ಪಾಂಜಗುಡ್ಡೆಯಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಯೋಜನೆಯಾದ ಸಂತ ಆಶ್ರಯಧಾಮ ನಿರ್ಮಾಣಕ್ಕೆ ಭೂಮಿ ಪೂಜೆ, ಭಗವಾಧ್ವಜ ಸ್ಥಾಪನೆ

(Shirva) ಶಿರ್ವ;  ರವಿವಾರ ಶಿರ್ವ ಮಟ್ಟಾರಿನ ಪಾಂಜಗುಡ್ಡೆಯಲ್ಲಿ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಯೋಜನೆಯಾದ ಸಂತ ಆಶ್ರಯಧಾಮ ನಿರ್ಮಾಣದ ಭೂಮಿಯಲ್ಲಿ ೫೪ ಸಾಧು-ಸಂತರಿAದ ದೀಪ ಬೆಳಗಿಸಿ, ಭಗವಾಧ್ವಜ ಸ್ಥಾಪಿಸಿ ಪ್ರಾರ್ಥನೆ ಸಲ್ಲಿಸಿ  ಚಾಲನೆಯನ್ನು ನೀಡಲಾಯಿತು.

ಶಂಕರಪುರ ದ್ವಾರಕಾಮಾಯಿ ಮಠ ಶ್ರೀಸಾಯಿ ಮುಖ್ಯಪ್ರಾಣ  ದೇವಸ್ಥಾನದ (Shnakarpura Sri Sai Mamndira) (ಧರ್ಮದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ (Guruji Sai Eshwar)  ಮಾತನಾಡಿ, ಭಾರ್ಗವ ಮುನಿಗಳು ಸಾಧು ಸಂತರು ತಪಸ್ಸನ್ನುಗೈದಂತಹ ಪುಣ್ಯಕ್ಷೇತ್ರ ಇದಾಗಿದೆ. ಸಾಧು ಸಂತರು ಅನಾಥರಾಗಬಾರದು ಎಂಬ ಯೋಚನೆಯೊಂದಿಗೆ ಸಂತ ಆಶ್ರಯಧಾಮ ನಿರ್ಮಾಣದ ಯೋಜನೆಯೊಂದಿಗೆ ಭೂಮಿಯು ಅಭಿವೃದ್ಧಿಗೊಳ್ಳಲಿದ್ದು, ಗುರುಕುಲವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭ ಮಂಗಳೂರು ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಪೀಠದ ಶ್ರೀ ಪ್ರವೀಣ್‌ರಾಜ್ ಮಚ್ಚೇಂದ್ರನಾಥ ಬಾಬಾ (Sri Pravinraj Macchendranath Baba), ಬೆಂಗಳೂರು ಶ್ರೀ ಸಿದ್ಧಿವಿನಾಯಕ ಶgಭೇಶ್ವರ ಪೀಠದ ಮಹರ್ಷಿ ಜಯಶ್ರೀನಿವಾಸನ್ ಗುರೂಜಿ, ಮಂಗಳೂರು ಓಂ ಶ್ರೀ ಮಠದ ಮಹಾ ಮಂಡಲೇಶ್ವರ ಸ್ವಾಮಿ, ಓಂ ಶ್ರೀವಿದ್ಯಾನಂದ ಸರಸ್ವತಿ ಮಹಾರಾಜ್, ಮಾತಾಶ್ರೀ ಓಂ ಶ್ರೀ ಶಿವಜ್ಞಾನಮಣಿ ಸರಸ್ವತಿ, ಎ.ಬಿ.ಎಸ್.ಎಸ್‌  ಕೇರಳ ಪ್ರಮುಖ್ ಶ್ರೀ ಸ್ವಾಮಿ ಪ್ರಭಾಕರಾನಂದ ಸರಸ್ವತಿ, ತಮಿಳುನಾಡು ಪ್ರಮುಖ್ ಶ್ರೀ ಯುಗ ಧರ್ಮಗುರು ಗರುಡಾನಂದಜೀ ಮಹಾರಾಜ್, ಎ.ಬಿ.ಎಸ್ ರಾಜ್ಯದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಡಾ| ಅಣ್ಣಮಲೈ ಸಿದ್ಧರ್‌ಜೀ ಮಹಾರಾಜ್, ತಮಿಳುನಾಡು ಸಹಿತ ದೇಶದ ನಾನಾ ರಾಜ್ಯಗಳ ಸಾಧು ಸಂತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ಟ್ರಸ್ಟಿ  ವಿಶ್ವನಾಥ ಸುವರ್ಣ, ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ಮಾರ್ಗದರ್ಶಕರಾದ ಗೀತಾಂಜಲಿ ಎಂ. ಸುವರ್ಣ, ಕೋಟ ಆನಂದ ಸಿ. ಕುಂದರ್, ವಿ.ಹಿಂ.ಪ. ಕಾಪು ತಾಲೂಕು ಅಧ್ಯಕ್ಷ ಜಯಪ್ರಕಾಶ್ ಮತ್ತು ಸ್ಥಳದಾನಿಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.