• Home  
  • ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಖ್ಯಾತ ನಟ, ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು (Renowned Actor, Social worker, Karandadi Leeladhara Shetty and his Wife committed scicide)  
- ಅಪರಾಧ

ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಖ್ಯಾತ ನಟ, ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು (Renowned Actor, Social worker, Karandadi Leeladhara Shetty and his Wife committed scicide)  

Share: ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಖ್ಯಾತ ನಟ, ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು ಕಾಪು : ಕಾಪುವಿನ ಪ್ರಖ್ಯಾತ ನಾಟಕ ಸಂಸ್ಥೆ “ರಂಗತರಂಗ” (Ranga Tharanga)  ನಾಟಕ ಸಂಸ್ಥೆಯ ಸ್ಥಾಪಕ, ಖ್ಯಾತ ನಟ, ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿಯವರು ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಧಾರುಣ ಘಟನೆ ಘಟಿಸಿದೆ. ಬಡಬಗ್ಗರ ಸೇವೆ ದೇವರು ಮೆಚ್ಚುವ ಕೆಲಸ ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜದ […]

ಕಾಪು ರಂಗತರಂಗ ನಾಟಕ ಸಂಸ್ಥೆಯ ಸ್ಥಾಪಕ, ಖ್ಯಾತ ನಟ, ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆಗೆ ಶರಣು

ಕಾಪು : ಕಾಪುವಿನ ಪ್ರಖ್ಯಾತ ನಾಟಕ ಸಂಸ್ಥೆ “ರಂಗತರಂಗ” (Ranga Tharanga)  ನಾಟಕ ಸಂಸ್ಥೆಯ ಸ್ಥಾಪಕ, ಖ್ಯಾತ ನಟ, ಸಮಾಜ ಸೇವಕ ಕರಂದಾಡಿ ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿಯವರು ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಧಾರುಣ ಘಟನೆ ಘಟಿಸಿದೆ.

ಬಡಬಗ್ಗರ ಸೇವೆ ದೇವರು ಮೆಚ್ಚುವ ಕೆಲಸ ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜದ ನಡುವೆ ದೈನ್ಯತೆಯಿಂದ ಹಾಗೂ ಧನ್ಯತಾ ಭಾವದೊಂದಿಗೆ  ಬಾಳಿ ಬದುಕುತ್ತಿದ್ದ ಸಮಾಜರತ್ನವೊಂದು ದಿಢೀರನೆ ಕಣ್ಮರೆಯಾಗಿದೆ.

 ಕಾಪು ರಂಗತರಂಗ ನಾಟಕ ಸಂಸ್ಥೆ ಹುಟ್ಟು ಹಾಕಿ, ಸಾವಿರಾರು ಕಲಾವಿದರಿಗೆ ವೇದಿಗೆ ಕಲ್ಪಿಸಿ ತುಳು ರಂಗಭೂಮಿಯನ್ನು ದೇಶ ವಿದೇಶಗಳಲ್ಲಿ ಮೆರೆಸಿದ ಕೀರ್ತಿ ನಮ್ಮ ಲೀಲಣ್ಣನಿಗೆ ಸಲ್ಲುತ್ತದೆ.

ನಿಜಕ್ಕೂ ಲೀಲಣ್ಣ ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂದರೆ ನಂಬಲಾಗುತ್ತಿಲ್ಲ. ಪರರ ಹಿತವೇ ತನ್ನ ಹಿತ ಎನ್ನುತ್ತಾ ಬದುಕಿದ ಸಹೃದಯಿ ಲೀಲಣ್ಣ ತನ್ನ ಸೇವಾಗುಣದಿಂದಲೇ ಲಕ್ಷಾಂತರ ಮಂದಿಯ ಹೃದಯಗೆದ್ದವರು.

 ಸಮಾಜದಲ್ಲಿನ ವರದಕ್ಷಿಣೆ ಪಿಡುಗನ್ನು ನಿವಾರಿಸುವಲ್ಲಿ ಮುಂಚೂಣಿಯಲ್ಲಿದ್ದು, ಕೆಲಸ ಮಾಡಿದವರು. ಸರಳ ವಿವಾಹ, ಮದ್ಯರಹಿತ ಮೆಹೆಂದಿಗೆ ಉತ್ತೇಜನ ನೀಡಿದ ಮೇರು ವ್ಯಕ್ತಿ. ಬಡಬಗ್ಗರಿಗೆ ಮನೆ ನಿರ್ಮಾಣ, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ದೊಡ್ಡಗುಣ. ಬಡವ, ಶ್ರೀಮಂತ ಎನ್ನುವ ಬೇಧ ಭಾವವಿಲ್ಲದೆ ಎಲ್ಲರೊಂದಿಗಿನ ಅಜಾತಶತ್ರು  ನಾಯಕರಾಗಿ, ಪೂಜ್ಯನೀಯರಾಗಿ ಬೆಳೆದ ವ್ಯಕ್ತಿ. ಲೀಲಣ್ಣ ದೂರದಿಂದ ಬರುವಾಗಲೇ ದೊಡ್ಡವರಾಗಲಿ ಸಣ್ಣ ವಯಸ್ಸಿನವರಾಗಲಿ ಕೈಮುಗಿದು ಹೃದಯ ಪೂರ್ವಕವಾಗಿ ಹರಸುತ್ತಾ ಬರುವಾಗ ಯಾವ ಮಠ ಮಾನ್ಯರಿಗೂ ಸಾಟಿಯಿಲ್ಲದ ಘನತೆ ಎದ್ದು ಕಾಣುತ್ತಿತ್ತು.

 ರಾಜಕೀಯ ಸಲ್ಲದ ಸರಳ ಸಜ್ಜನ ವ್ಯಕ್ತಿಯಾಗಿದ್ದ ಲೀಲಾಧರ ಶೆಟ್ಟಿ ಒಮ್ಮೆ ಕಾಪು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಆನಂತರ‌ ಅವರು ರಾಜಕೀಯದತ್ತ ಮುಖ ಮಾಡಿಲ್ಲ. ಎಲ್ಲಾ ಪಕ್ಷವರೊಂದಿಗೆ ಸೌಹಾರ್ಧತೆಯಿಂದ ಇರುವ ಲೀಲಣ್ಣ, ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.

 ಕಾಪು ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿ, ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದವರು.   

ಕರಂದಾಡಿ ಲೀಲಾಧರ ಶೆಟ್ಟಿಯವರು ದಂಪತಿ ಸಹಿತವಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ.  

ಅವರಿಬ್ಬರ ಆತ್ಮಕ್ಕೆ ಭಗವಂತ ಚಿರ ಶಾಂತಿ ಕರುಣಿಸಲಿ ಎಂದು ನಂಮ ಸಂಸ್ಥೆಯ ಹಾರೈಕೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.