ಪ್ರಭಾಕರ ಭಟ್ ವಿರುದ್ಧ ಪ್ರತಿಭಟಿಸಲು ಸಜ್ಜಾದ ಮಹಿಳೆಯರಿಗೆ ಐ.ಪಿ.ಸಿ. 107 ರಡಿ ನೋಟೀಸ್ ಜಾರಿ: ವಿಮೆನ್ ಇಂಡಿಯ ಮೂವ್ಮೆಂಟ್
ಮಂಗಳೂರು: ಪ್ರಭಾಕರ ಭಟ್ (Kalladka Prabhakara Bhat) ವಿರುದ್ಧ ಪ್ರತಿಭಟಿಸಲು ಸಜ್ಜಾದ ಮಹಿಳೆಯರಿಗೆ ಐ.ಪಿ.ಸಿ. 107 ರಡಿ ನೋಟೀಸ್ ಜಾರಿಯಾಗಿದ್ದು, ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದೇವೆ ಎಂದು ವಿಮೆನ್ ಇಂಡಿಯ ಮೂವ್ಮೆಂಟ್ ಪತ್ರಿಕಾ ಗೋಷ್ಠಿಯಲಿ ಹೇಳಿದೆ.
ಮುಸ್ಲಿಂ ಮಹಿಳೆಯರ ಬಗ್ಗೆ ಅವಾಚ್ಯವಾಗಿ ಅವಹೇಳನಕಾರಿ ಹೇಳಿಕೆ ನೀಡಿದ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ವಿಮೆನ್ ಇಂಡಿಯಾ ಮೂವ್ಮೆಂಟ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಕಲ್ಲಡ್ಕದಲ್ಲಿ 26/ 12/ 2023 ಮಂಗಳವಾರ 3 ಗಂಟೆಗೆ ಸರಿಯಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಪೊಲೀಸ್ ಇಲಾಖೆ ವಿನಾಕಾರಣ ಅನುಮತಿ ನಿರಾಕರಿಸಿತ್ತು.
ಮರುದಿನ 27/ 12 /2023 ರಂದೂ ಕೂಡ ಶಾಂತಿಯುತ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಪೊಲೀಸ್ ಇಲಾಖೆ ಮಹಿಳೆಯರ ಮೇಲೆ ಸೆಕ್ಷನ್ 107 ರಡಿ ಕೇಸ್ ದಾಖಲಿಸಿದೆ. ಇದನ್ನು ವಿಮೆನ್ ಇಂಡಿಯ ಮೂವ್ಮೆಂಟ್ ತೀವ್ರವಾಗಿ ಖಂಡಿಸುತ್ತದೆ.
ದ್ವೇಷ ಭಾಷಣದ ದೊಡ್ಡ ಇತಿಹಾಸವನ್ನೇ ಹೊಂದಿರುವ ಪ್ರಭಾಕರ್ ಭಟ್ರವರನ್ನು ಬಂಧಿಸಲು ಇದುವರೆಗೆ ಧೈರ್ಯ ತೋರದ ಪೋಲೀಸ್ ಇಲಾಖೆ, ಅದರ ವಿರುದ್ಧ ಪ್ರತಿಭಟಿಸಲು ಸಜ್ಜಾದ ಮಹಿಳೆಯರನ್ನುಠಾಣೆಯಲ್ಲಿ ದಿನವಿಡೀ ಸತಾಯಿಸಿದ್ದಾರೆ. ಮಾತ್ರವಲ್ಲ ಮರುದಿನ ನೋಟೀಸು ಜಾರಿಗೊಳಿಸಿರುವುದು ಅಕ್ಷಮ್ಯ.
ಸಬಲೀಕರಣದ ಬಗ್ಗೆ , ಕಾನೂನು ಸುವ್ಯವಸ್ಥೆ ಬಗ್ಗೆ, ಸಾಂವಿಧಾನಿಕ ನ್ಯಾಯದ ಬಗ್ಗೆ ಮಾತುಗಳನ್ನಾಡುವ ಸರ್ಕಾರಕ್ಕೆ ಇಂದಿನ ತನಕ ಆರೋಪಿಯೊಬ್ಬನನ್ನು ಬಂಧಿಸಲು ಸಾಧ್ಯ ಆಗದಿರುವುದು ವಿಪರ್ಯಾಸ.
ಸರಕಾರ ಬಿಜೆಪಿಯ IT ಸೆಲ್ ಗೆ ಬೆದರಿದಂತೆ ತೋರುತ್ತದೆ. ಮಾತ್ರವಲ್ಲ, ಮುಂಬರುವ ಲೋಕಸಭಾ ಚುನಾವಣೆಗೆ ಮತ ಬೇಟೆಯ ಭರಾಟೆಯಲ್ಲಿ ಮೃದು ಹಿಂದುತ್ವಕ್ಕೆ ಮಣೆ ಹಾಕಿರುವ ಕಾಂಗ್ರೆಸ್ ಸರ್ಕಾರ ಆರ್ ಎಸ್ ಎಸ್ ನಾಯಕರನ್ನು ಬಂಧಿಸುವ ಇಚ್ಚಾಶಕ್ತಿಯನ್ನು ಹೊಂದಿಲ್ಲ.
ತನ್ನ ಚುನಾವಣಾ ರಾಜಕೀಯಕ್ಕಾಗಿ ಪ್ರಜಾಪ್ರಭುತ್ವ ಸಂವಿಧಾನ ಮತ್ತು ನ್ಯಾಯಗಳನ್ನು ಬಲಿ ನೀಡುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ನಿಲುವಾಗಿದೆ. ಇದನ್ನು ಸರಕಾರ ಹಲವು ಬಾರಿ ಸಾಬೀತುಪಡಿಸಿದೆ.
ವಿಶೇಷತಃ 2013ರಲ್ಲಿ ಇದೇ ಪ್ರಭಾಕರ್ ಭಟ್ರವರ ಕೇಸ್ ಅನ್ನು ರೀ ಓಪನ್ ಮಾಡಿ ಬಂದಿಸುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಐದು ವರ್ಷದುದ್ದಕ್ಕೂ ಬಂಧಿಸಿಲ್ಲ. ಇದೀಗ ಪುನಃ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಅದೇ ಸಿದ್ದರಾಮಯ್ಯ ಸರ್ಕಾರ ತನ್ನ ಹಳೆ ಚಾಳಿಯನ್ನು ಮುಂದುವರಿಸಿದೆ. ಇದರಿಂದಾಗಿ ಚುನಾವಣೆಗೆ ಮುನ್ನ ನೀಡಿದ ಭರವಸೆಗಳೆಲ್ಲವೂ ನೀರಿನ ಮೇಲಿನ ಹೋಮದಂತಾಗಿದೆ. ಈ ಮೂಲಕ ಸರಕಾರ ಮತದಾರರನ್ನು ಕೂಡ ವಂಚಿಸುತ್ತಿದೆ.
ಸರಕಾರಕ್ಕೆ ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ನೈಜ ಕಾಳಜಿ, ನಂಬಿಕೆ, ಪ್ರೇಮ ಇರುವುದಾದರೆ ತಕ್ಷಣ ಆರೋಪಿಯನ್ನು ಬಂಧಿಸಲಿ.
ಮಹಿಳೆಯರ ಮೇಲೆ 107 ರಡಿ ನೋಟೀಸ್ ಕಳುಹಿಸಿರುವ ಅಧಿಕಾರಿಯ ವಿರುದ್ಧ ಕೋರ್ಟಿನಲ್ಲಿ ಪ್ರಶ್ನಿಸಲಿದ್ದೇವೆ. ಅಧಿಕಾರಿ ವರ್ಗ ಮಹಿಳೆಯರ ಮೇಲೆ ನಡೆಸಿದ ದರ್ಪವನ್ನು ಕಾನೂನು ಹೋರಾಟದ ಮೂಲಕ ಎದುರಿಸಲಿದಿದ್ದೇವೆ.
ಎಂದು ವಿಮನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾರವರು ಪತ್ರಿಕಾ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ (Fathima Naseema) ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ (Nasriya Bellare), ರಾಜ್ಯ ಮಾಧ್ಯಮ ವಕ್ತಾರೆ ಶಾಹಿದಾ ತಸ್ನೀಂ, (Shahida Thasneen) ರಾಜ್ಯ ಸಮಿತಿ ಸದಸ್ಯೆ ಝುಲೇಖ ಬಜ್ಪೆ (Zulekha Bajpe) ಜಿಲ್ಲಾ ಕಾರ್ಯದರ್ಶಿ ಅಝ್ವೀನ (Azweena) ಉಪಸ್ಥಿತರಿದ್ದರು.

