• Home  
  • ಡಿ.30 ಮತ್ತು 31 ರಂದು ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಕಾಪುವಿನಲ್ಲಿ ಬಿರುವೆರ್‌ ಕಾಪು ಟ್ರೋಫಿ‌ ಕ್ರಿಕೆಟ್ ಪಂದ್ಯಾಟ 2023 (Biruve Kaup Cricket Tournament 2023 at Kaup by Biruver Kaup Seva Samithi 0n 30th- 31st Dec)
- ಕ್ರೀಡೆ - ಪ್ರಚಲಿತ

ಡಿ.30 ಮತ್ತು 31 ರಂದು ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಕಾಪುವಿನಲ್ಲಿ ಬಿರುವೆರ್‌ ಕಾಪು ಟ್ರೋಫಿ‌ ಕ್ರಿಕೆಟ್ ಪಂದ್ಯಾಟ 2023 (Biruve Kaup Cricket Tournament 2023 at Kaup by Biruver Kaup Seva Samithi 0n 30th- 31st Dec)

Share: ಡಿ.30 ಮತ್ತು 31 ರಂದು ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಕಾಪುವಿನಲ್ಲಿ ಬಿರುವೆರ್‌ ಕಾಪು ಟ್ರೋಫಿ‌ ಕ್ರಿಕೆಟ್ ಪಂದ್ಯಾಟ 2023 ಕಾಪು: ಬಿರುವೆರ್ ಕಾಪು ಸೇವಾ ಸಮಿತಿ ಕಾಪು ಇವರ ಆಶ್ರಯದಲ್ಲಿ ಬಿಲ್ಲವ ಸಮಾಜ ಭಾಂದವರ ಸಹಬಾಗಿತ್ವದೊಂದಿಗೆ ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ಡಿ.30 ಮತ್ತು 31 ರಂದು ಬಿರುವೆರ್‌ ಕಾಪು ಟ್ರೋಫಿ‌ ಕ್ರಿಕೆಟ್ ಪಂದ್ಯಾಟ 2023 ನಡೆಯಲಿದೆ ಎಂದು ಬಿರುವೆರ್ ಕಾಪು ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್. ಕೋಟ್ಯಾನ್ (Balakrishna R […]

ಡಿ.30 ಮತ್ತು 31 ರಂದು ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಕಾಪುವಿನಲ್ಲಿ ಬಿರುವೆರ್‌ ಕಾಪು ಟ್ರೋಫಿ‌ ಕ್ರಿಕೆಟ್ ಪಂದ್ಯಾಟ 2023

ಕಾಪು: ಬಿರುವೆರ್ ಕಾಪು ಸೇವಾ ಸಮಿತಿ ಕಾಪು ಇವರ ಆಶ್ರಯದಲ್ಲಿ ಬಿಲ್ಲವ ಸಮಾಜ ಭಾಂದವರ ಸಹಬಾಗಿತ್ವದೊಂದಿಗೆ ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ಡಿ.30 ಮತ್ತು 31 ರಂದು ಬಿರುವೆರ್‌ ಕಾಪು ಟ್ರೋಫಿ‌ ಕ್ರಿಕೆಟ್ ಪಂದ್ಯಾಟ 2023 ನಡೆಯಲಿದೆ ಎಂದು ಬಿರುವೆರ್ ಕಾಪು ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್. ಕೋಟ್ಯಾನ್ (Balakrishna R Kotian)ತಿಳಿಸಿದರು.

 ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಮಾಜ ಸೇವೆಯ ಸಹಾಯಾರ್ಥವಾಗಿ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಬಿಲ್ಲವ ಸಮುದಾಯ ಭಾಂದವರಿಗೆ ಲೀಗ್ ಕಮ್‌ ನಾಕೌಟ್ ಮಾದರಿಯ 90 ಗಜಗಳ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದರು.

 ಉಡುಪಿ‌ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹತ್ತು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ. ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಲಾಗಿದ್ದು ವಿಜೇತರಿಗೆ ಪ್ರಥಮ 88,888/- ಮತ್ತು ಟ್ರೋಫಿ, ದ್ವಿತೀಯ 55,555/- ಮತ್ತು ಟ್ರೋಫಿ, ಉತ್ತಮ ದಾಂಡಿಗ, ಉತ್ತಮ ಎಸೆತಗಾರ, ಸರಣಿ ಶ್ರೇಷ್ಠ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

 ವಿದ್ಯೆ, ಉದ್ಯೋಗ, ನೆರವು ಮತ್ತು ಸಂಘಟನೆಯ ಉದ್ದೇಶಕ್ಕಾಗಿ ಸ್ಥಾಪನೆಗೊಂಡಿರುವ ಬಿರುವೆರ್ ಕಾಪು ಸಂಘಟನೆಯು ಕಳೆದ ಮೂರು ವರ್ಷಗಳಲ್ಲಿ 23 ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು ಅದರಲ್ಲಿ ಜ್ಞಾನದೀವಿಗೆ‌ ಯೋಜನೆಯಡಿ ಪ್ರತೀ ವರ್ಷ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ ಎಂದರು.   ಸುದ್ದಿಗೋಷ್ಟಿಯಲ್ಲಿ ಬಿರುವೆರ್ ಕಾಪು ಸೇವಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಸುಜನ್ ಎಲ್. ಸುವರ್ಣ, ಪಂದ್ಯಾಟದ ಉಸ್ತುವಾರಿಗಳಾದ ಯಾದವ ಪೂಜಾರಿ, ಯೋಗೀಶ್ ಕೋಟ್ಯಾನ್, ಸದಸ್ಯರಾದ ರವಿರಾಜ್ ಶಂಕರಪುರ, ವರುಣ್ ಬಿ. ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು

Leave a comment

Your email address will not be published. Required fields are marked *

eMedia Kannada  @2025. All Rights Reserved.