• Home  
  • ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧುನೀಕೃತ ಉಚ್ಚಿಲ ಶಾಖೆಗೆ ಅಮೇರಿಕಾದ ಅಧ್ಯಯನ ತಂಡದ ನಿಯೋಗ ಭೇಟಿ (US Study team Deligation visit to Uchila Branch of Belapu Sahakari co op Society)
- ದೇಶ-ವಿದೇಶ - ವ್ಯವಹಾರ

ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧುನೀಕೃತ ಉಚ್ಚಿಲ ಶಾಖೆಗೆ ಅಮೇರಿಕಾದ ಅಧ್ಯಯನ ತಂಡದ ನಿಯೋಗ ಭೇಟಿ (US Study team Deligation visit to Uchila Branch of Belapu Sahakari co op Society)

Share: ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧುನೀಕೃತ ಉಚ್ಚಿಲ ಶಾಖೆಗೆ ಅಮೇರಿಕಾದ ಅಧ್ಯಯನ ತಂಡದ ನಿಯೋಗ ಭೇಟಿ  ಭಾರತ ಭೇಟಿ ಅತ್ಯಂತ ಪ್ರಭಾವಶಾಲಿ : ಅಮೇರಿಕಾ ಪೆನ್ಸೊಲೋನಿಯಾ ವಿವಿ ಪ್ರೊ. ಡಾ. ಫಮೀದಾ ಹ್ಯಾಂಡಿ (DR Famida Handy) (Belapu) ಬೆಳಪು: ಅಮೇರಿಕಾ ದೇಶದಲ್ಲೂ ಬಡತನವಿದೆ. ಮಹಿಳೆಯರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅಮೇರಿಕಾದ ಗ್ರಾಮೀಣ ಭಾಗದ ಮಹಿಳಾ ಸಬಲೀಕರಣದ ಉದ್ದೇಶದಿಂದ ಕಳೆದ ೧೧ ವರ್ಷಗಳಿಂದ ಅಲ್ಲಿನ ಅಧ್ಯಯನಶೀಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತಂದು ಇಲ್ಲಿನ ಮಹಿಳಾ ಸಬಲೀಕರಣದ ಚಿತ್ರಣವನ್ನು […]

ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧುನೀಕೃತ ಉಚ್ಚಿಲ ಶಾಖೆಗೆ ಅಮೇರಿಕಾದ ಅಧ್ಯಯನ ತಂಡದ ನಿಯೋಗ ಭೇಟಿ

 ಭಾರತ ಭೇಟಿ ಅತ್ಯಂತ ಪ್ರಭಾವಶಾಲಿ : ಅಮೇರಿಕಾ ಪೆನ್ಸೊಲೋನಿಯಾ ವಿವಿ ಪ್ರೊ. ಡಾ. ಫಮೀದಾ ಹ್ಯಾಂಡಿ (DR Famida Handy)

(Belapu) ಬೆಳಪು: ಅಮೇರಿಕಾ ದೇಶದಲ್ಲೂ ಬಡತನವಿದೆ. ಮಹಿಳೆಯರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅಮೇರಿಕಾದ ಗ್ರಾಮೀಣ ಭಾಗದ ಮಹಿಳಾ ಸಬಲೀಕರಣದ ಉದ್ದೇಶದಿಂದ ಕಳೆದ ೧೧ ವರ್ಷಗಳಿಂದ ಅಲ್ಲಿನ ಅಧ್ಯಯನಶೀಲ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತಂದು ಇಲ್ಲಿನ ಮಹಿಳಾ ಸಬಲೀಕರಣದ ಚಿತ್ರಣವನ್ನು ಅವರಿಗೆ ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದ್ದು, ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ಅಮೇರಿಕಾದ ಪ್ರಮುಖ ೩ ವಿವಿಗಳಲ್ಲಿ ಒಂದಾದ ಪೆನೊಸೋಲೋನಿಯಾ ವಿಶ್ವವಿದ್ಯಾನಿಲಯದ ಪ್ರೊ. ಡಾ. ಫಮೀದಾ ಹ್ಯಾಂಡಿ ಹೇಳಿದ್ದಾರೆ.

ಸ್ವಸಹಾಯ ಸಂಘಗಳಿಂದ ಗ್ರಾಮಾಭಿವೃದ್ಧಿ, ಮಹಿಳೆಯರ ಆರ್ಥಿಕ ಸ್ಥಿತಿಗತಿ, ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಬಗ್ಗೆ ಅಧ್ಯಯನಕ್ಕಾಗಿ ನಿಟ್ಟಿ ವಿವಿ ಸಹಯೋಗದೊಂದಿಗೆ ಇಲ್ಲಿನ ಸಹಕಾರಿ ಸೊಸೈಟಿಗಳ ಸ್ವಸಹಾಯ ಸಂಘಗಳ ಅಧ್ಯಯನಕ್ಕಾಗಿ ಬಂದಿದ್ದ ಅಮೇರಿಕಾದ ವಿದ್ಯಾರ್ಥಿಗಳು ಶನಿವಾರ ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧುನೀಕೃತ ಉಚ್ಚಿಲ ಶಾಖೆಗೆ ಭೇಟಿ ನೀಡಿದ ಸಂದರ್ಭ ಅಲ್ಲಿನ ಸಹಕಾರಿ ಮಹಲ್ ಸಭಾಂಗಣದಲ್ಲಿ ಮಾಧ್ಯಮ ಜತೆ ಮಾತನಾಡಿದರು.

ಇಲ್ಲಿನ ಹವಾಮಾನ ತೀವ್ರ ಸಮಸ್ಯೆ ತಂದೊಡ್ಡಿತಾದರೂ ಕರಾವಳಿಗರ ಆತಿಥ್ಯಕ್ಕೆ ಮತ್ತು ಊಟೋಪಚಾರಕ್ಕೆ ಮನಸೋತಿದ್ದೇವೆ. ಇಲ್ಲಿನ ಭೇಟಿ ಅವಿಸ್ಮರಣೀಯ ಕ್ಷಣ. ಮುಖ್ಯವಾಗಿ ಮಹಿಳಾ ಸಬಲೀಕರಣ ಬಗ್ಗೆ ನಡೆಸಿದ ಅಧ್ಯಯನದಿಂದ ಅಮೇರಿಕಾದ ಗ್ರಾಮೀಣ ಭಾಗದಲ್ಲಿ ಅನುಷ್ಠಾನಗೊಳಿಸಲು ಸರಕಾರಕ್ಕೆ ವರದಿ ಸಲ್ಲಿಸಲಿದ್ದೇವೆ ಎಂದ ಫಮೀದಾ ಹ್ಯಾಂಡಿ, ಕಳೆದ ೧೧ ವರ್ಷಗಳಿಂದ ಇಲ್ಲಿನ ಮಹಿಳೆಯರ ಆರ್ಥಿಕ, ಸಾಮಾಜಿಕ ಉನ್ನತೀಕರಣ ಕಂಡ ಪ್ರಭಾವಿತರಾಗಿದ್ದೇವೆ. ನವೋದಯ ಚಾರಿಟೇಬಲ್ ಟ್ರಸ್ಟ್ ಮತ್ತು ನಿಟ್ಟಿ ವಿವಿ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದರು.

ಮೂಲತಃ ಪುಣೆಯವರಾದ ಫಮೀದಾ ಹ್ಯಾಂಡಿಯವರು ಅಮೇರಿಕಾದಲ್ಲೆ ನೆಲಸಿದ್ದು, ಭಾರತದ ಬಗ್ಗೆ ವಿಶೇಷ ಒಲವು ಹೊಂದಿದ್ದ ಕಾರಣ ಮತ್ತು ಕರಾವಳಿಯ ಸ್ವಸಹಾಯ ಸಂಘಗಳ ಬಗ್ಗೆ ಪ್ರಭಾವಿತರಾಗಿ ೧೧ ವರ್ಷಗಳಿಂದ ವಿದ್ಯಾರ್ಥಿಗಳನ್ನು ಅಧ್ಯಯನಕ್ಕಾಗಿ ಕರೆದುಕೊಂಡು ಬರುತ್ತಿದ್ದಾರೆ. ಮಹಿಳಾ ಸಬಲೀಕರಣದ ಜತೆಗೆ ಹೈನುಗಾರಿಕೆ ಬಗ್ಗೆಯೂ ಅವರು ಒಲವು ಹೊಂದಿದ್ದಾರೆ ಎಂದು ತಂಡದ ಮಾರ್ಗದರ್ಶಕರಾದ ನಿಟ್ಟಿ ವಿವಿಯ ಪ್ರೊ. ವಿನೋದ್ ದೀಕ್ಷಿತ್ (Prof  Vinod Dhikshith) ವಿವರಿಸಿದರು.

ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು (DR Deviprasad Shetty Belapu) ಅತಿಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ, ಪ್ರೊ.ಫಮೀದಾ ಹ್ಯಾಂಡಿಯವರನ್ನು ಸನ್ಮಾನಿಸಿ ಗೌರವಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರು ಅಗಿರುವ ಡಾ. ದೇವಿಪ್ರಸಾದ್ ಶೆಟ್ಟಿ ಅವರೊಂದಿಗೆ ಅಮೆರಿಕಾ ತಂಡದ ಸದಸ್ಯರು ವಿಚಾರ ವಿನಿಮಯ ನಡೆಸಿದರು.

ಈ ಸಂದರ್ಭ ಬೆಳುಪುವಿನ ಬಟ್ಟೆ ತಯಾರಿಕಾ ಘಟಕ ಮತ್ತು ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರ ಗೋಶಾಲೆಗೆ ಭೇಟಿ ನೀಡಿ, ಹೈನುಗಾರಿಕೆ ಬಗ್ಗೆ ಮಾಹಿತಿ ಕಲೆ ಹಾಕಿದರು. ಬೆಳಪು ಸಂಘದ ೩೦೦ ಸ್ವಸಹಾಯ ಸಂಘಗಳ ಬಗ್ಗೆಯೂ ಅವರು ಮಾಹಿತಿ ಕಲೆಹಾಕಿದರು.

ನವೋದಯ ಸ್ವಸಹಾಯ ಸಂಘಗಳ ಅಧಿಕಾರಿ ಹರಿನಾಥ್, ಬೆಳಪು ಸಂಘದ ನಿರ್ದೇಶಕರಾದ ದ್ಯುಮಣಿ ಭಟ್, ಪಾಂಡು ಶೆಟ್ಟಿ, ಪಾಂಡು ಶೇರಿಗಾರ್, ಮೀನಾ ಪೂಜಾರ್ತಿ, ಶೋಭಾ ಭಟ್, ಸುಗುಣಾ ಅಂಚನ್, ಸಂಘದ ಕಾರ್ಯನಿರ್ವಹಣಾಧಿಕಾರಿ ಸುಲೋಚನಾ ದೇವಾಡಿಗ, ವಿವಿಧ ಶಾಖಾ ಪ್ರಬಂಧಕರು ಉಪಸ್ಥಿತರಿದ್ದರು.

ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.