• Home  
  • ಕಾರ್ಕಳ: ಪೊಸ್ರಾಲು ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ (Karkala: Anniversary of Posralu Yakshgana Mandali, Satyanarayana pooja)
- ಕರಾವಳಿ

ಕಾರ್ಕಳ: ಪೊಸ್ರಾಲು ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ (Karkala: Anniversary of Posralu Yakshgana Mandali, Satyanarayana pooja)

Share: ಕಾರ್ಕಳ: ಪೊಸ್ರಾಲು ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ   ಕಾರ್ಕಳ: ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಸಚ್ಚೇರಿಪೇಟೆ ಇದರ 57ನೇ ವರ್ಷದ ವಾರ್ಷಿಕೋತ್ಸವ ಹಾಗು 32ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸಚ್ಚೇರಿಪೇಟೆಯ ಗಾಂಧಿ ಮೈದಾನದಲ್ಲಿ ನಡೆಯಿತು.    ಶ್ರೀ ಕ್ಷೇತ್ರ ಪೊಸ್ರಾಲಿನ ಪ್ರಧಾನ ಅರ್ಚಕ ಪೂಜ್ಯ ಪುರುಷೋತ್ತಮ ಭಟ್ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಯಕ್ಷಗಾನ ಮಂಡಳಿಯ ಗೌರವಾಧ್ಯಕ್ಷ ಸುಭೋದ ಶೆಟ್ಟಿ ಸಚ್ಚರಪರಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ […]

ಕಾರ್ಕಳ: ಪೊಸ್ರಾಲು ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ

  ಕಾರ್ಕಳ: ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಸಚ್ಚೇರಿಪೇಟೆ ಇದರ 57ನೇ ವರ್ಷದ ವಾರ್ಷಿಕೋತ್ಸವ ಹಾಗು 32ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸಚ್ಚೇರಿಪೇಟೆಯ ಗಾಂಧಿ ಮೈದಾನದಲ್ಲಿ ನಡೆಯಿತು.

   ಶ್ರೀ ಕ್ಷೇತ್ರ ಪೊಸ್ರಾಲಿನ ಪ್ರಧಾನ ಅರ್ಚಕ ಪೂಜ್ಯ ಪುರುಷೋತ್ತಮ ಭಟ್ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಯಕ್ಷಗಾನ ಮಂಡಳಿಯ ಗೌರವಾಧ್ಯಕ್ಷ ಸುಭೋದ ಶೆಟ್ಟಿ ಸಚ್ಚರಪರಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸ್ಥಳೀಯ ಪೊಸ್ರಾಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಅಂಗವಿಕಲ ಶಾಲಾ ಮಕ್ಕಳಿಗೆ ಸಹಾಯಧನ ವಿತರಣೆ ನಡೆಯಿತು. ಬಳಿಕ ಮುಂಡ್ಕೂರು ಸೇವಾಭಾರತಿ ಭಜನಾ ತಂಡದ ತರಬೇತುದಾರ ಶ್ರೀನಿವಾಸ ಪೂಜಾರಿ ಎರ್ಲಪಾಡಿ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮುಂಡ್ಕೂರು ಗ್ರಾಮ ಪಂಚಾಯತ್ ಸದಸ್ಯ ಸಂದೀಪ್ ಶೆಟ್ಟಿ ಸಚ್ಚರಪರಾರಿ, ಉದ್ಯಮಿ ರಮೇಶ್ ಶೆಟ್ಟಿ ಸಚ್ಚರಪರಾರಿ, ಜಗದೀಶ್ ಶೆಟ್ಟಿ ನಡಿಗುತ್ತು, ಮುಂಡ್ಕೂರು ಕೆನರಾ ಬ್ಯಾಂಕ್‌ನ ಪ್ರಬಂಧಕ ಧನಂಜಯ ಕುಮಾರ್, ಇನ್ನಾ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಕುಶ ಆರ್ ಮೂಲ್ಯ, ಉದ್ಯಮಿ ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು.

ಉಮೇಶ್ ಆಚಾರ್ಯ ವರದಿ ವಾಚಿಸಿದರು.

ಯಕ್ಷಗಾನ ಮಂಡಳಿಯ ಅಧ್ಯಕ್ಷ ಶ್ರೀಧರ್ ಸನಿಲ್ ಸ್ವಾಗತಿಸಿದರು.

 ಪ್ರಮೋದಿನಿ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಕೃತಿ ಸದಾನಂದ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.