ಪರ್ಯಾಯ ಪೀಠೋಹಾರಣ ಗೈಯುವ ಮೊದಲು ಪುತ್ತಿಗೆ ಶ್ರೀಗಳಿಂದ ಕಾಪುವಿನ ದಂಡ ತೀರ್ಥದಲ್ಲಿ ಸ್ನಾನ
(Kaup) ಕಾಪು: ನಾಲ್ಕನೇ ಬಾರಿಗೆ ಪುತ್ತಿಗೆ ಪೀಠೋಹರಣ ಗೈಯಲ್ಲಿರುವ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮೀಜಿಯವರು (Sugunendra Theertha Swamiji) ಗುರುವಾರ ಬೆಳಗಿನ ಜಾವ ಎರಡು ಗಂಟೆಗೆ ಕಾಪು ಬಳಿಯ ದಂಡ ತೀರ್ಥ ಕೆರೆಯಲ್ಲಿ ಪವಿತ್ರ ಸ್ನಾನ ಮಾಡಿ ಪರ್ಯಾಯ ಪೀಠೋಹರಣಕ್ಕೆ ನಿರ್ಗಮಿಸಿದ್ದಾರೆ.
ರಾತ್ರಿ ಒಂದು ಗಂಟೆಯ ಸುಮಾರಿಗೆ ಶ್ರೀ ಕೃಷ್ಣಾಪುರ ಮಠದ ಆಧೀನದಲ್ಲಿರುವ ದಂಡ ತೀರ್ಥ ಮಠಕ್ಕೆ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿಯವರು(Susheendra Teertha Swamiji) ತಮ್ಮ ಶಿಷ್ಯ ವೃಂದದವರೊಂದಿಗೆ ಆಗಮಿಸಿ ದಂಡ ತೀರ್ಥ ಕೆರೆಯಲ್ಲಿ ಸ್ನಾನ ಮಾಡಿದರು ಸ್ವಾಮೀಜಿಯವರು ಮಠದ ದೇವರ ಕೋಣೆಯಲ್ಲಿ ಜಪ, ತಪದ ನಂತರ ಮಹಾಪೂಜೆ ನೆರವೇರಿಸಿ ಅಲ್ಲಿಂದ ನೇರವಾಗಿ ಪರ್ಯಾಯ ಪೀಠೋಹರಣಕ್ಕೆ ನಿರ್ಗಮಿಸಿದರು.
ಈ ಸಂದರ್ಭ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ(MLA Gurme Suresh Shetty), ಕಾಪು ತಹಸಿಲ್ದಾರ್ ಡಾ. ಪ್ರತಿಭಾ ಆರ್ (Kaup Tahashildar DR.Prathibha R), ಉಧ್ಯಮಿಗಳಾದ ಮನೋಹರ್ ಶೆಟ್ಟಿ (Manohara Shetty), ದಿವಾಕರ ಶೆಟ್ಟಿ (Diwakar Shetty), ಕಿಶೋರ್ ಗುರ್ಮೆ (Kishore Gurme), ಮುನಿಯಾಲು ಉದಯ ಕುಮಾರ್ ಶೆಟ್ಟಿ (Muniyalu Udaya Kumar Shetty) ಸಹಿತ ಗಣ್ಯರು ಉಪಸ್ಥಿತರಿದ್ದರು.
