• Home  
  • BREAKING….. 25 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಶರಣ್ ಆಕಾಶ ಭವನನ ಕಾಲಿಗೆ ಸಿಸಿಬಿ ಪೊಲೀಸರಿಂದ ಗುಂಡು : ವಶಕ್ಕೆ(Accused in more than 25 Cases, Sharan Akash Bhavana was shot in the leg by CCB Police: Arrest)
- ಅಪರಾಧ

BREAKING….. 25 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಶರಣ್ ಆಕಾಶ ಭವನನ ಕಾಲಿಗೆ ಸಿಸಿಬಿ ಪೊಲೀಸರಿಂದ ಗುಂಡು : ವಶಕ್ಕೆ(Accused in more than 25 Cases, Sharan Akash Bhavana was shot in the leg by CCB Police: Arrest)

Share:   25 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಶರಣ್ ಆಕಾಶ ಭವನನ ಕಾಲಿಗೆ ಸಿಸಿಬಿ ಪೊಲೀಸರಿಂದ ಗುಂಡು : ವಶಕ್ಕೆ    (Mangaluru) ಮಂಗಳೂರು: ಸುಳ್ಯ ಕೆ.ವಿ. ಜಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿದ್ದ ರಾಮಕೃಷ್ಣರವರ ಕೊಲೆ ಆರೋಪಿ ಶರಣ್ ಆಕಾಶಭವನ ಎಂಬಾತನ ಕಾಲಿಗೆ ಗುಂಡೇಟು ಹಾಕಿ ವಶಕ್ಕೆ ಪಡೆದ ಘಟನೆ ಬುಧವಾರ ಘಟಿಸಿದೆ. ಶರಣ್ ಆಕಾಶಭವನ ಇತ್ತೀಚೆಗೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಿದ್ದ. ಶರಣ್‌ ಮಂಗಳೂರು ನಗರದಲ್ಲಿ ಕೊಲೆ, ಕೊಲೆಯತ್ನ, ದರೋಢೆ, ಅತ್ಯಾಚಾರ ಹಫ್ತಾ ವಸೂಲಿ […]

  25 ಕ್ಕೂ ಹೆಚ್ಚು ಪ್ರಕರಣಗಳ ಆರೋಪಿ ಶರಣ್ ಆಕಾಶ ಭವನನ ಕಾಲಿಗೆ ಸಿಸಿಬಿ ಪೊಲೀಸರಿಂದ ಗುಂಡು : ವಶಕ್ಕೆ  

 (Mangaluru) ಮಂಗಳೂರು: ಸುಳ್ಯ ಕೆ.ವಿ. ಜಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾಗಿದ್ದ ರಾಮಕೃಷ್ಣರವರ ಕೊಲೆ ಆರೋಪಿ ಶರಣ್ ಆಕಾಶಭವನ ಎಂಬಾತನ ಕಾಲಿಗೆ ಗುಂಡೇಟು ಹಾಕಿ ವಶಕ್ಕೆ ಪಡೆದ ಘಟನೆ ಬುಧವಾರ ಘಟಿಸಿದೆ.

ಶರಣ್ ಆಕಾಶಭವನ ಇತ್ತೀಚೆಗೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಿದ್ದ.

ಶರಣ್‌ ಮಂಗಳೂರು ನಗರದಲ್ಲಿ ಕೊಲೆ, ಕೊಲೆಯತ್ನ, ದರೋಢೆ, ಅತ್ಯಾಚಾರ ಹಫ್ತಾ ವಸೂಲಿ ಹಾಗೂ ಫೋಕ್ಸೋ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಹಲವು ಪ್ರಕರಣಗಳಲ್ಲಿ ದಸ್ತಗಿರಿ ವಾರಂಟ್ ಇರುವ ಆರೋಪಿಯಾಗಿದ್ದಾನೆ.

ಆರೋಪಿ ಶರಣ್ ಆಕಾಶಭವನ ಉಡುಪಿಯಲ್ಲಿದ್ದಾನೆ ಎಂಬ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆತನನ್ನು ಹಿಡಿಯಲು ಬಲೆ ಬೀಸಿದ್ದರು.

ಆರೋಪಿಗೆ ಆಶ್ರಯ ನೀಡಿದ ಹಾಗೂ ಆತನಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ ಆರೋಪದ ಮೇಲೆ ಕೋಡಿಕಲ್ ನ ಶೀಲಾ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಆಶ್ರಯ ನೀಡಿರುವ ಬಗ್ಗೆ ಪೊಲೀಸರು ಖಚಿತ ಮಾಡಿತಿ ಕಲೆ ಹಾಕಿದ್ದರು.

02-01-2024 ರಂದು ಆರೋಪಿಯು ಮಂಗಳೂರಿನಲ್ಲಿ ಬಿಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ತಿರುಗಾಡುತ್ತಿದ್ದಾನೆ ಎಂಬ ಮಾಹಿತಿ ಮೇರೆಗೆ ಆರೋಪಿಯ ಪತ್ತೆಗೆ ತೆರಳಿದ್ದ ಪಿಎಸ್ಐ ಸುದೀಪ್ ಹಾಗೂ ತಂಡದವರ ಮೇಲೆ ಮೇರಿಹಿಲ್ ಬಳಿ ಕಾರನ್ನು ಹಾಯಿಸಿ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದಾನೆ.

 ಸಿಸಿಬಿ ಘಟಕದ ಪಿಎಸ್ಐ ಸುದೀಪ್ ಮತ್ತು ಪಿಎಸ್ಐ ಶರಣಪ್ಪ ಹಾಗೂ ಸಿಬ್ಬಂದಿಗಳ ತಂಡ ಸುಮಾರು 20 ದಿನಗಳಿಂದ ಸಿಸಿಬಿ ತಂಡ ಕಾರ್ಯಾಚರಣೆ ನಡೆಸಿದೆ.   

ಶರಣ್‌ ಉಡುಪಿಯಲ್ಲಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ಆತನ ಪತ್ತೆಯ ಬಗ್ಗೆ ಸಿಸಿಬಿ ತಂಡ ಉಡುಪಿಯಲ್ಲಿ ಬೀಡು ಬಿಟ್ಟಿತ್ತು. ಆತನು ಬಿಳಿ ಬಣ್ಣದ ಐ20 ಕಾರಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದಾನೆಂದು ಮಾಹಿತಿ ತಿಳಿದು ಸಿಸಿಬಿ ಘಟಕದ ವಿಶೇಷ ತಂಡದವರು ಆರೋಪಿಯನ್ನು ಹಿಂಬಾಲಿಸಿದ್ದಾರೆ. ಆರೋಪಿ ಮಂಗಳೂರು ಕಡೆಗೆ ಬಂದಿದ್ದು, ಮಂಗಳೂರು  ಜಪ್ಪಿನಮೊಗರು ಕುಡುಪ್ಪಾಡಿ ಎಂಬಲ್ಲಿ ಇದ್ದಾನೆಂದು ಮಾಹಿತಿ ಬಂದಿತ್ತು.

ಅಲ್ಲಿಗೆ ಸಿಸಿಬಿ ತಂಡ ತರೆಳಿ ನೋಡಿದಾಗ, ಆರೋಪಿ  ಐ 20 ಕಾರಿನಲ್ಲಿ ಇದ್ದವನು ಸಿಸಿಬಿ ತಂಡವನ್ನು ನೋಡಿದ ಕೂಡಲೇ ಕಾರನ್ನು ವೇಗವಾಗಿ ಚಲಾಯಿಸಿ ಪರಾರಿಯಾಗಲು ಪ್ರಯತ್ನ ನಡೆಸಿದ್ದಾನೆ.

ಇದೇ ಸಮಯ ಕಾರನ್ನು ಅಡ್ಡಹಾಕಿ ಆತನನ್ನು ಸುತ್ತುವರೆದಾಗ ತನ್ನಲ್ಲಿದ್ದ ಸಿಬ್ಬಂದಿ ಪ್ರಕಾಶ್ ರವರಿಗೆ ಚೂರಿಯಿಂದ ಹಲ್ಲೆ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ್ದಾನೆ.

  ಆ ಸಂದರ್ಭ ಪಿಎಸ್ಐ ಸುದೀಪ್ ರವರು ಆರೋಪಿಗೆ ಶರಣಾಗುವಂತೆ ಸೂಚಿಸಿದ್ದರೂ, ಹಲ್ಲೆಗೆ ಮುಂದಾದಾಗ ತನ್ನ ಹಾಗೂ ತನ್ನ ಸಿಬ್ಬಂದಿಯವರ ಆತ್ಮ ರಕ್ಷಣೆಗಾಗಿ ಆತನ ಕಾಲಿಗೆ ಫೈರಿಂಗ್ ಮಾಡಿರುತ್ತಾರೆ. ನಂತರ ಆತನನ್ನು ಚಿಕಿತ್ಸೆಗಾಗಿ ಸ್ಥಳೀಯ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಉಡುಪಿಯ ಸಂತೆಕಟ್ಟೆಯ ಶರತ್ ಭಂಡಾರಿ ಹಾಗೂ ಆತನ ಪತ್ನಿ ಮಯೂರಿ ಭಂಡಾರಿ, ಧನಂಜಯ ಯಾನೆ  ಧನು ಹಾಗೂ ಚೇತನ್ ಯಾನೆ ಬುಳ್ಳ ಎಂಬವರ ವಿರುದ್ಧವೂ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.