• Home  
  • Breaking News ಇಂದು ಮತ್ತು ನಾಳೆ ( ಡಿಸೆಂಬರ್ 14 ಮತ್ತು 15 ) ರಾತ್ರಿ , ಉಲ್ಕೆಗಳ ವರ್ಷ ಧಾರೆ (Today and tomorrow (December 14 and 15) night, the year of meteors)
- ಕರಾವಳಿ - ತಂತ್ರಜ್ಞಾನ

Breaking News ಇಂದು ಮತ್ತು ನಾಳೆ ( ಡಿಸೆಂಬರ್ 14 ಮತ್ತು 15 ) ರಾತ್ರಿ , ಉಲ್ಕೆಗಳ ವರ್ಷ ಧಾರೆ (Today and tomorrow (December 14 and 15) night, the year of meteors)

Share: ಇಂದು ಮತ್ತು ನಾಳೆ ( ಡಿಸೆಂಬರ್ 14 ಮತ್ತು 15 ) ರಾತ್ರಿ , ಉಲ್ಕೆಗಳ ವರ್ಷ ಧಾರೆ (Udupi)ಉಡುಪಿ: ಪ್ರತೀ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಣುವ , ಮಿಥುನ ರಾಶಿಯಿಂದ  ಚಿಮ್ಮುವ “ ಜೆಮಿನಿಡ್ “ ಉಲ್ಕಾಪಾತ “jemined meteors” ಇಂದು ಮತ್ತು ನಾಳೆ ಮಧ್ಯ ರಾತ್ರಿಯಿಂದ  ವಿಜೃಂಭಿಸಲಿದೆ.  ವರ್ಷದಲ್ಲಿ ಸುಮಾರು 22 ಉಲ್ಕಾಪಾತ ಸಂಭವಿಸುವವಾದರೂ ಎಲ್ಲವೂ ಚೆನ್ನಾಗಿರುವುದಿಲ್ಲ. ಉಲ್ಕೆಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ. ಆದರೆ ಇಂದು ಸುಮಾರು 1 ಗಂಟೆಗೆ ನೂರಕ್ಕಿಂತಲೂ ಹೆಚ್ಚು […]

ಇಂದು ಮತ್ತು ನಾಳೆ ( ಡಿಸೆಂಬರ್ 14 ಮತ್ತು 15 ) ರಾತ್ರಿ , ಉಲ್ಕೆಗಳ ವರ್ಷ ಧಾರೆ

(Udupi)ಉಡುಪಿ: ಪ್ರತೀ ವರ್ಷ ಡಿಸೆಂಬರ್ ಮಧ್ಯದಲ್ಲಿ ಕಾಣುವ , ಮಿಥುನ ರಾಶಿಯಿಂದ  ಚಿಮ್ಮುವ “ ಜೆಮಿನಿಡ್ “ ಉಲ್ಕಾಪಾತ “jemined meteors” ಇಂದು ಮತ್ತು ನಾಳೆ ಮಧ್ಯ ರಾತ್ರಿಯಿಂದ  ವಿಜೃಂಭಿಸಲಿದೆ.

 ವರ್ಷದಲ್ಲಿ ಸುಮಾರು 22 ಉಲ್ಕಾಪಾತ ಸಂಭವಿಸುವವಾದರೂ ಎಲ್ಲವೂ ಚೆನ್ನಾಗಿರುವುದಿಲ್ಲ. ಉಲ್ಕೆಗಳ ಸಂಖ್ಯೆ ಹೆಚ್ಚೇನೂ ಇರುವುದಿಲ್ಲ.

ಆದರೆ ಇಂದು ಸುಮಾರು 1 ಗಂಟೆಗೆ ನೂರಕ್ಕಿಂತಲೂ ಹೆಚ್ಚು ಬಣ್ಣ ಬಣ್ಣದ ಉಲ್ಕೆಗಳನ್ನು ನೋಡಿ ಆನಂದಿಸಬಹುದು.

  ಈ ಉಲ್ಕೆಗಳು ಹೆಚ್ಚಿನವು ಸೂರ್ಯನ ಸುತ್ತುವ ಧೂಮಕೇತುಗಳ ಧೂಳು. ಆದರೆ ಇಂದಿನ ಜೆಮಿನಿಡ್ ಹಾಗಲ್ಲ. ಇದೊಂದು ದೀರ್ಘ ವೃತ್ತಾಕಾರದಲ್ಲಿ ಸೂರ್ಯನನ್ನು ಸುತ್ತುವ ಸುಮಾರು 6 ಕಿಮೀ ಗಾತ್ರದ ಕಲ್ಲುಂಡೆಯ , 3200 ಪೇಥಾನ್ (Phaethon asteroid) ಆಸ್ಟೆರೈೂಯ್ಡ್ ನ ಧೂಳು.

ಇಂದು ರಾತ್ರಿ ಸುಮಾರು 1 ಗಂಟೆಗೆ  ನಡು ನೆತ್ತಿಗೆ ಬರುವ ಮಿಥುನ ರಾಶಿಯಿಂದ ಗಂಟೆಗೆ 120  ಉಲ್ಕೆಗಳನ್ನು ಗುರುತಿಸಬಹುದೆಂದು ಅಂದಾಜಿಸಿದ್ದಾರೆ.

ಬೇರೆಲ್ಲಾ ಉಲ್ಕಾಪಾತಗಳಿಗಿಂತ ಇದು ವಿಭಿನ್ನ. ಇಂದು ಎಲ್ಲಾ ಬಣ್ಣಗಳ ಉಲ್ಕೆಗಳನ್ನೂ ನೋಡಬಹುದು. ಬಿಳಿ , ಕೆಂಪು , ಹಳದಿ , ಹಸಿರು ಹಾಗೂ ನೀಲಿ.

 ನಮ್ಮ ಮೇಲೆಯೇ ಬಿತ್ತು ಅಂತ ಅನಿಸುವ ಈ ಉಲ್ಕಾಪಾತಗಳು ಹಾಗೇನೂ ಅಲ್ಲ. ಭೂ ವಾತಾವರಣದಿಂದಾಗಿ ಸುಮಾರು 60 – 70 ಕಿಮಿ ಎತ್ತರದ ಆಕಾಶದಲ್ಲೇ ಈ ಧೂಳಿನ ಕಣಗಳು ಘರ್ಷಣೆಯಿಂದ ಉರಿದು ಹೋಗುತ್ತವೆ.

 ಮಿಥುನ ರಾಶಿಯೇ ನೋಡಲು ಚೆಂದ. ಮಹಾವ್ಯಾಧ ನಕ್ಷತ್ರ ಪುಂಜವೇ ಚೆಂದ. ಅದರ ಪಕ್ಕ ಇರುವ ಪುನರ್ವಸು ನಕ್ಷತ್ರ ನೋಡಲು ಚೆಂದ. ಅದರಲ್ಲೂ ಇದೀಗ ಸಿಡಿಯ ಬಹುದಾದ ಬೃಹನ್ ಆರ್ದ್ರಾ ನಕ್ಷತ್ರ ,  ರೆಡ್ ಸೂಪರ್ ಜೈಂಟ್.

ಆಕಾಶವೀಕ್ಷಣೆಗೆ ಈ ಮಾರ್ಗಶೀರ್ಷಮಾಸ ಬಲು ಸೊಗಸು.

ಅದರೊಂದಿಗೆ ಇಂದಿನ ಆಕಾಶದ ಈ ಉಲ್ಕಾಪಾತದ ದುರುಸಿನ ಆಟವನ್ನು ನೋಡಿ ಆನಂದಿಸಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.