• Home  
  • BREAKING NEWS……….ಕಾರ್ಕಳ ಭಾರೀ ಮಳೆ: ಪರ್ಪಲೆಗುಡ್ಡ ಕುಸಿದು ರಾಜ್ಯ ಹೆದ್ದಾರಿಯಲ್ಲಿ ಬಿರುಕು, ಹಲವೆಡೆ ಹಾನಿ (Heavy rains in Karkala: Parpale gudda Collapses and crack in the state highway)
- PROBLEMS

BREAKING NEWS……….ಕಾರ್ಕಳ ಭಾರೀ ಮಳೆ: ಪರ್ಪಲೆಗುಡ್ಡ ಕುಸಿದು ರಾಜ್ಯ ಹೆದ್ದಾರಿಯಲ್ಲಿ ಬಿರುಕು, ಹಲವೆಡೆ ಹಾನಿ (Heavy rains in Karkala: Parpale gudda Collapses and crack in the state highway)

Share: ಕಾರ್ಕಳ ಭಾರೀ ಮಳೆ: ಪರ್ಪಲೆಗುಡ್ಡ ಕುಸಿದು ರಾಜ್ಯ ಹೆದ್ದಾರಿಯಲ್ಲಿ ಬಿರುಕು, ಹಲವೆಡೆ ಹಾನಿ  (Karkala) ಕಾರ್ಕಳ: ಕಾರ್ಕಳದಲ್ಲಿ ಭಾರೀ ಗಾಳಿ ಮಳೆ ಮುಂದುವರಿದಿದ್ದು ಅಲ್ಲಲ್ಲಿ ಗುಡ್ಡ ಕುಸಿತ ಉಂಟಾದ ಬಗ್ಗೆ ವರದಿಯಾಗಿದೆ. ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯ ಕುಂಟಲ್ಪಾಡಿ ಸಮೀಪ ಪರ್ಪಲೆ ಗುಡ್ಡ ಕುಸಿದಿದೆ. ಇದರ ಪರಿಣಾಮವಾಗಿ ರಾಜ್ಯ ಹೆದ್ದಾರಿಯಲ್ಲಿ ಬಿರುಕು ಬಿದ್ದಿದ್ದು, ರಸ್ತೆ ಮಧ್ಯೆ ಕಂದಕ ನಿರ್ಮಾಣಗೊಂಡಿದೆ. ರಸ್ತೆ ಮಧ್ಯೆ ವಿಪರೀತ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.  ನಿಟ್ಟೆ ಗ್ರಾಮದ ಅತ್ತೂರು ಚರ್ಚ್ […]

ಕಾರ್ಕಳ ಭಾರೀ ಮಳೆ: ಪರ್ಪಲೆಗುಡ್ಡ ಕುಸಿದು ರಾಜ್ಯ ಹೆದ್ದಾರಿಯಲ್ಲಿ ಬಿರುಕು, ಹಲವೆಡೆ ಹಾನಿ

 (Karkala) ಕಾರ್ಕಳ: ಕಾರ್ಕಳದಲ್ಲಿ ಭಾರೀ ಗಾಳಿ ಮಳೆ ಮುಂದುವರಿದಿದ್ದು ಅಲ್ಲಲ್ಲಿ ಗುಡ್ಡ ಕುಸಿತ ಉಂಟಾದ ಬಗ್ಗೆ ವರದಿಯಾಗಿದೆ.

ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯ ಕುಂಟಲ್ಪಾಡಿ ಸಮೀಪ ಪರ್ಪಲೆ ಗುಡ್ಡ ಕುಸಿದಿದೆ. ಇದರ ಪರಿಣಾಮವಾಗಿ ರಾಜ್ಯ ಹೆದ್ದಾರಿಯಲ್ಲಿ ಬಿರುಕು ಬಿದ್ದಿದ್ದು, ರಸ್ತೆ ಮಧ್ಯೆ ಕಂದಕ ನಿರ್ಮಾಣಗೊಂಡಿದೆ. ರಸ್ತೆ ಮಧ್ಯೆ ವಿಪರೀತ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

 ನಿಟ್ಟೆ ಗ್ರಾಮದ ಅತ್ತೂರು ಚರ್ಚ್ ರಸ್ತೆಯ ವಿಕ್ಟರ್ ಫರ್ನಾಂಡಿಸ್‌ ಎಂಬವರ ಮನೆಯ ಹಿಂಭಾಗದಲ್ಲಿ ಮತ್ತು ನಿಟ್ಟೆ ಲೆಮಿನ ಫ್ಯಾಕ್ಟರಿ ಬಳಿ ಗುಡ್ಡ ಕುಸಿತ ಉಂಟಾಗಿದ್ದು, ಅಪಾರ ನಷ್ಟ ಉಂಟಾಗಿದೆ.

ಬೋಳ ಗ್ರಾಮದ ಕಟ್ಟಿಂಗೇರಿಯಲ್ಲಿ ರಸ್ತೆ ಬದಿ ಹಾಗೂ ಬೆಳ್ಮಣ್ ಗ್ರಾಮದ ಇಂದಾರು ಎಂಬಲ್ಲಿನ ಡೈಮಂಡ್‌ ಹಿಲ್ ಅಪಾರ್ಟ್ ಮೆಂಟ್ ಬಳಿ ಗುಡ್ಡ ಜರಿದಿದೆ.

ಸದ್ಯ ಮಳೆ ಇಳಿಮುಖಗೊಂಡಿದ್ದರೂ, ಮಳೆಹಾನಿ ಮುಂದುವರೆದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.