Tag: died

ಕರಾವಳಿ

ಮಂಗಳೂರು ಮಾಜಿ ಮೇಯರ್ ರಜನಿ ದುಗ್ಗಣ್ಣ ನಿಧನ

ಮಂಗಳೂರು : ಮಾಜಿ ಮೇಯರ್ ರಜನಿ ದುಗ್ಗಣ್ಣ(67) ಅವರು ಭಾನುವಾರ ನಿಧನರಾದರು. ಅನಾರೋಗ್ಯದಿಂದ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನ 24ನೇ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದರು. 2010ರಲ್ಲಿ ಅವರು ಮಂಗಳೂರು ಮೇಯರ್ ಆಗಿದ್ದರು. ಮಂಗಳೂರಿಗೆ ಅವರು 5ನೇ ಮಹಿಳಾ ಮೇಯರ್. ರಾಜಕೀಯವಾಗಿ ಅವರು ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದರು. ಅವರು ಒಬ್ಬ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ರಜನಿ ದುಗ್ಗಣ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಅಪರಾಧ

ಉದ್ಯಾವರ ಎಸ್.ಡಿ.ಎಂ. ಆಟೋ ಚಾಲಕರ ಮಾಲಕರ ಸಂಘ ಕುತ್ಪಾಡಿ ಇದರ ಮಾಜಿ ಅಧ್ಯಕ್ಷ ರಾಮ ಪೂಜಾರಿ ಕುತ್ಪಾಡಿ ನಿಧನ

  ಉಡುಪಿ  : ಉದ್ಯಾವರ ಎಸ್.ಡಿ.ಎಂ. ಆಟೋ ಚಾಲಕರ ಮಾಲಕರ ಸಂಘ ಕುತ್ಪಾಡಿ  ಇದರ ಮಾಜಿ ಅಧ್ಯಕ್ಷ ರಾಮ ಪೂಜಾರಿ ಕುತ್ಪಾಡಿ (55) ಅಲ್ಪಕಾಲದ ಅಸೌಖ್ಯದಿಂದ  ನಿಧನ ಹೊಂದಿದರು.  32ಕ್ಕೂ ಅಧಿಕ ವರ್ಷಗಳಿಂದ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಇವರು, ಎಸ್.ಡಿ.ಎಂ. ಆಟೋ ಚಾಲಕರ ಮತ್ತು ಮಾಲಕರ ಸಂಘದಲ್ಲಿ ಸಕ್ರಿಯರಾಗಿದ್ದು, ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದು ನಾಲ್ಕು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಉಡುಪಿಯ ಪ್ರತಿಷ್ಠಿತ ಯಶೋಧ ಆಟೋ ಯೂನಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಅತ್ಯಂತ ಶ್ರಮಜೀವಿಯಾಗಿದ್ದರು. ಎಸ್ […]

eMedia Kannada  @2025. All Rights Reserved.