Tag: dr. g shankar

ಕರಾವಳಿ ಪ್ರಚಲಿತ ವಿಡಿಯೋ

(Uchila dasara2023 )ಉಚ್ಚಿಲ ದಸರಾ ೨೦೨೩ ಮನೋಹರ ಎಸ್‌ ಕುಂದರ್‌ರವರಿಂದ ಛಾಯಾಚಿತ್ರ ಪ್ರದರ್ಶನ

ಉಚ್ಚಿಲ ದಸರಾ ೨೦೨೩ ಮನೋಹರ ಎಸ್‌ ಕುಂದರ್‌ (Manohar s kundar) ರವರಿಂದ ಛಾಯಾಚಿತ್ರ ಪ್ರದರ್ಶನ (Udupi\ Uchila)(Uchila dasara 2023) ದಸರಾ ಪ್ರಯುಕ್ತ ಹಿರಿಯ ಛಾಯಾಗ್ರಾಹಕ ಮನೋಹರ್‌ ಎಸ್‌ ಕುಂದರ್‌ರವರು ತನ್ನ 40 ವರ್ಷಗಳ ಅಧ್ಯಯನ ಛಾಯಾಚಿತ್ರಗಳನ್ನು  ಪ್ರದರ್ಶನಕ್ಕೆ ಇಟ್ಟಿದ್ದಾರೆ.   ಹಿರಿಯ ಛಾಯಾಗ್ರಹಕ ಮನೋಹರ್‌ರವರು ತನ್ನ ಛಾಯಾಚಿತ್ರ ಸಂಶೋಧನೆಯ ೪೦ ಸಂವತ್ಸರಗಳಿಂದ ಸಂಗ್ರಹಿಸಿದ ಅತ್ಯಪೂರ್ವ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.  ಯುವಕರಿಗೆ, ಕಲಾ ಆಸಕ್ತಿ ಇರುವವರಿಗೆ ಕಲಿಕೆಗೆ ಪೂರಕ  ವಾತಾವರಣ ಸೃಷ್ಟಿಸುವ ಮನೋಹರ್ ಕುಂದರ್, ಎಲ್ಲವನ್ನೂ ನಮ್ಮೆದುರು […]

ಕರಾವಳಿ ವಿಡಿಯೋ

(uchila) ಉಚ್ಚಿಲ : (shri mahalaxmi temple) ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ಈ ಬಾರಿಯ ವೈಭವದ ಶರನ್ನವರಾತ್ರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

Udupi \ uchila ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ಈ ಬಾರಿಯ ವೈಭವದ ಶರನ್ನವರಾತ್ರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.  ನವದುರ್ಗೆಯರ ಮೂರ್ತಿ ತಯಾರಿ ಸೇರಿದಂತೆ, ವಾಹನ ಪಾರ್ಕಿಂಗ್, ವಸ್ತು ಪ್ರದರ್ಶನ, ವಿದ್ಯುದ್ದೀಪಾಲಂಕಾರ ಇತ್ಯಾದಿ ಕಾರ್ಯಗಳು ಸಾಗುತ್ತಿದೆ.

ಕರಾವಳಿ ಜೀವನಶೈಲಿ

ಡಾ| ಜಿ. ಶಂಕರ್ ೬೮ನೇ ಹುಟ್ಟು ಹಬ್ಬದ ಸಂಭ್ರಮ

ಡಾ| ಜಿ. ಶಂಕರ್ ೬೮ನೇ ಹುಟ್ಟು ಹಬ್ಬದ ಸಂಭ್ರಮಉಡುಪಿ\ಕಾಪು : ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಮಗ್ರ ಜೀರ್ಣೋದ್ದಾರ ಮತ್ತು ಉಚ್ಚಿಲ ದಸರಾ ರೂವಾರಿ, ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜಾ ಡಾ| ಜಿ. ಶಂಕರ್ ಅವರ ೬೮ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಗುರುವಾರ ಲಕ್ಷ್ಮೀ ನಾರಾಯಣ ಹೃದಯ ಹೋಮ, ಗೌರವಾರ್ಪಣೆ ಮತ್ತು ಅನ್ನಸಂತರ್ಪಣೆ ನಡೆಯಿತು.ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಡಾ| ಜಿ. ಶಂಕರ್ ಮತ್ತು ಶಾಲಿನಿ ಜಿ. ಶಂಕರ್ […]

ಶಾಲಾ ಕಾಲೇಜು

ಮೊಗವೀರರನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಿ: ಜಿ.ಶಂಕರ್

ಮೊಗವೀರರನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಿ: ಜಿ.ಶಂಕರ್ ಉಚ್ಚಿಲದಲ್ಲಿ ವಿದ್ಯಾರ್ಥಿ ವೇತನ, ಗುರಿಕಾರರ ಸಮಾವೇಶ ಪಡುಬಿದ್ರಿ: ಮೊಗವೀರ ಸಮಾಜವನ್ನು ಎಸ್‌ಟಿ ಸಮುದಾಯಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಮೊದಲು ಬೃಹತ್ ಮಟ್ಟದ ಹೋರಾಟ ನಡೆಸಲಾಗುವುದು ಎಂದು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್ ಹೇಳಿದರು. ಅವರು ಭಾನುವಾರ ಉಚ್ಚಿಲ ಮೊಗವೀರ ಭವನದಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಇದರ ವತಿಯಿಂದ ನಡೆಯುವ ಉಪ್ಪಳದಿಂದ ಶೀರೂರುವರೆಗಿನ ಮೊಗವೀರ ಗುರಿಕಾರರ ಸಮಾವೇಶ ಮತ್ತು ಗೌರವಧನ […]

ಪ್ರಚಲಿತ ವಿಡಿಯೋ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಪನ್ನ

ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ಸಂಪನ್ನ ಉಡುಪಿ: ಇತ್ತೀಚೆಗೆ ನವೀಕರಣಗೊಂಡ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ವತಿಯಿಂದ ದೇವಳದ ಸಭಾಭವನದಲ್ಲಿ ವರಮಹಾಲಕ್ಷ್ಮಿ ಪೂಜೆ ಶುಕ್ರವಾರ ಸಂಪನ್ನಗೊಂಡಿತು.  ವೇದಮೂರ್ತಿ ಶ್ರೀ ಕೆ ವಿ ರಾಘವೇಂದ್ರ ಉಪಾಧ್ಯಾಯ, ಕೆ ವಿ ವಿಷ್ಣುಮೂರ್ತಿ ಉಪಾಧ್ಯಾಯರವರ ನೇತೃತ್ವದಲ್ಲಿ,  ವೇದ ಮೂರ್ತಿ ಶ್ರೀಶ ಭಟ್‌ರವರು ಪೂಜಾ ವಿಧಿ ವಿಧಾನ ನೆರವೇರಿಸಿದರು.  ಈ ಸಂದರ್ಭ ಮೊಗವೀರ ಮುಂದಾಳು ಡಾ. ಜಿ ಶಂಕರ್, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, […]

ಕರಾವಳಿ

ಉಚ್ಚಿಲದಲ್ಲಿ ಮೊಗವೀರ ಮಹಾಜನ ಸಂಘದಿಂದ ಮೀನುಗಾರಿಕೆ, ಬಂದರು ಸಚಿವ ಮಂಕಾಳ ಎಸ್ ವೈದ್ಯರಿಗೆ ಅಭಿನಂದನೆ

ಉಚ್ಚಿಲದಲ್ಲಿ ಮೊಗವೀರ ಮಹಾಜನ ಸಂಘದಿಂದ ಮೀನುಗಾರಿಕೆ, ಬಂದರು ಸಚಿವ ಮಂಕಾಳ ಎಸ್ ವೈದ್ಯರಿಗೆ ಅಭಿನಂದನೆ   ಕರ್ನಾಟಕ ಸರಕಾರದ ನೂತನ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಮಂಕಾಳ ಎಸ್ ವೈದ್ಯರಿಗೆ ಉಚ್ಚಿಲ ಮೊಗವೀರ ಮಹಾಜನ ಸಂಘದ ವತಿಯಿಂದ ಶುಕ್ರವಾರ ಸಂಜೆ ೭ ಗಂಟೆಗೆ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಜರಗಿತು. ಈ ಸಂದರ್ಭ ಅವರು ಮಾತನಾಡಿ, ಮೀನುಗಾರರ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಶ್ರಮಿಸೋಣ. ಮೀನುಗಾರನಾಗಿ ಮೀನುಗಾರರ ಕಷ್ಠದ ಬದುಕು ನನಗೆ […]

ಕರಾವಳಿ

ಉಡುಪಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ

ಉಡುಪಿ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ   ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ ಇದರ ಕಾಲೇಜು ವಾರ್ಷಿಕೋತ್ಸವ ಸಮಾರಂಭ ದ ಅಧ್ಯಕ್ಷತೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ  ಯಶ್ ಪಾಲ್ ಸುವರ್ಣ ವಹಿಸಿ  ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.  ಸಮಾರಂಭದಲ್ಲಿ ಕಾಲೇಜಿನ ಮಹಾಪೋಷಕರಾದ ನಾಡೋಜ ಡಾ. ಜಿ. ಶಂಕರ್, ನಿಕಟಪೂರ್ವ […]

ಕರಾವಳಿ ವ್ಯವಹಾರ

ತೆಂಕ ಎರ್ಮಾಳು ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡ ಉದ್ಘಾಟನೆ

ತೆಂಕ ಎರ್ಮಾಳು ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡ ಉದ್ಘಾಟನೆ ತೆಂಕ ಎರ್ಮಾಳು ಎಜ್ಯುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟಿರುವ ಅದಮಾರು ಮಠದ ಶ್ರೀ ವಿಬುದೇಶ ತೀರ್ಥ ಶ್ರೀಪಾದರ ಸಂಸ್ಮರಣಾರ್ಥವಾಗಿ ನಿರ್ಮಾಣಗೊಂಡಿರುವ ಕಿನಾರಾ ಆಂಗ್ಲ ಮಾಧ್ಯಮ ಶಾಲಾ ನೂತನ ಕಟ್ಟಡವನ್ನು ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ  ನಾಡೋಜ ಡಾ.ಜಿ.ಶಂಕರ್ ಉದ್ಘಾಠಿಸಿದರು. ಅವರು ಈ ಸಂದರ್ಭ ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಅಧಿಕವಾಗುತ್ತಿದ್ದು, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಗುರುತಿಸಲು ಸಾಧ್ಯವಿದೆ ಎಂದರು.   ಮುಖ್ಯ […]

eMedia Kannada  @2025. All Rights Reserved.