ಕಾಪು : ಸ್ಕೂಟಿಗೆ ಬಸ್ಸು ಡಿಕ್ಕಿ, ಸ್ಕೂಟಿ ಸವಾರನಿಗೆ ಗಂಭೀರ ಗಾಯ (Kaup: Scooty hit by bus, scooty rider seriously injured)
ಕಾಪು : ಸ್ಕೂಟಿಗೆ ಬಸ್ಸು ಡಿಕ್ಕಿ, ಸ್ಕೂಟಿ ಸವಾರನಿಗೆ ಗಂಭೀರ ಗಾಯ ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ (Kaup) ಕಾಪು: ಕಾಪು ಸ್ಕೂಟಿಗೆ ಬಸ್ಸೊಂದು ಡಿಕ್ಕಿಯಾಗಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಾಪು ಪೊಲಿಪು ಮಸೀದಿ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಗಾಯಾಳುವನ್ನು ಗಣೇಶ ಎಂದು ಗುರುತಿಸಲಾಗಿದೆ. ಎರಡೂ ವಾಹನಗಳು ಉಡುಪಿ ಕಡೆ ಸಾಗುತ್ತಿತ್ತು ಎನ್ನಲಾಗಿದೆ. ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



