Tag: Karavali

ಅಪರಾಧ

ಚಾರ್ಜರ್ ಪಿನ್ ಬಾಯಿಗೆ ಹಾಕಿದ ಮಗುವಿಗೆ ವಿದ್ಯುತ್ ಶಾಕ್ :  ಮಗು ಮೃತ್ಯು

ಚಾರ್ಜರ್ ಪಿನ್ ಬಾಯಿಗೆ ಹಾಕಿದ ಮಗುವಿಗೆ ವಿದ್ಯುತ್ ಶಾಕ್ :  ಮಗು ಮೃತ್ಯು ಕಾರವಾರ:ಮೊಬೈಲ್ ಚಾರ್ಜರ್‌ನ್ನು ಬಾಯಿಗೆ ಹಾಕಿದಾಗ ವಿದ್ಯಿತ್ ಶಾಕ್ ಹೊಡೆದು 8 ತಿಂಗಳ ಕಂದಮ್ಮ ಸಾವನ್ನಪ್ಪಿರುವ ಮನಕಲಕುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸಿದ್ದರದಲ್ಲಿ ನಡೆದಿದೆ. ಸಂತೋಷ್ ಹಾಗೂ ಸಂಜನಾ ದಂಪತಿಗಳ 8 ತಿಂಗಳ ಮಗು ಸಾನಿಧ್ಯ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದೆ. ಮೊಬೈಲ್ ಚಾರ್ಜ್ ಮಾಡಿದ ಬಳಿಕ ಪೋಷಕರು ಪ್ಲಗ್‌ ನ್ನು ಆಫ್ ಮಾಡದೆ ನಿರ್ಲಕ್ಷ್ಯ ವಹಿಸಿದ್ದರು. ಮಗು ಆಟವಾಡುತ್ತಾ ಚಾರ್ಜರ್ […]

ಅಪರಾಧ

  ಹೆಬ್ರಿ: ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಮಗು ಮೃತ್ಯು

ಹೆಬ್ರಿ: ನೀರಿನ ಹೊಂಡಕ್ಕೆ ಬಿದ್ದು ಮೂರು ವರ್ಷದ ಮಗು ಮೃತ್ಯು ಕಾರ್ಕಳ: ಮೂರು ವರ್ಷದ ಮಗುವೊಂದು ನಡೆದುಕೊಂಡು ಹೋಗುತ್ತಿದ್ದ ವೇಳೆ ಹೊಂಡದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ರಮನೆ ಜೆಡ್ಡು ಎಂಬಲ್ಲಿ ನಡೆದಿದೆ. ಮೃತ ಮಗುವನ್ನು ಕೃತಿಕಾ (3ವರ್ಷ) ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ ಕೃತಿಕಾ ತನ್ನ ಅಜ್ಜಿಯೊಂದಿಗೆ ಬ್ರಹ್ಮಾವರ ತಾಲೂಕು ನಾಲ್ಕೂರು ಗ್ರಾಮದ ಕಜ್ಕೆ ದೊಡ್ಡಮನೆ ಹೊಂಡದ ಕಂಠದಲ್ಲಿ ಮೊಮ್ಮಕ್ಕಳೊಂದಿಗೆ ನಡೆದುಕೊಂದು ಹೋಗುತ್ತಿರುವಾಗ ಮೊಮ್ಮಗಳು ಕೃತಿಕಾ (3 ವರ್ಷ) […]

ಕರಾವಳಿ

ಉಡುಪಿ ದಂತ ವೈದ್ಯಕೀಯ ಸಂಘದಿಂದ ರಾಜ್ಯಮಟ್ಟದ ಕಾರ್ಯಗಾರ

ಉಡುಪಿ ದಂತ ವೈದ್ಯಕೀಯ ಸಂಘದಿಂದ ರಾಜ್ಯಮಟ್ಟದ ಕಾರ್ಯಗಾರ ಉಡುಪಿ : ಕಸ್ತೂರ್ಬಾ ಆಸ್ಪತ್ರೆ ಸಮೂಹ  ಮಣಿಪಾಲ ಹಾಗೂ ಉಡುಪಿ ಜಿಲ್ಲಾ ಭಾರತೀಯ ದಂತ ವೈದ್ಯಕೀಯ ಸಂಘ ಜಂಟಿ ಆಶ್ರಯದಲ್ಲಿ ಸ್ಥಳೀಯ ಓಷನ್ ಪರ್ಲ್ ಹೋಟೆಲ್‌ನಲ್ಲಿ ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಡಾ. ಮೋನಿಕಾ ಸೋಲೋಮೋನ್ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಶ್ರೀಕಾಂತ್ ಹಾಗೂ ಡಾ. ಆದರ್ಶ್ ಕುಡ್ವ ಭಾಗವಹಿಸಿ ದಂತ ಚಿಕಿತ್ಸ್ಯೆಯಲ್ಲಿ ಎದುರಾಗುವ ಸವಾಲುಗಳು […]

ಅಪರಾಧ

ಮಂಗಳೂರು; ಪತ್ರಕರ್ತನ ಮೇಲೆ ನೈತಿಕ ಪೊಲೀಸ್ ಗಿರಿ, ಇಬ್ಬರು ದುಷ್ಕರ್ಮಿಗಳ ಬಂಧನ

ಮಂಗಳೂರು; ಪತ್ರಕರ್ತನ ಮೇಲೆ ನೈತಿಕ ಪೊಲೀಸ್ ಗಿರಿ, ಇಬ್ಬರು ದುಷ್ಕರ್ಮಿಗಳ ಬಂಧನ ಮಂಗಳೂರು: ಪತ್ರಕರ್ತನೋರ್ವನ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತರನ್ನು ಕೋಟೆಕಾರು ನಿವಾಸಿ 37 ವರ್ಷದ ಚೇತನ್ ಮತ್ತು ಯೆಯ್ಯಾಡಿ ನಿವಾಸಿ 43 ವರ್ಷದ ನವೀನ್ ಎಂದು ಗುರುತಿಸಲಾಗಿದೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಾಸಗಿ ವೆಬ್‌ಸೈಟ್ ವರದಿಗಾರ ಅಭಿಜಿತ್ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಭಿಜಿತ್ ತನ್ನ ಸ್ನೇಹಿತೆಯೊಂದಿಗೆ ರೆಸ್ಟೋರೆಂಟ್‌ಗೆ ಹೋಗಿದ್ದು, ಈ […]

ಅಪರಾಧ

ಅರಶಿನ ಗುಂಡಿ ಜಲಪಾತದಲ್ಲಿ ಯುವಕ ಜಾರಿಬಿದ್ದ ಪ್ರಕರಣ – ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಅರಶಿನ ಗುಂಡಿ ಜಲಪಾತದಲ್ಲಿ ಯುವಕ ಜಾರಿಬಿದ್ದ ಪ್ರಕರಣ – ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ ಉಡುಪಿ : ಉಡುಪಿ ಜಿಲ್ಲೆಯ ಕೊಲ್ಲೂರಿನ‌ ಅರಶಿನ ಗುಂಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಭದ್ರಾವತಿ ಮೂಲದ ಯುವಕ ನಾಪತ್ತೆಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಯುವಕನ ಮೃತದೇಹ ಪತ್ತೆಯಾಗಿದೆ.  ಕಳೆದ ಜುಲೈ 23ರಂದು ಕಾಲು ಜಾರಿ‌ ಬಿದ್ದು, ಶರತ್ ನಾಪತ್ತೆಯಾಗಿದ್ದು, ಇಂದು ಶರತ್ ಮೃತದೇಹ ಅರಶಿನ ಗುಂಡಿ‌ ಜಲಪಾತದಿಂದ 200 ಮೀಟರ್ ಕೆಳಗಡೆ ಪತ್ತೆಯಾಗಿದೆ.  ಮೊನ್ನೆಯಿಂದಲೂ ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರು […]

ಅಪರಾಧ

ಉಡುಪಿ ವಿಡಿಯೋ ಪ್ರಕರಣ: ತನಿಖಾಧಿಕಾರಿ ಬದಲಾವಣೆ

ಉಡುಪಿ ವಿಡಿಯೋ ಪ್ರಕರಣ: ತನಿಖಾಧಿಕಾರಿ ಬದಲಾವಣೆ ಉಡುಪಿ : ಉಡುಪಿ ವಿದ್ಯಾರ್ಥಿನಿ ವಿಡಿಯೋ ಪ್ರಕರಣದ ತನಿಖಾಧಿಕಾರಿ ಬದಲು ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖಾಧಿಕಾರಿ ಮಂಜುನಾಥ್ ಗೌಡ ಅವರನ್ನು ಬದಲಿಸಿ ಕುಂದಾಪುರದ ಡಿವೈಎಸ್ ಬೆಳ್ಳಿಯಪ್ಪ ಎಂಬುವರಿಂದ ತನಿಖೆಯನ್ನು ನಡೆಸಲು ನಿರ್ಧರಿಸಲಾಗಿದೆ.  ಅವರಿಗೆ ತನಿಖೆಯ ಜವಾಬ್ದಾರಿಯನ್ನು ನೀಡಲಾಗಿದೆ.  ಮಂಜುನಾಥ್ ಗೌಡ ಅವರು ತನಿಖೆಯಲ್ಲಿ ಲೋಪ ಮಾಡಿದ್ದಾರೆಂದು ಆರೋಪ ಕೇಳಿ ಬಂದಿತ್ತು. ಅದರಂತೆ ಶನಿವಾರ ಅಧಿಕಾರಿಯನ್ನು ಬದಲಾಯಿಸಲಾಗಿದೆ.

ಕರಾವಳಿ

 ಫ್ಯಾಸಿಸಮ್ ಸೋಲಿಸಲು ಜನಪರ ಚಳವಳಿ ಸಕ್ರಿಯವಾಗಿರಬೇಕು – ಶಿವಸುಂದರ್

ಫ್ಯಾಸಿಸಮ್ ಸೋಲಿಸಲು ಜನಪರ ಚಳವಳಿ ಸಕ್ರಿಯವಾಗಿರಬೇಕು – ಶಿವಸುಂದರ್ ಉಡುಪಿ: ದೇಶದಲ್ಲಿ ಫ್ಯಾಸಿಸಮ್ ಸೋಲಿಸಲು ಜನಪರ ಚಳವಳಿಗಳು ಸಕ್ರಿಯವಾಗಬೇಕೆಂದು ಖ್ಯಾತ ಚಿಂತಕರಾದ ಶಿವಸುಂದರ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲೆ ಆಯೋಜಿಸಿದ “ಯುವ ಅಂದೋಲನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಫ್ಯಾಸಿಸಮ್ ಸೋಲಿಸಲು ಕಾಂಗ್ರೆಸ್’ನಿಂದ ಸಾಧ್ಯವಿಲ್ಲ. ಫ್ಯಾಸಿಸಮ್ ಮನಸ್ಥಿತಿಯನ್ನು ಹೋಗಲಾಡಿಸುವ ವ್ಯವಸ್ಥೆಯೇ ಈ ಸಮಸ್ಯೆಯ ಭಾಗವಾಗಿರುವುದು ವಾಸ್ತವಿಕತೆಯಾಗಿದ್ದು, ಕಾಂಗ್ರೆಸ್ ಹೊರತಾದ ಚಳವಳಿಯೊಂದನ್ನು ಸಕ್ರಿಯಗೊಳಿಸಬೇಕಾದ ಅಗತ್ಯವಿದೆ. ಈ ಚಳವಳಿಗಳಿಂದ ತಕ್ಷಣ ಫಲಿತಾಂಶ ಹೊರ ಬಾರದಿದ್ದರೂ, ದಶಕಗಳ ನಿರಂತರ ಪ್ರಯತ್ನದಿಂದ […]

ರಾಜಕೀಯ

ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಣಿಪುರದ ಘಟನೆ ಖಂಡಿಸಿ ಸಾಲಿಗ್ರಾಮದಲ್ಲಿ ಬೃಹತ್ ಪ್ರತಿಭಟನೆ.

ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಣಿಪುರದ ಘಟನೆ ಖಂಡಿಸಿ ಸಾಲಿಗ್ರಾಮದಲ್ಲಿ ಬೃಹತ್ ಪ್ರತಿಭಟನೆ.  ಕೇಂದ್ರದ ಬಿಜೆಪಿ ಸರಕಾರ ಜನಸಾಮಾನ್ಯರ ಜೀವದ ಜತೆ ಚಲ್ಲಾಟ ಆಡುತ್ತಿದೆ ಆಡಳಿತ ನಡೆಸುವುದಕ್ಕೆ ಯೋಗ್ಯವಲ್ಲದ ಸರಕಾರ- ಅಶೋಕ್ ಕುಮಾರ್ ಕೊಡವೂರು ಕೋಟ: ದೇಶವೇ  ತಲೆತಗ್ಗಿಸುವಂತಹ , ನಾಗರಿಕ ಸಮಾಜದ ಮನ ಕಲುಕುವ ಹಿಂಸಾಚಾರಕ್ಕೆ ಮಣಿಪುರ ಬಲಿಯಾಗಿದೆ. ದೇಶದ ಒಕ್ಕೂಟ ವ್ಯವಸ್ಥೆಯನ್ನು ತಲ್ಲಣಗೊಳಿಸಿರುವ ಘಟನೆಗೆ ಬಿಜೆಪಿ ನೇತೃತ್ವದ ಸರಕಾರವೇ ನೇರ ಹೊಣೆ ಜನರ ಜೀವದ ಜತೆ ಚೆಲ್ಲಾಟ ಆಡುತ್ತಿದೆ. ಇಂಥಹ ಸರಕಾರವನ್ನು ಕಿತ್ತೊಗೆಯಬೇಕು ಎಂದು […]

ಕರಾವಳಿ

ಕಲ್ಮಾಡಿ ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ಕಲ್ಮಾಡಿ ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ಕಲ್ಮಾಡಿ: ಕಲ್ಮಾಡಿ ಶ್ರೀ ಬಗ್ಗುಪಂಜುರ್ಲಿ ದೈವಸ್ಥಾನದ ಮುಂದಿನ ಮೂರು ವರ್ಷಗಳ ಅವಧಿಗೆ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಸಾಧು ಸಾಲ್ಯಾನ್ ಪುನರ್ ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷರು : ಚಂದ್ರಶೇಖರ್ ಸೇರಿಗಾರ್ ಬಗ್ಗುಮನೆ ಸಾನಿಕ, ಪ್ರೇಮ್ ನಾಥ್ ಕಲ್ಮಾಡಿ, ಉಪಾಧ್ಯಕ್ಷರು : ದಯಾಕರ್.ವಿ. ಸುವರ್ಣ, ಶೇಖರ್ ಎನ್.ಕೋಟ್ಯಾನ್,ಸುಂದರ್ ಜೆ.ಕಲ್ಮಾಡಿ, ಚಂದ್ರಕಾಂತ್ ಕಲ್ಮಾಡಿ ಆಯ್ಕೆ ಆದರು. ಪ್ರಧಾನ ಕಾರ್ಯದರ್ಶಿ: ಸತೀಶ್ ಕೊಡವೂರು, ಜತೆ ಕಾರ್ಯದರ್ಶಿ : ರೋಹಿತ್ ಸುವರ್ಣ, ಕೋಶಾಧಿಕಾರಿ : […]

ಕರಾವಳಿ ವ್ಯವಹಾರ

ಛಾಯಾಗ್ರಹಣ ಒಂದು ಕಲೆ ಮತ್ತು ವೃತ್ತಿ~ ಪ್ರಕಾಶ್ ಕೊಡಂಕೂರ್

  ಛಾಯಾಗ್ರಹಣ ಒಂದು ಕಲೆ ಮತ್ತು ವೃತ್ತಿ~ ಪ್ರಕಾಶ್ ಕೊಡಂಕೂರ್ ಉಡುಪಿ: ಛಾಯಾಗ್ರಹಣ ಎನ್ನುವುದು ಕೇವಲ ನೆನಪುಗಳನ್ನು ಸೆರೆಹಿಡಿಯುವ ಕೆಲಸವಲ್ಲ. ಅದೊಂದು ಅದ್ಬುತವಾದ ಕಲೆ. ಇಂದಿನ ದಿನಮಾನಗಳಲ್ಲಿ ಛಾಯಾಗ್ರಹಣಕ್ಕೆ ವಿಶೇಷವಾದ ಸ್ಥಾನ ಇದೆ ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯದ ನೇತೃತ್ವದಲ್ಲಿ ಪ್ಯಾನಾಸೋನಿಕ್ ಲುಮಿಕ್ಸ್‌ ಕಾರ‍್ಯಗಾರವನ್ನು ಕ್ಯಾಮೆರಾ ಕ್ಲಿಕ್ ಮಾಡುವ ಮೂಲಕ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಕೊಡಂಕೂರು ಚಾಲನೆ ನೀಡಿ ಮಾತನಾಡಿದರು.  ಈ ಸಂದರ್ಭದಲ್ಲಿ ಎರಿಯಾ ಸೇಲ್ಸ್ ಮ್ಯಾನೇಜರ್ ಚೇತನ್, ಮೆಂಟರ್ ಗಳಾದ ರಘು, […]

eMedia Kannada  @2025. All Rights Reserved.