• Home  
  • ಅರಶಿನ ಗುಂಡಿ ಜಲಪಾತದಲ್ಲಿ ಯುವಕ ಜಾರಿಬಿದ್ದ ಪ್ರಕರಣ – ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ
- ಅಪರಾಧ

ಅರಶಿನ ಗುಂಡಿ ಜಲಪಾತದಲ್ಲಿ ಯುವಕ ಜಾರಿಬಿದ್ದ ಪ್ರಕರಣ – ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

Share: ಅರಶಿನ ಗುಂಡಿ ಜಲಪಾತದಲ್ಲಿ ಯುವಕ ಜಾರಿಬಿದ್ದ ಪ್ರಕರಣ – ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ ಉಡುಪಿ : ಉಡುಪಿ ಜಿಲ್ಲೆಯ ಕೊಲ್ಲೂರಿನ‌ ಅರಶಿನ ಗುಂಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಭದ್ರಾವತಿ ಮೂಲದ ಯುವಕ ನಾಪತ್ತೆಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಯುವಕನ ಮೃತದೇಹ ಪತ್ತೆಯಾಗಿದೆ.  ಕಳೆದ ಜುಲೈ 23ರಂದು ಕಾಲು ಜಾರಿ‌ ಬಿದ್ದು, ಶರತ್ ನಾಪತ್ತೆಯಾಗಿದ್ದು, ಇಂದು ಶರತ್ ಮೃತದೇಹ ಅರಶಿನ ಗುಂಡಿ‌ ಜಲಪಾತದಿಂದ 200 ಮೀಟರ್ ಕೆಳಗಡೆ ಪತ್ತೆಯಾಗಿದೆ.  ಮೊನ್ನೆಯಿಂದಲೂ ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, […]

ಅರಶಿನ ಗುಂಡಿ ಜಲಪಾತದಲ್ಲಿ ಯುವಕ ಜಾರಿಬಿದ್ದ ಪ್ರಕರಣ – ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ

ಉಡುಪಿ : ಉಡುಪಿ ಜಿಲ್ಲೆಯ ಕೊಲ್ಲೂರಿನ‌ ಅರಶಿನ ಗುಂಡಿ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಭದ್ರಾವತಿ ಮೂಲದ ಯುವಕ ನಾಪತ್ತೆಯಾಗಿದ್ದ ಘಟನೆಗೆ ಸಂಬಂಧಿಸಿದಂತೆ ಯುವಕನ ಮೃತದೇಹ ಪತ್ತೆಯಾಗಿದೆ.

 ಕಳೆದ ಜುಲೈ 23ರಂದು ಕಾಲು ಜಾರಿ‌ ಬಿದ್ದು, ಶರತ್ ನಾಪತ್ತೆಯಾಗಿದ್ದು, ಇಂದು ಶರತ್ ಮೃತದೇಹ ಅರಶಿನ ಗುಂಡಿ‌ ಜಲಪಾತದಿಂದ 200 ಮೀಟರ್ ಕೆಳಗಡೆ ಪತ್ತೆಯಾಗಿದೆ.

 ಮೊನ್ನೆಯಿಂದಲೂ ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಸ್ಥಳೀಯರು ಕಾರ್ಯಚರಣೆ ನಡೆಸುತ್ತಿದ್ದು, ಮೃತದೇಹದ ಹುಡುಕಾಟದಲ್ಲಿ ತೊಡಗಿದ್ದರು.

 ಶರತ್ ಸ್ನೇಹಿತರು ಹಾಗೂ ಶರತ್ ಮನೆಯವರೂ ಕೂಡ ಘಟನಾಸ್ಥಳದಲ್ಲೇ ಬೀಡುಬಿಟ್ಟಿದ್ದರು. ಬಂಡೆ ಕಲ್ಲಿನ ಒಳಗಡೆ ಶರತ್ ಮೃತದೇಹ ಸಿಲುಕಿ ಹಾಕಿಕೊಂಡಿದ್ದರಿಂದ ಸುಮಾರು ದಿನಗಳ ಕಾಲ‌ ಕಾರ್ಯಾಚರಣೆ ಮುಂದುವರೆದಿತ್ತು.

Leave a comment

Your email address will not be published. Required fields are marked *

eMedia Kannada  @2025. All Rights Reserved.