Tag: Karavali

ಅಪರಾಧ

ಸುರತ್ಕಲ್; ಯುವತಿಯನ್ನು ತಡೆದು ಕಿರುಕುಳ ಆರೋಪ, ದೂರು ದಾಖಲು

ಸುರತ್ಕಲ್: ಯುವತಿಯನ್ನು ರಸ್ತೆ ಮಧ್ಯೆ ಚುಡಾಯಿಸಿ ಕಿರುಕುಳನೀಡಿ, ಹಣದ ಆಮಿಷ ತೋರಿಸಿ ಅನುಚಿತವಾಗಿ ವರ್ತಿಸಿದ ಘಟನೆ ಬಗ್ಗೆ ವರದಿಯಾಗಿದೆ. ಕೃಷ್ಣಾಪುರ 8ಎ ಬ್ಲಾಕ್ ನಲ್ಲಿ ಯುವಕ ಫರಾಜ್ ಬೈಕ್ ನಲ್ಲಿ ಬಂದು ಯುವತಿಗೆ ಚುಡಾಯಿಸಿದ್ದಾನೆಂದು ಆರೋಪಿಸಲಾಗಿದೆ. ಭಯಭೀತಳಾಗಿ ಯುವತಿ ಕಿರುಚಿದಾಗ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು.ಸ್ಥಳೀಯರನ್ನು ಕಂಡ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಕುರಿತು ಯುವತಿಯ ಮನೆಯವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಪರಾಧ

ಮಂಗಳೂರು; ಮಕ್ಕಳಿಗೆ ವಾಹನ ಕೊಟ್ಟು ಅಪಘಾತವಾದರೆ ಪೋಷಕರ ಮೇಲೆ ಕೇಸ್

  ಮಂಗಳೂರು: ಮಕ್ಕಳು ದ್ವಿಚಕ್ರ ವಾಹನ ಚಲಾಯಿಸಿ ಅಪಘಾತ ನಡೆದರೆ ಹೆತ್ತವರ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ. ದ್ವಿಚಕ್ರ ವಾಹನ ಅಪಘಾತಗಳ ಬಗ್ಗೆ ನಿನ್ನೆ ನಡೆದ ನಗರ ಪೊಲೀಸ್ ಕಮೀಷನರ್ ಅವರ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಅವರು, ಇನ್ನು ಮುಂದೆ ಮಕ್ಕಳು ದ್ವಿಚಕ್ರ ಚಲಾಯಿಸಿ ಅಪಘಾತ ನಡೆಸಿದರೆ […]

ಮಂಗಳೂರು

ಜುಲೈ 8 : ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿಅವರಿಗೆ ಅಭಿನಂದನೆ

ಮಂಗಳೂರು : ರಾಜ್ಯದ ವಿವಿಧ ಪತ್ರಿಕೆಗಳಲ್ಲಿ 12 ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ, 194 ಪುಸ್ತಕಗಳನ್ನು ಹೊರತಂದ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರಿ ಅವರ ಸಪ್ತತಿ ಪ್ರಯುಕ್ತ ಸಾರ್ವಜನಿಕ ಅಭಿನಂದನ ಸಮಾರಂಭ ಜು.8 ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಲಿದೆ ಎಂದು ಪ.ರಾಮಕೃಷ್ಣ ಶಾಸ್ತ್ರಿ ಅಭಿನಂದ ಸಮಿತಿ ಸಂಚಾಲಕ ಸಂಪತ್ ಬಿ. ಸುವರ್ಣ ತಿಳಿಸಿದ್ದಾರೆ. ಅವರು ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿ, 1953 ರಲ್ಲಿ ಪುತ್ತೂರಿನ ಪೋಳ್ಯದಲ್ಲಿ ಜನಿಸಿದ ರಾಮಕೃಷ್ಣ ಶಾಸ್ತ್ರಿಅವರು ಎಳವೆಯಲ್ಲಿಯೇ ಬೆಳ್ತಂಗಡಿ […]

ವಿಡಿಯೋ

ಅಕ್ಕಿ ವಿತರಣೆಯಲ್ಲಿ ಕಾಂಗ್ರೆಸ್‌ ನದ್ದು 50 ಪರ್ಸೆಂಟ್ ಗ್ಯಾರಂಟಿ ಸರಕಾರ ; ಕೋಟಾ ಶ್ರೀನಿವಾಸ್ ಪೂಜಾರಿ

ಉಡುಪಿ: ಅಕ್ಕಿ ಕೊಡುವ ಭರವಸೆ ನೀಡಿದ್ದೀರಿ. ಆದರೆ ಈಗ 5 ಕೆಜಿ ಅಕ್ಕಿಯ ಹಣ ನೀಡಲು ತೀರ್ಮಾನ ಮಾಡಿದ್ದೀರಿ. ಹಾಗಾದರೆ ನಿಮ್ಮದು 50 ಪರ್ಸೆಂಟ್ ಗ್ಯಾರಂಟಿ ಸರ್ಕಾರವಾ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನೆ ಮಾಡಿದ್ದಾರೆ.  ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಮಾಜಿ ಸಚಿವರು, ಕೇಂದ್ರ ಸರಕಾರ ಬಿಪಿಎಲ್ ಇರುವವರಿಗೆ ಪ್ರತಿಯೊಬ್ಬರಿಗೂ ಐದು ಕೆಜಿ ಅಕ್ಕಿ ನೀಡುತ್ತಿದೆ.ಇದಕ್ಕೆ ಒಂದು ತಿಂಗಳಿಗೆ ಕೇಂದ್ರ ಸರಕಾರಕ್ಕೆ 18ರಿಂದ 19 ಸಾವಿರ ಕೋಟಿ ಖರ್ಚಾಗುತ್ತದೆ. ತೆಲಂಗಾಣದಲ್ಲಿ […]

ಪ್ರಚಲಿತ

ಕೊರಂಗ್ರಪಾಡಿ ವಸತಿ ನಿವೇಶನದಲ್ಲಿ ವನಮಹೋತ್ಸವ  

 ಅರಣ್ಯ ಇಲಾಖೆ, ಕರ್ನಾಟಕ ಗೃಹ ಮಂಡಳಿ, ತ್ರಿಷಾ ಕಾಲೇಜು,    ಸಹಯೋಗದೊಂದಿಗೆ ಇಂದು ನೆಬೆಳಿಗ್ಗೆ  ಕರ್ನಾಟಕ ಗೃಹ ಮಂಡಳಿ ವಸತಿ ನಿವೇಶನ ಕೊರಂಗ್ರಪಾಡಿಯಲ್ಲಿ ಆಯೋಜಿಸಿದ “ವನಮಹೋತ್ಸವ ಕಾರ್ಯಕ್ರಮ”ದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುಷ್ಪಾ, ಸದಸ್ಯರಾದ ಲಿವಿತಾ ದೇಸಿ, ಅಮೃತಾ ಪೂಜಾರಿ, ಗೃಹ ಮಂಡಳಿಯ  ಸಹನಾ,  ಹರೀಶ್,   ಅರಣ್ಯಾಧಿಕಾರಿಗಳಾದ ಸುಬ್ರಮಣ್ಯ ಆಚಾರ್ಯ,  ಜೀವನ್ ದಾಸ್ ಶೆಟ್ಟಿ, ಗುರುರಾಜ್ ಕೆ, […]

ಅಪರಾಧ

ದ.ಕ ಮೂಲದ ತಹಶೀಲ್ದಾರ್ ಮನೆಯಲ್ಲಿ ರಾಶಿ ರಾಶಿ ಹಣ

ಬೆಂಗಳೂರು; ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್.ಪುರಂ ತಹಶೀಲ್ದಾರ್ ‘ಅಜಿತ್ ರೈ’ ಬಂಧಿಸಲಾಗಿದೆ. . ತಹಶೀಲ್ದಾರ್​ ಅಜಿತ್ ರೈ ಮನೆ ಮೇಲೆ ನಿನ್ನೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದ ಲೋಕಾಯುಕ್ತ ಪೊಲೀಸರು ಲಕ್ಷಾಂತರ ನಗದು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಲೋಕಾಯುಕ್ತ ಪೋಲಿಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಜಿತ್​ ರೈಗೆ ಸಂಬಂಧಿಸಿದ 10 ಕಡೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 1.90 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, […]

ಕರಾವಳಿ

ಉಡುಪಿ :  ನವೀಕಕೃತ ಶ್ರೀ ಕೃಷ್ಣ ಛತ್ರ  ಕೃಷ್ಣಾರ್ಪಣ

ಉಡುಪಿ :ಪರ್ಯಾಯ ಶ್ರೀ‌ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ತಮ್ಮ ಚತುರ್ಥ ಶ್ರೀ ಕೃಷ್ಣ ಪೂಜಾ ಪರ್ಯಾಯ ಅವಧಿಯಲ್ಲಿ ಕೆನರಾ ಬ್ಯಾಂಕ್ ಮತ್ತು ಭಕ್ತರ ನೆರವಿನೊಂದಿಗೆ ಶ್ರೀ ಕೃಷ್ಣಮಠದ ರಾಜಾಂಗಣಕ್ಕೆ ಹೊಂದಿಕೊಂಡು ಇರುವ  ನವೀಕೃತ ಶ್ರೀ ಕೃಷ್ಣ ಛತ್ರವನ್ನು ಇತರೆ ಮಠಾಧೀಶರ ಉಪಸ್ಥಿತಿಯಲ್ಲಿ ಬುಧವಾರ ಶ್ರೀ ಕೃಷ್ಣನಿಗೆ ಸಮರ್ಪಿಸಿದರು .ಸದ್ರಿ ಛತ್ರವು 1966 ರಲ್ಲಿ ಆಗಿನ ಶ್ರೀಶೀರೂರು ಮಠಾಧೀಶರಿಂದ ನಿರ್ಮಸಲ್ಪಟ್ಟು ಪ್ರಸ್ತುತ ಶಿಥಿಲಗೊಂಡಿತ್ತು . ಇದೀಗ ಸಮಾರು 3.5 ಕೋಟಿ ರೂ ವೆಚ್ಚದಲ್ಲಿ ಸಂಪೂರ್ಣ ನವೀಕರಿಸಲಾಗಿದೆ .ಇದರಲ್ಲಿ […]

ಶಾಲಾ ಕಾಲೇಜು

ವೇಟ್‌ಲಿಫ್ಟಿಂಗ್: ಸಮಗ್ರ ಪ್ರಶಸ್ತಿ ಎತ್ತಿದ ಆಳ್ವಾಸ್

ಮಂಗಳೂರು ವಿ.ವಿ. ಅಂತರ ಕಾಲೇಜು ಪುರುಷ ಮತ್ತು ಮಹಿಳಾ  ಚಾಂಪಿಯನ್‌ಶಿಪ್ ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಪುರುಷ ಮತ್ತು ಮಹಿಳಾ ವಿಭಾಗದ ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜು ಎತ್ತಿ ಹಿಡಿದಿದೆ. ಮಂಗಳೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಕೃಷಿಸಿರಿ ವೇದಿಕೆಯಲ್ಲಿ ಹಮ್ಮಿಕೊಂಡ ಪಂದ್ಯಾವಳಿಯಲ್ಲಿ ಆಳ್ವಾಸ್ ಸಮಗ್ರ ಚಾಂಪಿಯನ್ ಆಯಿತು. ಮಹಿಳಾ ವಿಭಾಗದಲ್ಲಿ ಸತತ ೧೯ನೇ ಬಾರಿ ಚಾಂಪಿಯನ್ ಆದÀ ಆಳ್ವಾಸ್ ಕಾಲೇಜು ತಂಡವು ‘ಶಿರ್ವ […]

ಶಾಲಾ ಕಾಲೇಜು

ಪತ್ರಿಕಾ ದಿನಾಚರಣೆಯಲ್ಲಿ ನಿವೃತ್ತ ಪತ್ರಗಾರ ಸಹಾಯಕ, ಸಾಹಿತಿ ಬೆನೆಟ್ ಜಿ. ಅಮ್ಮನ್ನ

‘ಸುದ್ದಿಯ ಮೂಲ ಶೋಧಿಸಿ, ಸತ್ಯಾಸತ್ಯತೆ ಪರಿಶೀಲಿಸಿ’ ವಿದ್ಯಾಗಿರಿ: ‘ಮೂಲವನ್ನು ಶೋಧಿಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ, ನಿಖರತೆಯನ್ನು ದೃಢಪಡಿಸಿಕೊಂಡ ಬಳಿಕ ಸುದ್ದಿ ಮಾಡಬೇಕು. ಎಂದು ನಿವೃತ್ತ ಪತ್ರಗಾರ ಸಹಾಯಕ, ಸಾಹಿತಿ ಬೆನೆಟ್ ಜಿ. ಅಮ್ಮನ್ನ  ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬುಧವಾರ ನಡೆದ ‘ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸುದ್ದಿಯ ಮೂಲವನ್ನು ಶೋಧಿಸುವ ಪ್ರವೃತ್ತಿ ಕಡಿಮೆಯಾದ ಕಾರಣ, ಸುಳ್ಳು ಸುದ್ದಿಗಳು ಮೇಳೈಸುತ್ತವೆ. ಅದಕ್ಕಾಗಿ ಸುದ್ದಿಯ ಕಾಲಮಾನ, ಸತ್ಯಾಸತ್ಯತೆ ಹಾಗೂ ಅಧಿಕೃತ ಮೂಲವನ್ನು ಪರಿಶೀಲಿಸಬೇಕು […]

eMedia Kannada  @2025. All Rights Reserved.