ಶಿರ್ವ ಪಂಜಿಮಾರು ಶ್ರೀ ವ್ಯಾಘ್ರ ಚಾಮುಂಡಿ ಸನ್ನಿಧಾನದ ಕಾಣಿಕೆ ಡಬ್ಬಿ ಕಳವು ಮಾಡಿದ ಇಬ್ಬರು ಯುವಕರನ್ನು ಸ್ಥಳೀಯ ತಂಡದವರು ಹಿಡಿದು ಶಿರ್ವ ಪೊಲೀಸರಿಗೊಪ್ಪಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಅಪರಿಚಿತ ಯುವಕರಿಬ್ಬರು ಕಾಣಿಕೆ ಡಬ್ಬಿಯನ್ನು ಕಳವು ಮಾಡಿ ಸಮೀಪದ ಕಾಡಿನಲ್ಲಿ ಡಬ್ಬಿ ಒಡೆಯಲು ಪ್ರಯತ್ನಿಸುತ್ತಿದ್ದರು. ಶಬ್ದ ಕೇಳಿದ ಪರಿಸರದ ನಾಗರಿಕರು ಪಂಜಿಮಾರಿನ ಯುವಕರಿಗೆ ಮಾಹಿತಿ ನೀಡಿದ್ದರು. ತಕ್ಷಣ ಯುವಕರ ತಂಡ ಸ್ಥಳಕ್ಕಾಗಮಿಸಿದಾಗ ಓರ್ವ ಬಸ್ಸಿನಲ್ಲಿ ಪರಾರಿಯಾಗಿದ್ದ. ಬೆನ್ನಟ್ಟಿದ ಯುವಕರು ಆತನನ್ನು ಬಂಟಕಲ್ಲಿನಲ್ಲಿ ಇಳಿಸಿ ಕರೆತಂದಿದ್ದಾರೆ. ಮತ್ತೋರ್ವ ಕಾಡಿನಲ್ಲಿ […]
ಗುರುವಾರ (ಜೂನ್ 29) ದಿಂದ ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ ಬೆಂಗಳೂರು: ಕರಾವಳಿ ಕರ್ನಾಟಕ ಭಾಗದಲ್ಲಿ ಜೂನ್ 29ರಿಂದ ಜುಲೈ 3 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರಿನಲ್ಲಿ ಶನಿವಾರದ ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಜೂನ್ 29, ಗುರುವಾರದಂದು ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಅತಿ ಹೆಚ್ಚು (115.6 […]
ರೋಟರಿ ಕ್ಲಬ್ ಶಿರ್ವ 2023-2024 ರ ನೂತನ ಅಧ್ಯಕ್ಷರಾಗಿ ಖ್ಯಾತ ಸಮಾಜ ಸೇವಕ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ. ಫಾರೂಕ್ ಚಂದ್ರನಗರ ಸಮಾಜ ಸೇವೆಯಲ್ಲಿ ಹತ್ತಾರು ಸಾಮಾಜಿಕ ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ತನ್ನದೆ ಆದ ಛಾಪು ಮೂಡಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಜ್ಯ ಮಟ್ಟದ ಹಾಗೂ ರಾಷ್ಟ್ರಿಯ ಮಟ್ಟದ ಪ್ರಶಸ್ತಿ ಪಡೆದಿದ್ದರು.
ಸ್ವಯಂ ಅರಿವು ಅಗತ್ಯ: ಪ್ರೊ. ಗೋಪಾಲಕೃಷ್ಣ ಭಟ್ ಮಿಜಾರು: ನಮನ್ನು ನಾವು ಮೊದಲು ಅರಿತುಕೊಳ್ಳಬೇಕು ಎಂದು ಸಾಹಿತಿ ಪ್ರೊ. ಗೋಪಾಲಕೃಷ್ಣ ಎನ್. ಭಟ್ ಹೇಳಿದರು. ಆಳ್ವಾಸ್ ಎಂಜಿನಿಯರಿAಗ್ ಮತ್ತು ತಂತ್ರಜ್ಞಾನ ಕಾಲೇಜು(ಎಐಇಟಿ) ಹಾಗೂ ಆಳ್ವಾಸ್ ಕಾಲೇಜು ಸಂಸ್ಕೃತ ವಿಭಾಗ, ಸಂಸ್ಕೃತ ಸಂಘ ಹಾಗೂ ಪ್ರಜ್ಞಾ ಜಿಜ್ಞಾಸಾವೇದಿಃ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಂಸ್ಕೃತ ಚಿಂತನ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಜ್ಞಾನ ವೃದ್ಧಿಗೆೆ ಸ್ವಯಂ ಅನಾವರಣ ಮಾಡಬೇಕು. ದೇಹ, ಇಂದ್ರೀಯ, ಮನಸ್ಸು ಸೇರಿ ವ್ಯಕ್ತಿ ಸಂಪೂರ್ಣವಾಗುತ್ತಾನೆ. ಬಾಹ್ಯ ಪ್ರಪಂಚದ ಕಡೆಗ […]
ವಿಟ್ಲ: ಆಟೋ ರಿಕ್ಷಾ ಪಲ್ಟಿಯಾಗಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಣಿಲದಲ್ಲಿ ನಡೆದಿದೆ. ಆಟೋ ಚಾಲಕ ಪಂಬೆತ್ತಾಡಿ ಗ್ರಾಮದ ಚೀಮುಳ್ಳು ನಿವಾಸಿ ಸುದರ್ಶನ್ (35) ಮೃತಪಟ್ಟವರು ಎಂದು ತಿಳಿದು ಬಂದಿದೆ. ಸುದರ್ಶನ್ ಹಾಗೂ ಮತ್ತೋರ್ವ ವ್ಯಕ್ತಿ ಜೂ.26ರ ಸೋಮವಾರ ಸಂಜೆ ಮಾಣಿಲ ಗ್ರಾಮದ ಬಾವಲಿಮೂಲೆಗೆ ತೆರಳುತ್ತಿದ್ದ ವೇಳೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಗಾಯಗೊಂಡ ಚಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆಟೋ ರಿಕ್ಷಾದಲ್ಲಿದ್ದ ಇನ್ನೋರ್ವ ವ್ಯಕ್ತಿಗೆ ಸಣ್ಣ ಪುಟ್ಟ ಗಾಯವಾಗಿರುವುದಾಗಿ ಮಾಹಿತಿ ಲಭಿಸಿದೆ. […]
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಸುವ ಮೋಗವೀರರು ಮೀನುಗಾರಿಕೆಗಾಗಿ ಬಳಸುವ ಬಲೆಗಳನ್ನು ಜೋಡಿಸುವ ಕಾರ್ಯ “ದಾರ” ಭಾನುವಾರ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಾಂಗಣದಲ್ಲಿ ನಡೆಯಿತು. ವರ್ಷಂಪ್ರತಿಯಂತೆ ಉಡುಪಿ ಜಿಲ್ಲೆಯ ಉಚ್ಚಿಲ ಕೇಂದ್ರವಾಗಿಟ್ಟುಕೊಂಡು ಉಚ್ಚಿಲ- ಎರ್ಮಾಳು ವಲಯದ ನಾಡದೋಣಿ ಮೀನುಗಾರರು ಸಾಂಪ್ರ‍್ರದಾಯಿಕ ನಾಡದೋಣಿ ಮೀನುಗಾರಿಕೆಗಾಗಿ “ದಾರ” ಮುಹೂರ್ತ ನಡೆಸಿದ್ದಾರೆ. ಕಳೆದ ವರ್ಷ ಆಗಸ್ಟ್ ೧೫ ರಂದು ನಾಡದೋಣಿ ಮೀನುಗಾರಿಕೆ ಋತು ಕೊನೆಗೊಂಡ ಬಳಿಕ ಮೀನುಗಾರಿಕೆಗೆ ಬಳಸಿದ ಮಾಟುಬಲೆಯನ್ನು ಬಿಡಿಬಿಡಿಯಾಗಿಸಿ ಸಂಗ್ರಹಿಸಿಡುತ್ತಾರೆ. ಹರಿದ […]
ವಿದ್ಯಾಗಿರಿ: ವಿದ್ಯಾರ್ಥಿ ಜೀವನ ಎಂದರೆ ಸ್ವರ್ಗ ಇದ್ದಂತೆ. ಇಲ್ಲಿ ಹಲವಾರು ಆಕರ್ಷಣೆಗಳಿದ್ದರೂ, ನೀವು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಆಳ್ವಾಸ್ ಕಾಲೇಜಿನ ರೆಡ್ ಕ್ರಾಸ್ ಘಟಕ ಮತ್ತು ಆಳ್ವಾಸ್ ಪುನರ್ಜನ್ಮದ ಆಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳಸಾಗಣೆ ವಿರೋಧಿ ದಿನದ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಹೆತ್ತವರು ತಮ್ಮ ಮಕ್ಕಳ ಭವಿಷ್ಯದ ಮೇಲೆ ಅಪಾರ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ, […]
ನಾಯಕತ್ವ ಇದ್ದಲ್ಲಿ ಗುರಿ ಸ್ಪಷ್ಟ: ವಿವೇಕ್ ಆಳ್ವ ವಿದ್ಯಾಗಿರಿ(ಮೂಡುಬಿದಿರೆ): ‘ನಾಯಕತ್ವ ಗುಣ ಇದ್ದವರಲ್ಲಿ ಗುರಿ ಸ್ಪಷ್ಟವಾಗಿರುತ್ತದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕೇಂದ್ರೀಯ ಶಾಲೆಯ ೨೦೨೩-೨೪ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು. ನಾಯಕತ್ವ ಗುಣವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವುದರಿಂದ ಸಮಾಜದಲ್ಲಿ ಉತ್ತಮ ಪ್ರಜೆ ಆಗಬಹುದು. ಶಾಲಾ ಹಂತದಲ್ಲೇ ನಾಯಕತ್ವ ವಹಿಸಿ ಜವಾಬ್ದಾರಿಯನ್ನು ನಿಭಾಯಿಸಿ ಎಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ನಾಯಕತ್ವ ಗುಣವನ್ನು […]