ಹವಾಮಾನ ಬದಲಾವಣೆಯ ಕುರಿತು ಜಾಗೃತಿಗಾಗಿ ಪ್ರೊ.ಜಯಂತ್ ಮಹಾಜನ್ ಭಾರತದಾದ್ಯಂತ ಸೈಕ್ಲಿಂಗ್ (Manipala) ಮಣಿಪಾಲ: ನಾವು ವೈಯಕ್ತಿಕವಾಗಿ ನಮ್ಮ ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಿದರೆ, ಹವಾಮಾನ ಬದಲಾವಣೆಯನ್ನು ತಡೆಗಟ್ಟುವಲ್ಲಿ ನಾವು ಒಟ್ಟಾಗಿ ಶ್ರಮಿಸಬಹುದು ಎಂದು ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮೂಡಿಸಲು ಭಾರತದಾದ್ಯಂತ ಸೈಕ್ಲಿಂಗ್ ಮಾಡುತ್ತಿರುವ ಪ್ರೊ. ಜಯಂತ್ ಮಹಾಜನ್ ಹೇಳಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (Gandhian Centre for Philosophical Arts and Sciences)(ಜಿಸಿಪಿಎಎಸ್) ಮತ್ತು ಜಿಯೋಪಾಲಿಟಿಕ್ಸ್ ವಿದ್ಯಾರ್ಥಿಗಳೊಂದಿಗೆ ಸಂವಾದ […]
ಮಣಿಪಾಲ: ಮಣಿಪಾಲ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಾಫಿಕಲ್‌ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಸೌಹಾರ್ಧ ಗೀತ, ಗಾಯನ (Manipala) ಮಣಿಪಾಲ:ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಸೌಹಾರ್ದ ಗೀತೆಗಳ ಗಾಯನ ಕಾರ್ಯಕ್ರಮ ನೆರವೇರಿತು. ಕವಿ ಮೂಡ್ನಾಕೋಡು ಚಿನ್ನಾಸ್ವಾಮಿ ಕವಿತೆ ಹಾಡುತ್ತಾ ಮಾತನಾಡಿದರು. ನಮ್ಮ ಎಲುಬಿನ ಹಂದರದಲ್ಲಿಯೇ ಮಂದಿರವಿದೆ. ಅಲ್ಲಿ ನಾವು ಆರಾಧಿಸುವ ದೇವರಿದ್ದಾನೆ. ಅವನನ್ನು ಹೊರಗೆ ಹುಡುಕುವ ವ್ಯರ್ಥ ಪ್ರಯತ್ನ ಮಾಡುವ ಬದಲು ನಮ್ಮೊ ಳಗೆ ಇರುವ ರಾಮನನ್ನು ಅಲ್ಲಾನನ್ನು ಮತ್ತು ಯೇಸುವನ್ನು ಕಂಡುಕೊಂಡು ಸೌಹಾರ್ಧತೆಯಿಂದ ಬದುಕಬೇಕು ಎಂದು ಏಕತಾರಿ ಗಾಯಕರಾದ ನಾದ ಮಣಿನಾಲ್ಕೂರ್ ನುಡಿದರು. ಅವರು ಕವಿ ಮೂಡ್ನಾಕೋಡು ಚಿನ್ನಾಸ್ವಾಮಿ ಅವರ ಈ ಕವಿತೆಯನ್ನು ಹಾಡುತ್ತಾ ಈ ಮಾತುಗಳನ್ನು ಹೇಳಿದರು. ಮಕ್ಕಳಲ್ಲಿ ಕನಸುಗಾರರಾಗಿ, ಕನಸು ನನಸು ಮಾಡುವಂತ ಹುಡುಗ ಹುಡುಗಿಯರಾಗಿ ಎಂದು ಹಾಡಿದರು. ನಾಡಿನ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಅನೇಕ ಗೀತೆಗಳನ್ನು ಪ್ರಸ್ತುತ ಪಡಿಸಿದ ಅವರು, ಸಂಗೀತದ ಮೂಲಕ ಮನಸ್ಸನ್ನು ಪರಿವರ್ತಿಸಿ ಉತ್ತಮ ಸಮಾಜವನ್ನು ನಿರ್ಮಿಸುವ ಸಣ್ಣ ಪ್ರಯತ್ನ ತನ್ನದು ಎಂದರು. ೨೦೧೮ರಿಂದ ಕರ್ನಾಟಕದಾದ್ಯಂತ ಸಂಚರಿಸುತ್ತಾ ತಮ್ಮ ಭಾವೈಕ್ಯ ಹಾಡುಗಳ ಮೂಲಕ ಮನೆ ಮಾತಾಗಿರುವ ನಾದ ಮಣಿನಾಲ್ಕೂರು ಅವರು ಒಂಬತ್ತು ವರ್ಷಗಳಿಂದ ಕತ್ತಲ ಹಾಡು, ಏಳು ವರ್ಷಗಳಿಂದ ತತ್ವ ಮತ್ತು ಅನುಭಾವಿ ಹಾಡುಗಳೊಂದಿಗೆ ಪ್ರಯಾಣವನ್ನು ನಡೆಸಿದ್ಧಾರೆ. ಈ ಸಂದರ್ಭದಲ್ಲಿ ತೋರು ಸದ್ಗುರುವೇ, ಮಣ್ಣಿಗೆ ವಂದನೆ ಮುಗಿಲಿಗೆ ವಂದನೆ, ಕನಸುಗಾರರು ನಾವು ಕನಸುಗಾರರು, ಏಕಾಂಗಿಯಾಗಿ ಹೊರಡು ಮತ್ತು ಅನೇಕ ಹಾಡುಗಳನ್ನು ಪ್ರಸ್ತುತ ಪಡಿಸಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಇದೇ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಡಾ. ಐಡಾ, ಅಧ್ಯಾಪಕಿ ಶ್ರೀಮತಿ ಲಕ್ಷ್ಮಿ ಸುಬ್ರಮಣ್ಯ ಬಾಸ್ರಿ, ಅಕಾಡೆಮಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.