ನಿಧನ
ಮಾರ್ಪಳ್ಳಿ : ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಪಾದೂರು ವೇದವ್ಯಾಸ ತಂತ್ರಿ ನಿಧನ (Marpalli: Retired Syndicate Bank employee Padur Vedavyasa Tantri passes away)
ಮಾರ್ಪಳ್ಳಿ : ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಪಾದೂರು ವೇದವ್ಯಾಸ ತಂತ್ರಿ ನಿಧನ (Udupi) ಉಡುಪಿ: ಮಾರ್ಪಳ್ಳಿ ನಿವಾಸಿ, ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಪಾದೂರು ವೇದವ್ಯಾಸ ತಂತ್ರಿ(80) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಇವರು ಮಾರ್ಪಳ್ಳಿ ಚೆಂಡೆ ಬಳಗದ ಅಧ್ಯಕ್ಷರಾಗಿ, ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಅಭಿವೃದ್ಧಿಯಲ್ಲಿ, ನಾಗರೀಕ ಸಮಿತಿಯ ಸದಸ್ಯರಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಒಂದು ಗಂಡು, ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

